ಜನಸ್ನೇಹಿ ಜನನಾಯಕ ಅಪ್ಪಾ-ಸಾಹೇಬ್ರು…..!

ವಿಜಯಪುರ (10/Dec/2024):

ವಿಜಯಪುರ ಜಿಲ್ಲೆಯ ಜನಸ್ನೇಹಿ ಜನಪ್ರಿಯ ಶಾಸಕರಲ್ಲಿ ಒಬ್ಬರಾದ ವಿಜಯಪುರ ಜಿಲ್ಲೆ ಇಂಡಿ ತಾಲೂಕು ಬಳ್ಳೊಳ್ಳಿ ಹಳ್ಳಿಯಲ್ಲಿ ಜನಿಸಿದ ಶ್ರೀ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ . ಅವರು ಸಣ್ಣ ಹಳ್ಳಿಯಿಂದ ಬಂದ ಹಾಗೂ ತಮ್ಮ ಕುಟುಂಬದಲ್ಲಿಯೇ  ಮೊದಲು ರಾಜಕೀಯ ಜೀವನಕ್ಕೆ ಕಾಲಿಟ್ಟರವರಲ್ಲಿ  ಮೊದಲಿಗರು.

ಮೊದಲಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ  ಜೀವನ ಆರಂಭಿಸಿದ ಶ್ರೀ ಅಪ್ಪಾಸಾಹೇಬ್  ಅವರು ತಮ್ಮ  ನಿಷ್ಪಕ್ಷಪಾತದಿಂದ ಯಾವುದೇ ಲಾಭಗಳನ್ನು ಬಯಸದೆ ನಡೆಸಿದ ಸಮಾಜ ಸೇವಾ ಕಾರ್ಯಗಳಿಂದ ಗುರುತಿಸಿಕೊಂಡಿದ್ದ ಅವರು ಯಾವುದೇ ಸಹಕಾರ ಇಲ್ಲದೆ ಸಮಾಜ ಸೇವೆಯಿಂದ ಅವರಿಗೆ ರಾಜಕೀಯ ಜೀವನದ ಮೊದಲ ಅದೃಷ್ಟದ ಟಿಕೆಟ್ ಸಿಕ್ಕಿದ್ದು 1999 ರಲ್ಲಿ ವಿಜಯಪುರ ಕ್ಷೇತ್ರದಲ್ಲಿ.

ಸೋಲಿನಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ಅವರು 2004 ರಲ್ಲಿ ಮತ್ತೆ ಬಿಜೆಪಿ ಟಿಕೇಟ್ ಪಡೆದುಕೊಂಡರು ಆದರೆ ಈ ಬಾರಿ ಬಿಜೆಪಿ ಇಟ್ಟ ನಂಬಿಕೆ ಉಳಿಸಿಕೊಂಡ ಅಪ್ಪಾಸಾಹೇಬರು ಜನಪರ ನಾಯಕರಾಗಿ ವಿಜಯಪುರಕ್ಕೆ ಹೊಸ ಶಾಸಕರಾಗಿ ಪ್ರತಿಜ್ಞೆ ಸ್ವೀಕರಿಸಿದರು. ಇದೇ ಅವಧಿಯಲ್ಲಿ ಅಪ್ಪಾ ಸಾಹೇಬರು ಸಚಿವರಾಗಿಯೂ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಅಪ್ಪಾಸಾಹೇಬರು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದರು.

