ಕಿನ್ನಾಳ್ ರಾಜ್ ರ “ಸಿಂಹರೂಪಿಣಿ” ನ. 29 ಕ್ಕೆ ಬಿಡುಗಡೆ.
ಹುಬ್ಬಳ್ಳಿ ನ.20
ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ಭಕ್ತಿ ಪ್ರಧಾನ ಚಲನ ಚಿತ್ರ ‘ಸಿಂಹರೂಪಿಣಿ’ ಅದ್ದೂರಿ ಗ್ರಾಫಿಕ್ಸ್ ನೊಂದಿಗೆ ತೆರೆಗೆ ಬಂದು ಈಗಾಗಲೇ ಬೆಂಗಳೂರಿನ ಸ್ವಪ್ನ ಚಿತ್ರ ಮಂದಿರದಲ್ಲಿ 25 ದಿನಗಳನ್ನು ಪೂರೈಸಿದೆ. ಸಧ್ಯ ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರವನ್ನು ಇದೆ ನ. 29 ರಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ದೇಶಕ ಕಿನ್ನಾಳ್ ರಾಜ್ ಹೇಳಿದರು. ಅವರು ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ದೊಡ್ಡಬಳ್ಳಾಪೂರ ಸಮೀಪ ಚಿತ್ರೀಕರಣ ನಡೆಸಲಾಗಿದ್ದು ಮಾರಮ್ಮದೇವಿಗೆ ಬಲಿ ಕೊಡುವ ಕಥೆ ಇದಾಗಿದೆ. ಪಕ್ಕಾ ಕಮರ್ಷಿಯಲ್ ಅಂಶಗಳನ್ನು ಅಳವಡಿಸಿ ಕೊಳ್ಳಲಾಗಿದೆ ಯಲ್ಲದೆ ಉತ್ತರ ಕರ್ನಾಟಕದ ಭಾಷೆಯ ಸೊಗಡು ಎರಡನೆ ಭಾಗದಲ್ಲಿ ಕಟ್ಟಿ ಕೊಡಲಾಗಿದೆ. ಅಮ್ಮನ ಪರಮಭಕ್ತ ಕೆ.ಎಂ ನಂಜುಂಡೇಶ್ವರ ಅವರು ಕಥೆ ಬರೆದು ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಯಶ್‌ಶೆಟ್ಟಿ ಅಂಕಿತಾ ಗೌಡ ಯಶಸ್ವಿನಿ, ಪುನಿತ್ ರುದ್ರನಾಗ್, ದಿವ್ಯಾ ಆಲೂರು, ತೆಲುಗಿನ ಹಿರಿಯ ನಟರಾದ ಸುಮನ್. ತಮಿಳು ನಟ ದಿನಾ, ಹರೀಶ್ ರಾಯ್, ನೀನಾಸಂ ಅಶ್ವಥ್, ತಬಲಾ ನಾಣಿ, ದಿನೇಶ್ ಮಂಗಳೂರು, ಭಜರಂಗಿ ಪ್ರಸನ್ನ, ಅವರಂತ ಪ್ಯಾನ್ ಇಂಡಿಯ ಕಲಾವಿದರ ಜೊತೆ ಸಾಗರ್, ವಿಜಯ್ ಚಂಡೂರ್, ವರ್ಧನ್ ತೀರ್ಥಹಳ್ಳಿ, ಮನಮೋಹನ ರೈ. ನವಾಜ್. ಲೋಹಿತ್. ಪಿಳ್ಳಪ್ಪ. ವಿಜಯ್ ಬಸ್ರೂರು, ಸುನಂದಾ ಕಲ್ಬುರ್ಗಿ, ವೇದಾ ಹಾಸನ್, ರಾಧಾ ರಾಮಚಂದ್ರ, ಗುರುಮೂರ್ತಿ, ವೈಭವ್ ನಾಗರಾಜ, ಶಶಿಕುಮಾರ, ಯುವರಾಜ್, ನಂದನ ಜೊತೆಗೆ ಇನ್ನೂ 45 ಕ್ಕೂ ಹೆಚ್ಚಿನ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಹುಬ್ಬಳ್ಳಿ, ಗದಗ ಬೆಟಗೇರಿಯ ಬಾಲ ಪ್ರತಿಭೆ ಸಾಯಿ ಸಮೀಕ್ಷಾ, ಇಳಕಲ್ ಪ್ರತಿಭೆ ಮಲ್ಲಿಕಾರ್ಜುನ ಅವರೂ ಚಿತ್ರದಲ್ಲಿದ್ದು ಉತ್ತರ ಕರ್ನಾಟಕದ ಜನ ಸಿನೇಮಾ ನೋಡಿ ಪ್ರೋತ್ಸಾಹಿಸ ಬೇಕು ಎಂದರು. ಸಂಗೀತ ಆಕಾಶ ಪರ್ವ. ಛಾಯಾಗ್ರಹಣ ಕಿರಣ್ ಕುಮಾರ್, ಸಂಕಲನ ವೆಂಕಿ ಯು ಡಿ ವಿ, ಪಿ.ಆರ್.ಓ ಆರ್ ಚಂದ್ರಶೇಖರ್, ಡಾ, ಪ್ರಭು ಗಂಜಿಹಾಳ್. ಡಾ, ವೀರೇಶ್ ಹಂಡಿಗಿ ಅವರದ್ದಾಗಿದೆ. ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಬಾಲಸುಬ್ರಹ್ಮಣ್ಯಂ ಕಾರ್ಯ ನಿರ್ವಹಿಸಿದ್ದಾರೆ. ರಾಜಶೇಖರ್ .ಮಲ್ಲಿಕ್. ನಿತ್ಯ ದಿನೇಶ್. ತೇಜಸ್ ನಿರ್ದೇಶನ ತಂಡದಲ್ಲಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ನಿರ್ಮಾಪಕರ ಸೋದರ ಚಂದ್ರಶೇಖರ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ, ಮಲ್ಲಿಕಾರ್ಜುನ, ಸಾಯಿ ಸಮೀಕ್ಷಾ ಚಿತ್ರ ತಂಡದ ಸದಸ್ಯರು ಇದ್ದರು.
*****
ವರದಿ:
ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