ಯೋಗ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ – ಎಸ್.ಬಿ.ಕೋಟಿ.
ಹುನಗುಂದ ಜೂನ್.22

ಯೋಗ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಇವತ್ತು ಇಡೀ ವಿಶ್ವವೇ ಯೋಗವನ್ನು ಅನುಸರಿಸುತ್ತಿರುವುದಕ್ಕೆ ಭಾರತವೇ ಮುಖ್ಯ ಕಾರಣ ಎಂದು ಶ್ರೀ ಸಿದ್ದಗಂಗಾ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಎಸ್.ಬಿ.ಕೋಟಿ ಹೇಳಿದರು.ತಾಲೂಕಿನ ಕೂಡಲ ಸಂಗಮ ಪು.ಕೇಯಲ್ಲಿರುವ ಶ್ರೀ ಸಿದ್ಧಗಂಗಾ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ೧೦ ನೆಯ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ಸರ್ವ ರೋಗಗಳನ್ನು ನಿವಾರಿಸುವ ದಿವ್ಯ ಔಷಧಿಯನ್ನು ಕೊಟ್ಟ ದೇಶವೇ ನಮ್ಮ ಭಾರತ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಿಂದಲೆ ಯೋಗವನ್ನು ಮೈಗೂಡಿಸಿ ಕೊಳ್ಳಬೇಕು, ನಿತ್ಯ ಯೋಗವನ್ನು ಮಾಡುವುದರಿಂದ ರೋಗಗಳು ನಮ್ಮಿಂದ ದೂರವಾಗಲಿವೆ. ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಣಲು ಸಾಧ್ಯವಾಗಲಿದೆ ಎಂದರು.ದೈಹಿಕ ಶಿಕ್ಷಕರಾದ ಹರೀಶ ಹೂಗಾರ ಮತ್ತು ಬಸವರಾಜ ವಾಲಿಕಾರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಯೋಗಾಸನ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕೆ ಬಿ,ವೆಂಕಟೇಶ ಲೆಕ್ಕಿಹಾಳ, ಉಮೇಶ ಬಂಡಿ ಸೇರಿದಂತೆ ಇನ್ನಿತರ ಶಿಕ್ಷಕರು ಉಪಸ್ಥಿತರಿದ್ದರು. 9 ನೇ. ತರಗತಿಯ ಮಕ್ಕಳು ಸ್ವಾಗತಿಸಿದರು, ಕುಮಾರಿ ಪ್ರಜ್ಞಾ ಬಡ್ಡಿ ಹಾಗೂ ಕುಮಾರಿ ಯಶೋಧಾ ವನಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ. ಬಂಡರಗಲ್ಲ ಹುನಗುಂದ.