ವಿಜಯಪುರ ಶಾಸಕರಾದ ಅಪ್ಪಾಸಾಹೇಬರು ಮೊದಲ ಅವಧಿಯಲ್ಲಿಯೇ ತಮ್ಮ ಆಡಳಿತ ಸುಧಾರಣಾ ಕ್ರಮಗಳಿಂದ ತಮ್ಮ ಪ್ರಾಮಾಣಿಕ  ಆಡಳಿತದ ಮೂಲಕ ಜನ ಮನ ಗಳಿಸಿದರು. ತಮ್ಮ ತೀಕ್ಷ್ಣ ಆಡಳಿತ ಮತ್ತು ಸುಭದ್ರ ಕ್ರಮಗಳಿಂದ ಕರ್ನಾಟಕದ ಹೆಸರುವಾಸಿ ಶಾಸಕರಲ್ಲಿ ಒಬ್ಬರಾದರು.  ಅಷ್ಟೇ ಅಲ್ಲದೆ ವಿಜಯಪುರ ಜಿಲ್ಲೆಯಲ್ಲಿ ಬಡತನದಿಂದ ಕೂಡಿದ ಕುಟುಂಬಗಳ ಬಗೆಗಿನ ಕಾಳಜಿ ಅತ್ಯುತ್ತಮವಾಗಿದ್ದು ವಿಜಯಪುರ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಾಮೂಹಿಕ ವಿವಾಹ ಮಾಡಿಸಿದ ವಿಜಯಪುರದ ಪ್ರಥಮ ಶಾಸಕರು. ಎಷ್ಟೋ ಬಡ ಕುಟುಂಬಗಳಿಗೆ ದಾರಿದೀಪರಾದವರು ಶ್ರೀ ಅಪ್ಪಾಸಾಹೇಬರು. ವಿಜಯಪುರದಲ್ಲಿ ಇವರ ಆಡಳಿತಾವಧಿಯಲ್ಲಿ  ಮಾಡಿದ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಗಣೇಶೋತ್ಸವ, ಪ್ರತಿ ವರ್ಷದಂತೆ ನಡಿಯುತ್ತಿದ್ದ ಗಣೇಶೋತ್ಸವಕ್ಕೆ  ಇವರು ಮೆರಗು ತಂದುಕೊಟ್ಟರು . ವಿಜಯಪುರ ಜಿಲ್ಲೆಗೆ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಬೀದಿ ದೀಪಗಳನ್ನು ಹಾಕಿಸಿದರು.

ಅಗತ್ಯ ಮೂಲಸೌಕರ್ಯಗಳ ಜೊತೆ ಜನತೆಯ ಎಲ್ಲಾ ಕುಂದು ಕೊರತೆಯನ್ನು ಆಲಿಸಿದ ಅಪ್ಪಾಸಾಹೇಬರು ಜನತೆಗೆ ಕೇವಲ ಶಾಸಕರಲ್ಲ ಜನರ ಮಧ್ಯೆ ಇದ್ದು ಅವರ ಕುಂದು ಕೊರತೆಗಳನ್ನು ಈಡೇರಿಸು ಜನಸೇವಕ ಬೇಕು ಎಂದು ತೋರಿಸಿಕೊಟ್ಟವರು, ಅವರೆಂದೂ ಶಾಸಕೆರೆಂದು ಬೀಗಿದವರಲ್ಲ  ಎಲ್ಲಾ ವರ್ಗದ ಜನತೆಗೆ ಸೇವಕರಾದವರು . ಯಾವುದೇ ವ್ಯಕ್ತಿ ತೊಂದರೆ ಎಂದು ಬಂದಾಗ ಅವರಿಗೆ ನಿರಾಶೆ ಮಾಡದೆ ಅವರ ಕುಂದು ಕೊರತೆಗಳನ್ನು ಆಲಿಸಿ ಕ್ರಮ ಕೈಗೊಳ್ಳುವ ವ್ಯಕ್ತಿತ್ವ ಶ್ರೀ ಅಪ್ಪಾಸಾಹೇಬರದು.

ಉತ್ತರ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಸರ್ವೇ ಸಾಮಾನ್ಯವಾಗಿದ್ದು ಅದು ಉತ್ತರ ಕರ್ನಾಟಕದಲ್ಲಿಯೇ ಇದ್ದ ವಿಜಯಪುರ ಜಿಲ್ಲೆಗೆ ಬರದ ಹಾಗೆ ನೋಡಿಕೊಂಡು ತತ್ ಕ್ಷಣದ ಕ್ರಮಗಳನ್ನು ಜಾರಿಗೆ ತಂದು ತನ್ನ ಜನಕ್ಕೆ ನೀರಿನ ಸಮಸ್ಯೆ ಇಲ್ಲದ ಹಾಗೆ ನೋಡಿಕೊಂಡ ಜನಸ್ನೇಹಿ ಶಾಸಕರು. 

