ಬಯಲು ಶೌಚ, ನಮ್ಮ ಸಂಸ್ಕೃತಿಯಲ್ಲ – ಗುಳೇದಗುಡ್ಡ.
ನರೇಗಲ್ ನ.17
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಬಯಲು ಶೌಚ ಆಧುನಿಕ ನಾಗರಿಕತೆ ಸಂಸ್ಕೃತಿಯಲ್ಲ. ಸರಕಾರ ವೈಯಕ್ತಿ ಗೃಹ ಶೌಚಾಲಯಗಳ ಮೇಲೆ ಅನುದಾನ ನೀಡುತ್ತಿದೆ. ಅದರ ಸದುಪಯೋಗ ಪಡೆದು ಸುಸಂಸ್ಕೃತ ನಾಗರಿಕ ಸಮಾಜ ನಿರ್ಮಿಸ ಎಂದು. ಪ್ರಾಂಶುಪಾಲರಾದ ಎಸ್.ಎಲ್ ಗುಳೆದಗುಡ್ಡ ಅಭಿಪ್ರಾಯ ವ್ಯಕ್ತಪಡಿಸಿದರು.ಎಸ್.ಎಂ.ಬಿ.ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ನರೇಗಲ್, ಎನ್ ಎಸ್ ಎಸ್ ಘಟಕ 1 ಹಾಗೂ 2 ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಜಾಥಾ ಹಾಗೂ ಸ್ವಚ್ಚತಾ ಅಭಿಯಾನದ ಅಡಿಯಲ್ಲಿ ಬಯಲು ವಿಸರ್ಜನೆ ತ್ಯಜಿಸಿ, ಶೌಚಾಲಯ ಬಳಸಿ ಅಭಿಯಾನದ ಜಾತಾ ಉದ್ಘಾಟಿಸಿ, ಶೌಚಾಲಯ ಇರುವ ಮನೆ ಅರಮನೆ, ಶೌಚಾಲಯ ಇಲ್ಲದ ಮನೆ ಸೆರೆಮನೆ ಯಾಗಿದೆ. ಪ್ರತಿಯೊಬ್ಬ ನಾಗರಿಕರು ಶೌಚಾಲಯವನ್ನು ಬಳಸಿ ಕಾಯಿಲೆಗಳಿಂದ ಮುಕ್ತ ವಾಗಬೇಕಾಗಿದೆ. ಸುಸಂಸ್ಕೃತ ನಾಗರೀಕರು ಬಯಲು ಶೌಚ ಮಾಡದೆ ನಾವು ಸುಸಂಸ್ಕೃತರು ಎಂದು ಸಾಬೀತು ಪಡಿಸ ಬೇಕಿದೆ. ಪರಿಸರ ಸ್ವಚ್ಛ, ಮತ್ತು ಹಸಿರಾಗಿದ್ದರೆ, ರೋಗ ಮುಕ್ತವಾಗುತ್ತದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಟ್ಟಣ ಪಂಚಾಯತ ಉಪಾಧ್ಯರಾದ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ. ಕೇಂದ್ರ ಸರಕಾರದ ಮಹತ್ವದ ಸ್ವಚ್ಛ ಭಾರತ ಯೋಜನೆ ಯಶಸ್ಸು ಪ್ರತಿಯೊಬ್ಬ ನಾಗರೀಕರ ಮೇಲಿದೆ. ಪ್ರತಿಯೊಂದು ಗ್ರಾಮ, ನಗರಗಳಲ್ಲಿ ಬಯಲು ಶೌಚ ಮುಕ್ತ ಎಂದು ಸಾಧಿಸಬೇಕಿದೆ. ಶೌಚಾಲಯ ಇಲ್ಲದಿದ್ದರೆ ಅವಮಾನ, ಇದ್ದರೆ ಮಾನ ಎಂಬ ಸಂಗತಿಯನ್ನು ನಾವು ಅರಿಯಬೇಕಿದೆ. ಶೌಚಾಲಯ ಬಳಸುವ ಸಂಸಾರ ಕಾಯಿಲೆಗಳಿಂದ ಬಲುದೂರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೋಡಿಕೊಪ್ಪ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂರಾರು ವಿದ್ಯಾರ್ಥಿಗ ಳೊಂದಿಗೆ ಜಾಥಾ ಸಂಚರಿಸಿ ಮನೆ ಮನೆಗಳಿಗೆ ಪುಷ್ಪ ನೀಡಿ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಶಿವಮೂರ್ತಿ ಕುರೇರ, ಸುನಂದಾ ಮುಂಜಿ, ಅಂಜನಮೂರ್ತಿ ಕೆ.ಎಚ್. ಜಯಶ್ರಿ ಮುತಗಾರ, ಬಸವರಾಜ ಪಲ್ಲೇದ , ವಿ.ಕೆ. ಸಂಗನಾಳ, ಕಿರಣ್ ರಂಜಣಗಿ, ಎನ್.ಎಸ್. ಹೊನ್ನೂರ್, ಚಂದ್ರು ಸಂಶಿ, ಎಸ್ ಬಿ . ಕಿನ್ನಾಳ, ಬಿ.ಎಸ್ ಮಡಿವಾಳರ, ಚಂದ್ರು ರಾಥೋಡ, ಬಿ.ಕೆ ಕಂಬಳಿ, ಪ್ರೇಮಾ ಕಾತ್ರಾಳ, ಶ್ವೇತಾ ಹುಣಸಿಮರದ, ಶಂಕರ ನರಗುಂದ, ವಿ.ಸಿಇಲ್ಲೂರ, ಎಂ.ಎಫ್. ತಹಶಿಲ್ದಾರ, ಕೆ.ಎನ್ ಕಟ್ಟಿಮನಿ, ಸಿದ್ದು ನವಲಗುಂದ, ಮಲ್ಲಪ್ಪ ಸಮಗಂಡಿ, ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