ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ – ಡಾ, ಎ.ಬಿ ಸಿಂದಗಿ ಅಭಿಪ್ರಾಯ.
ಮೋರಟಗಿ ನ.17

ಸಿಂದಗಿ ತಾಲ್ಲೂಕಿನ ಮೋರಟಗಿ ಗ್ರಾಮದ ವಿದ್ಯಾರ್ಥಿಗಳು ಶ್ರದ್ಧೆ, ದೃಢ ಸಂಕಲ್ಪ ಮತ್ತು ಪ್ರಾಮಾಣಿಕತೆ ಯಿಂದ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ. ವಿದ್ಯೆಯ ಜೊತೆಗೆ ಸಂಸ್ಕಾರ ಬೆಳೆಸಿ ಕೊಳ್ಳಬೇಕು ಎಂದು ಡಾ, ಎ.ಬಿ ಸಿಂದಗಿಯವರು ಅಭಿಪ್ರಾಯ ಪಟ್ಟಿದ್ದಾರೆ. ಮೋರಟಗಿಯ ಶ್ರೀ ಸಿದ್ಧರಾಮೇಶ್ವರ ಕಲಾ ಪದವಿ ಮಹಾವಿದ್ಯಾಲಯದ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು ಇತ್ತಿಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಗೌರವ ಕಣ್ಮರೆಯಾಗುತ್ತಿದೆ ಯಾರು ಗುರುವಿಗೆ ವಿನಯತೆ ತೋರುತ್ತಾರೋ ಅವರು ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ, ವಿ.ಸಿ ಗೋಲಾರವರು ವಿದ್ಯಾರ್ಥಿಗಳು ಆತ್ಮವಿಸ್ವಾಸ ಬೆಳೆಸಿ ಕೊಳ್ಳುವುದರ ಜೊತೆಗೆ ದೃಢ ಸಂಕಲ್ಪ ಮಾಡಿ ಜೀವನದಲ್ಲಿ ಮುನ್ನಡೆಬೇಕು ಎಂದರು. ಅಲ್ಲದೆ ಇತಿಹಾಸ ಉಪನ್ಯಾಸಕರಾದ ಶ್ರೀ ರಾಜಶೇಖರ ಕಂಬಾರ ಅವರು ವ್ಯಕ್ತಿತ್ವದ ಜೋತೆಗೆ ನಿಮ್ಮ ತಂದೆ-ತಾಯಿಯರ ನಂಬಿಕೆಯನ್ನು ಉಳಿಸಿ ಸಮಾಜದಲ್ಲಿ ಗೌರವಯುತವಾಗಿ ಬದುಕಿ ಎಂದರು. ಉಪನ್ಯಾಸಕಿ ಎಸ್.ಎಮ್ ಹರನಾಳ ಅವರು ಶಿಸ್ತಿನ ಜೊತೆಗೆ ಸಹನೆ ಮತ್ತು ಸಮಯ ಪಾಲನೆ ಮುಖ್ಯವಾದದ್ದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ನರಾದ ಶ್ರೀ ಬಿ.ಆಯ್ ಮಸಳಿಯವರು ವಹಿಸಿ ಕೊಂಡರು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರಿ ಎಮ್.ಎಸ್ ಪಾಟೀಲರವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಸಿದ್ಧನಗೌಡ ಪಾಟೀಲ್, ವಿ.ಎಸ್ ಪಾಟೀಲ್, ಎಸ್.ಎಂ ಸಿಂಗಾಡಿ, ಡಿ ಎಸ್ ಬಳಗುಂಪಿ, ವಾಯ್,ಡಿ ನಾಟಿಕಾರ, ಬಿ.ಆರ್ ಬಿರಾದಾರ ಎಸ್.ಎಸ್ ಬಿರಾದಾರ ಇದ್ದರು ಕುಮಾರಿ ನಿಶಾತ್ ಅಂಜುಮ ಪ್ರಾರ್ಥಿಸಿದರು ಶ್ರೀಮತಿ ವಿ.ಎಸ್ ಶಹಾಪೂರ ನಿರೂಪಿಸಿದರು ಎಸ್.ಎಸ್ ಬಿರಾದಾರ ಸ್ವಾಗತಿಸಿದರು ಎಸ್.ಎಂ ಹರನಾಳ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ,ದೇವರ ಹಿಪ್ಪರಗಿ,