ಇಷ್ಟೆಲ್ಲಾ ಆದರೂ ತಮ್ಮ ಆಡಳಿತ ಚಾಣಾಕ್ಷತನದಿಂದ ಗುರುತಿಸಿಕೊಂಡ ಜನಪ್ರಿಯ ಜನಸ್ನೇಹಿ ಶಾಸಕರಾದ ಶ್ರೀ ಅಪ್ಪಾಸಾಹೇಬರಿಗೆ ಬಿಜೆಪಿ ಅವರು ಇವರ ಆಡಳಿತ ಮೆಚ್ಚಿ ಮತ್ತೊಮ್ಮೆ ಬಿಜೆಪಿ ಪರವಾಗಿ ಟಿಕೆಟ್ ನೀಡಿದರು.  ತಮ್ಮ ಆಡಳಿತ ಕ್ರಮಗಳ ಚಾಣಾಕ್ಷತನದಿಂದ ಗುರುತಿಸಿಕೊಂಡ ಅಪ್ಪಾಸಾಹೇಬರ  ಆಡಳಿತ ನೋಡಿದ ಜನರು ಮತ್ತೆ ತಮ್ಮ ಜನಸ್ನೇಹಿ ಶಾಸಕರನ್ನು ಮತ್ತೂಮ್ಮೆ ಅವರೇ  ಆರಿಸಿಕೊಂಡರು.

ಮೊದಲಿನಂತೆಯೇ ತಮ್ಮ ಆಡಳಿತದಲ್ಲಿ ಜನರ ನಿರೀಕ್ಷೆಗಳನ್ನು ಹುಸಿ ಮಾಡದಂತೆ ಆಡಳಿತ ಮಾಡಿದ ಅಪ್ಪಾಸಾಹೇಬರು ಈ ಬಾರಿ ಮೊದಲಿನಕ್ಕಿಂತಲೂ ಹೆಚ್ಚು ಅಭಿವೃದ್ಧಿ ಮಾಡಿದರು.

ವಿಜಯಪುರದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯಗಳ ಅಭಿವೃದ್ಧಿ , ಸ್ಥಾಪನೆ ಮತ್ತು ಜೀರ್ಣೋದ್ಧಾರ ಮಾಡುವಲ್ಲಿ ಯಶಸ್ವಿ ಕಂಡರು, ಇವರ ಅವಧಿಯಲ್ಲಿಯೇ ವಿಜಯಪುರ ಸೆಂಟ್ರಲ್ ಬಸ್ ನಿಲ್ದಾಣ ಸ್ಥಾಪನೆಗೊಂಡಿದ್ದು.

ಸಾರ್ವಜನಿಕ ಹಿತರಕ್ಷಣೆಯ ದೃಷ್ಟಿಯಿಂದ ಪ್ರತೀ ಸರ್ಕಲ್ ಗೆ ಮತ್ತು ಅನಿವಾರ್ಯ ಸ್ಥಳಗಳಲ್ಲಿ CC ಕ್ಯಾಮೆರಾಗಳನ್ನು ಅಳವಡಿಸಲಾಯಿತು.

