“ನರೇಗಾ” ಬಹು ದೊಡ್ಡ ಹಗರಣ ವಿರುದ್ಧ – ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ರಾಜ್ಯ ಘಟಕ ದಿಂದ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ.
ಹಿರಿಯೂರು ನ.17
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಮುಂದೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ರಾಜ್ಯ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ಧರ್ಮಪುರ, ಕರಿಯಾಲ,ದಿಂಡಾವರ, ಪಿ.ಡಿ ಕೋಟೆ, ಈಶ್ವರಗೆರೆ, ಬಬ್ಬುರು, ಇನ್ನೂ ಮುಂತಾದ ಗ್ರಾಮ ಪಂಚಾಯಿತಿಗಳಲ್ಲಿ ಬಹು ದೊಡ್ಡ ಹಗರಣ ನಡೆದಿದ್ದು ಇದರ ವಿರುದ್ಧ ಇಂದು ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಚಿತ್ರದುರ್ಗ ಜಿಲ್ಲೆಯ ದಲಿತ ಸಾಹಿತ್ಯ ಪರಿಷತ್, ಜಿಲ್ಲಾಧ್ಯಕ್ಷರು ಆದ ಶ್ರೀ ಶಿವಮೂರ್ತಿ.ಟಿ ಕೋಡಿಹಳ್ಳಿ ರವರು ಮಾತನಾಡಿ ಈ ಹಗರಣದಲ್ಲಿ ಯಾವ ಯಾವ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಲ್ಲರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಂಡು ಅವರನ್ನು ಅಮಾನತ್ತು ಮಾಡಬೇಕಾಗಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳ ಗಮನಕ್ಕೆ ತಂದು ನಂತರ ಸಹಾಯಕ ನಿರ್ದೇಶಕರಾದ ಶ್ರೀ ಶಿವಮೂರ್ತಿ ರವರಿಗೆ ಮನವಿ ಮಾಡಿದರು.
ಈ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷರು ಆದ ಡಾ. ಎಸ್. ಆರ್ ರಾಘವೇಂದ್ರ, ರಾಜ್ಯ ಉಪಾಧ್ಯಕ್ಷರು ಆದ ಶ್ರೀ ಸರ್ವೇಶ್ ಕುಮಾರ್ ಬಿ.ಸಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆದ ಶ್ರೀ ಅಪ್ಪಾಜಿ.ಎನ್, ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಅಧ್ಯಕ್ಷರು ಆದ ಶ್ರೀ ಮೋಹನ್ ಕುಮಾರ್, ರಾಮಲಿಂಗಯ್ಯ, ಹನುಮಂತರಾಯಪ್ಪ, ನಾಗಪ್ಪ, ರಂಜಿತ್, ಮಂಜಪ್ಪ, ರಾಜಶೇಖರ್ ಮರಿಗೌಡರು,ಮಂಜುನಾಥ ಸ್ವಾಮಿ.ಟಿ, ಮೊಹಮದ್ ಅಬ್ರಾರ್, ಹೃತಿಕ್, ಪರಂಕುಶ.ಆರ್ ಪಾಲ್ಗೊಂಡಿದ್ದರು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