ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು – ಜಿ.ಎಸ್.ಪಾಟೀಲ.
ಸೂಡಿ ನ.22
ಇಂದಿನ ಕಾಲದಲ್ಲಿ ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆ ಯುವಂತಹ ಸವಾಲು ಸರ್ಕಾರ ಮುಂದಿದ್ದು, ಖಾಸಗಿ ಶಾಲೆಗಳಿಗಿಂತ ಸರ್ಕಾರ ಶಾಲೆಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮಕ್ಕಳ ಗುಣ ಮಟ್ಟದ ಶಿಕ್ಷಣಕ್ಕೆ ನಾವೆಲ್ಲರೂ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರದ ವಿಶೇಷ ಅನುದಾನ ತಂದು ಗುಣ ಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಗುಣ. ಮಟ್ಟದ ಕೊಠಡಿಗಳಲ್ಲಿ ಮಕ್ಕಳು ಓದುವಂತಾಗ ಬೇಕು ಎಂದು ಶಾಸಕ ಜಿ.ಎಸ್ ಪಾಟೀಲ ಹೇಳಿದರು.ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ‘ಕಸ್ತೂರಬಾ ಗಾಂಧಿ ಬಾಲಿಕಾ ನಿವಾಸ’ ವಿದ್ಯಾಲಯ ಶಾಲೆಯ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಒಂದು ಕೋಟಿ ಎಂಟು ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶ್ರಮಿಸಬೇಕು. ಸಮಾಜದಲ್ಲಿ ಶಿಕ್ಷಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ದೇಶದ ಏಳಿಗೆಗಾಗಿ ಶಿಕ್ಷಕರು ಮಕ್ಕಳಲ್ಲಿ ಶಿಸ್ತು ಬೆಳಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಡಿ.ಡಿ.ಪಿ.ಐ. ಆರ್.ಎಸ್ ಬುರಡಿ ಬಿ.ಇ.ಓ ಆರ್.ಎನ್.ಹುರಳಿ, ತಾಪಂ ಇ.ಓ ಬಸವರಾಜ ಬಡಿಗೇರ, ಪ್ರಭಾರಿ ಸಿ.ಆರ್.ಪಿ. ಪ್ರಕಾಶ ಅಂಬೋರೆ, ಖಾದರಬಿ ಯಮನೂರಸಾಬ ಮುಜಾವರ, ವೀರಣ್ಣ ಶೆಟ್ಟರ, ವಿ.ಬಿ.ಸೊಮನಕಟ್ಟಿಮಠ, ಮಂಜುಳಾ ರೇವಡಿ, ಶರೀಫ್ ಡಾಲಾಯತ, ಶಿವಕುಮಾರ ಪಟ್ಟಣ ಶೆಟ್ಟರ, ಹುಸೇನಸಾಬ ಬೆಳ್ಳಟ್ಟಿ, ಮಲ್ಲಯ್ಯ ಮಲ್ಲಕ ಸಮುದ್ರಮಠ, ರಾಘವೇಂದ್ರ ಕುಲಕರ್ಣಿ, ಅಬ್ದುಲಸಾಬ ಇಟಗಿ, ಶ್ರೀಕಾಂತ ಬಾರಕೇರ, ಬಸವರಾಜ ಶಿರೋಳ,ನುರೊಂದಪ್ಪ ಕೊಳ್ಳೂರ, ಶಂಕರಯ್ಯ ಮಠದ, ವೀರಣ್ಣ ಪಟ್ಟಶೆಟ್ಟರ, ನಿಂಗಪ್ಪ ಕಾಶಪ್ಪನವರ, ಬಿರಾದಾರ ಸೇರಿದಂತೆ ಇತರರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ. ಸಂಕನಗೌಡ್ರ ರೋಣ