ಮತ್ತೊಂದು ಮುಖ್ಯವಾದ ವಿಜಯವೆಂದರೆ ಇವರ ಆಡಳಿತ ಅವಧಿಯಲ್ಲಿ ಯಾವುದೇ ತರಹದ ಯಾವುದೇ ಧರ್ಮದ ಭಾವೈಕ್ಯತೆಗೆ ಧಕ್ಕೆಯುಂಟಾಗುವ ಕಾರ್ಯಗಳನ್ನು ಮಾಡಲಾಗಲಿಲ್ಲ ಮತ್ತು ಮಾಡಿಸಿ ಕೊಡಲೂ ಇಲ್ಲ, ಇವರ ಅಧಿಕಾರಾವಧಿಯಲ್ಲಿನ ಮತ್ತೊಂದು ಸಾಧನೆಯೆಂದರೆ ಯಾವುದೆ ರೀತಿಯ ಹಿಂದೂ-ಮುಸ್ಲಿಂ ಸಂಘರ್ಷಗಳು ನಡೆಯಲಿಲ್ಲ ಎಲ್ಲಾ ಧರ್ಮಗಳನ್ನು ಸಮನಾಗಿ ಕಂಡು ಸರ್ವಧರ್ಮ ಸಮನ್ವಯ ತತ್ವ ಪ್ರತಿಪಾದಿಸಿದ ಮಾದರಿ  ಶಾಸಕರಾಗಿ ಹೊರಹೊಮ್ಮಿದರು. ಇವರ ಅಧಿಕಾರಾವಧಿಯಲ್ಲಿ ಅದೆಷ್ಟೋ ಯುವಕರ ಜೀವನದಲ್ಲಿ ದಾರಿದೀಪವಾಗಿದ್ದಾರೆ , ಇಂದಿಗೂ ಇವರು ಯುವಕರಿಗಷ್ಟೇ ಅಲ್ಲದೆ ವಿಧ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶಕರು ಹಾಗೂ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ಆಗುತ್ತಲೇ ಇದ್ದಾರೆ ಆದರೆ ಎಲ್ಲೂ ಅವರು ಇದರ ಬಗ್ಗೆ ಮಾತನಾಡಿಲ್ಲ ಇದೆ ಅವರ ಉನ್ನತ ವ್ಯಕ್ತಿತ್ವಕ್ಕೆ ಸಾಕ್ಷಿ . 

ಇವರ ಅತ್ಯುತ್ತಮ ಸಮಾಜ ಕಾರ್ಯಕ್ಕೆ ಬಿಜೆಪಿ ಮನಸೋತು ಮತ್ತೂಮ್ಮೆ ಟಿಕೆಟ್ ನೀಡಿತ್ತು ಆದರೆ ನಾಲ್ಕನೆಯ ಬಾರಿ ವಿಫಲವಾದರು ಆದರೂ ಅಪಾರ ಜನಮನ್ನಣೆಗಳಿಸಿ, ಇಂದಿಗೂ ಇವರು ಜನ ಮನದ ಸಾಹುಕಾರರಾಗಿದ್ದಾರೆ. ಕೆಲವರು ಅಪ್ಪು ಬಾಸ್ ಎಂದು ತಮ್ಮ ಎದೆಯ ಮೇಲೆ ಅಚ್ಚೆ ಹಾಕಿಸಿಕೊಂಡಿರುವುದು ಉಂಟು. 

ರಾಜಕೀಯ ನಂತರದ ಜೀವನ :

ಅಪ್ಪಾಸಾಹೇಬರು ಜನಪರ ನಾಯಕರು ಎನ್ನುವುದಕ್ಕೆ ಕಾರಣಗಳು ಹಲವು ಇತ್ತೀಚಿಗೆ ವಿಜಯಪುರದಲ್ಲಿ ತಲೆದೋರಿದ್ದ ಭೂ ಮಾಫಿಯಾ ಅಂದರೆ ವಿಜಯಪೂರದ ನಿವಾಸಿಗಳು ವಲಸೆ ಹೋದಾಗ ಅವರ ಹೆಸರಿನ ಮೇಲೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರ ಭೂಮಿಯನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಿದ್ದರು, ಇದರ ಬಗ್ಗೆ ಮೊದಲು ಧ್ವನಿ ಎತ್ತಿದ ಏಕೈಕ ಜನಸ್ನೇಹಿ ನಾಯಕರೆಂದರೆ ಅಪ್ಪಾಸಾಹೇಬರು .

ಅಪ್ಪಾಸಾಹೇಬರು ರಾಜಕೀಯದಲ್ಲಿ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ , ತಮ್ಮ ಸಮಾಜಮುಖಿ ಕಾಳಜಿಯನ್ನು ಎಂದಿಗೂ ಬಿಡರು, ಒಂದು ಮಾತಿದೆ  “ನಾವು ಚಿಕ್ಕವರಿದ್ದಾಗ ಯಾವ ಕಾರ್ಯಗಳನ್ನು ಮಾಡಿ ಕೊಂಡು ಬರುತ್ತೇವೆಯೋ ಅವೆ ನಮಗೆ ಮುಂದೆ ಅಭ್ಯಾಸವಾಗುವವು ” ಹಾಗೆಯೇ ಬದುಕಿ ಬಾಳುತ್ತಿರುವ ಅಪ್ಪಾಸಾಹೇಬರು ಕತ್ನಳ್ಳಿಯಲ್ಲಿ  7 ದಿನಗಳ ಕಾಲ ನಡೆಯುವ ಶ್ರೀ ಗುರು ಚಕ್ರವರ್ತಿ ಸದಾಶಿವ ಜಾತ್ರೆಯಲ್ಲಿ ಸಾಮೂಹಿಕ ವಿವಾಹ , ಅನ್ನದಾಸೋಹ ವಿಧ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಪಯೋಗವಾಗುವ ರಸಪ್ರಶ್ನೆ ಕಾರ್ಯಕ್ರಮಗಳನ್ನು ಮುಂತಾದ ಸಾಮಾಜಿಕ ಸೇವೆಗಳನ್ನು ತಮ್ಮ ಆಡಳಿತಾವಧಿಯಿಂದ ಇಂದಿನವರೆಗೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ, ಇಷ್ಟೇ ಅಲ್ಲದೆ ದನಗಳ ಜಾತ್ರೆ, ಕೃಷಿ ವಸ್ತುಗಳ ಪ್ರದರ್ಶನದಂತಹ ಕೃಷಿಕಾರ್ಯಗಳನ್ನು ಮಾಡುತ್ತಾರೆ ಅಲ್ಲದೆ ಕುಸ್ತಿ, ಕೆಸರಿನಲ್ಲಿ ಓಟದ ಸ್ಪರ್ಧೆ ಗಳಂತಹ ಮನರಂಜನಾ ಕಾರ್ಯಕ್ರಮಗಳನ್ನು ಇಂತಹ ಹತ್ತು ಹಲವಾರು ಕಾರ್ಯಕ್ರಮವನ್ನು ಸತತ ಏಳು ದಿನಗಳ ಕಾಲ ನಡೆಸುತ್ತಾರೆ ಇವೆಲ್ಲವೂ ಇವರ ಸಮಾಜ, ಸಮಾಜದ ಬಗೆಗಿನ ತಮ್ಮ ಕಾಳಜಿ,ಮನೋಭಾವ ಎಂತಹದು ಎಂದು ವ್ಯಕ್ತಪಡಿಸುತ್ತವೆ. 

ಇಷ್ಟೇ ಅಲ್ಲದೇ, ಇವರ ಜೀವನದಲ್ಲಿ ನಡೆದ ಒಂದು ಘಟನೆ : ಇವರು ಪ್ರತಿದಿನ ಬೆಳಿಗ್ಗೆ ವಾಕಿಂಗ್ ಮಾಡುವ ರಸ್ತೆಯಲ್ಲಿ ಒಮ್ಮೆ ಅವರು ಅವರ ಪ್ರತಿದಿನದ ಅಂಗಡಿಯಲ್ಲಿ ಚಹಾ ಕುಡಿಯುವ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಬೆಳಗಿನ ಉಪಹಾರಕ್ಕೆ ಬ್ರೆಡ್ ತಿನ್ನುತ್ತಿರುವುದನ್ನು ಇವರು ನೋಡುತ್ತಾರೆ, ಅವರನ್ನು ನೋಡಿದ ಅಪ್ಪುಸಾಹೇಬರಿಗೆ ಏನೋ ಕುತೂಹಲದಿಂದ ವಿದ್ಯಾರ್ಥಿಗಳಿಗೆ ನೀವು ಬೆಳಗಿನ ಉಪಹಾರಕ್ಕೆ ಬ್ರೆಡ್ ತಿನ್ನುತ್ತಿದ್ದಿರಲ್ವ ಎಂದು ಕೇಳಿದಾಗ ವಿದ್ಯಾರ್ಥಿಗಳು, ಹೌದು ಸಾರ್ ಏನ್ಮಾಡೋದು ಒಂದೊಂದ್ ಸಲ ಹಾಗೆ ಹೋಗ್ತೀವಿ, ಮಧ್ಯಾನ ರಾತ್ರಿನೂ ಒಂದೊಂದ್ಸಲ ಉಪವಾಸ ಇರ್ಬೇಕಾಗುತ್ತೆ ಅಂದಾಗ, ಅವರ ಆ ಮಾತುಗಳು ಅಪ್ಪಾಸಾಹೇಬರ ಮನಸ್ಸಿಗೆ ನಾಟಿಕೊಳ್ಳುತ್ತವೆ. ಮರು ಕ್ಷಣವೇ ಅವರು ತಮ್ಮೆಲ್ಲಾ ಕಾರ್ಯಕರ್ತರನ್ನು ಕರೆಸಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುತ್ತಾರೆ ಅಂದಿನಿಂದ ಪ್ರತೀ ದಿನ ಸೋಮವಾರ ರಾತ್ರಿ ವಿಜಾಪುರದಲ್ಲಿರುವ ಶಿವಾಜಿ ಸರ್ಕಲ್ ನಲ್ಲಿ ವಿಧ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮುಂದೆ ಸಾರ್ವಜನಿಕರಿಗೂ ಅನ್ವಯವಾಗುವಂತೆ ಉಚಿತವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಂಡರು. ಮುಂದೆ ಹೋದಂತೆ ಹಲವಾರು ಸಮಸ್ಯೆಗಳು ಎದುರಾದವು ಕೆಲವರು ಇವರ ಈ ಸಮಾಜ ಸೇವಾ ಕಾರ್ಯಕ್ರಮವನ್ನು ಅಣಕಿಸಿದರು ಯಾವುದಕ್ಕೂ ಧೃತಿಗೆಡದೆ ತಮ್ಮ ಸಮಾಜ ಸೇವೆಯನ್ನು ಮುಂದು ವರೆಸಿದರು ಮುಂದೆ ಅದು ದೊಡ್ಡ ಪ್ರಮಾಣದಲ್ಲಿ ಜನರನ್ನು ಸೆಳೆಯಿತು ಇಂದು ರಾತ್ರಿ ವಿಜಾಪುರದಲ್ಲಿ ಯಾವ ವಿದ್ಯಾರ್ಥಿಯು ಬಡವನು ಉಪವಾಸವಾಗಿ ಮಲಗುವುದಿಲ್ಲ. 

ಅಪ್ಪಾಸಾಹೇಬರು ಅಪಾರ ಕಾರ್ಯಕರ್ತರ ಬಳಗವನ್ನು ಹೊಂದಿದ್ದು ಇದರ ಈ ಎಲ್ಲಾ ಕಾರ್ಯಕ್ರಮಗಳನ್ನು ಅವರ ಕಾರ್ಯಕರ್ತರು ಮುಂದೆ ನಿಂತು ನಡೆಸಿಕೊಂಡು ಬಂದಿರುತ್ತಾರೆ. ಇನ್ನು ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಜನ ಸೇವೆಯೇ ಜನಾರ್ಧನ ಸೇವೆ ಎಂದು ಇಂದಿಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಸಮಾಜ ಸೇವೆ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಅಧಿಕಾರ ಮುಗಿದ ಮೇಲು ಜನತೆಯ ಮೇಲಿನ ಪ್ರೀತಿ, ಕಾಳಜಿ ಹೊಂದಿದ ಇಂತಹ ಸಮಾಜಮುಖಿ ಜೀವಿ ಸರಳ ಸಜ್ಜನಿಕೆಯ ಸೃಜನಶೀಲ ವ್ಯಕ್ತಿತ್ವವುಳ್ಳ ಜನಸ್ನೇಹಿ ಜನಪರ ಜನಪ್ರಿಯ ಮಾಜಿ ಶಾಸಕರಾದ ಶ್ರೀ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಅವರನ್ನು ಪಡೆದ ವಿಜಯಪುರದ ಜಿಲ್ಲೆಯೇ ಧನ್ಯ …..

ಬರವಣಿಗೆ :- ವಿಜಯ ಹೊಸಮನಿ (ವಿದ್ಯಾರ್ಥಿ)

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button