ಗುಂಡಾಕರ್ಜಗಿ ಗ್ರಾಮದಲ್ಲಿ ಸಾರಾಯಿ ನಿಷೇಧ.
ಗುಂಡಾಕರ್ಜಗಿ ನ.22
ಮುದ್ದೇಬಿಹಾಳ ತಾಲೂಕಿನ ಗುಂಡಾಕರ್ಜಗಿ ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡುವುದರಿಂದ ಯುವಕರು ಗಂಡಸರು ಕುಡಿದು ಮನೆಗೆ ಬಂದು ಹೆಣ್ಣು ಮಕ್ಕಳಿಗೆ ಹಿಂಸೆಯನ್ನು ನೀಡುತ್ತಾರೆ ಅದು ಅಲ್ಲದೆ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಸರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ ಮನಸ್ಸಿನ ನೆಮ್ಮದಿಯನ್ನು ಕಳೆದು ಕೊಂಡಿದ್ದೇವೆ ಆದುದರಿಂದ ಸಾರಾಯಿ ಮಾರಾಟ ಮಾಡುವವರಿಗೆ ಕಠಿಣ ಕ್ರಮ ಕೈಗೊಂಡು ಸಾರಾಯಿ ಮಾರಾಟ ನಮ್ಮ ಊರಿನಲ್ಲಿ ನಿಷೇಧಿಸಬೇಕಾಗಿ ತಮಲ್ಲಿ ಕೇಳಿ ಕೊಳ್ಳುತೇವೆ ನಾವು ಈಗಾಗಲೇ ದಿನಾಂಕ 09-02-2023 ರಂದು ಮಾನ್ಯ ದಂಡಾಧಿಕಾರಿಗಳಿಗೆ ಮುದ್ದೇಬಿಹಾಳ ಇವರಿಗೆ ಮನವಿ ಸಲ್ಲಿಸಿದ್ದೇವೆ ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಆದಕಾರಣ ಕ್ರಮ ಕೈಗೊಳದ ಪಕ್ಷದಲ್ಲಿ ನಾವು ತೀವ್ರ ಹೋರಾಟ ಮಾಡುತ್ತೇವೆ ಎಂದು ಊರಿನ ಎಲಾ ಸ್ವಸಾಯ ಸಂಘದ ಸದಸ್ಯರು ಹೇಳಿದರು.
ಹೋರಾಟದ ಬಗ್ಗೆ ತಿಳಿದಾಕ್ಷಣ ಮುದ್ದೇಬಿಹಾಳ ಪೊಲೀಸ್ ಠಾಣಾ ಸಿ.ಪಿ.ಐ ಮಲ್ಲಿಕಾರ್ಜುನ್ ತುಳಸಿಗೇರಿ ಹಾಗೂ ಪಿ.ಎಸ್.ಐ ಸಂಜಯ್ ತಿಪ್ಪಾರೆಡ್ಡಿ ತಮ್ಮ ಸಿಬ್ಬಂದಿಯೊಂದಿಗೆ ಗುಂಡಕರ್ಜಗಿ ಗ್ರಾಮಕ್ಕೆ ಬಂದು ಊರಿನ ಎಲ್ಲಾ ಹೆಣ್ಣು ಮಕ್ಕಳು ಗಂಡು ಮಕ್ಕಳನು ಬಸವೇಶ್ವರ ದೇವಸ್ಥಾನದಲ್ಲಿ ಕೂಡಿಸಿ ತುರ್ತಾಗಿ ಸರಾಯಿ ಮಾರಾಟ ನಿಷೇಧಿಸುತ್ತೇವೆ ಎಂದು ಹೇಳಿದರು. ಅದೇ ವೇಳೆ ಮಾರಾಟ ಮಾಡುವವರಿಗೆ ಮಾರಾಟ ಮಾಡಬಾರ ದೆಂದು ಖಡಕ್ಕಾಗಿ ವಾರ್ನಿಂಗ್ ಮಾಡಿದರು. ಒಂದು ವೇಳೆ ಮಾರಾಟ ಮಾಡಿದರೆ ನಾವು ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಪಿಐ ಮಲ್ಲಿಕಾರ್ಜುನ್ ತುಳಸಿಗೇರಿ ತಿಳಿಸಿದರು.
ಅದೇ ವೇಳೆಯಲ್ಲಿ ಎಸ್.ಸಿ ಕಾಲೋನಿಗೆ ಹೋಗಿ ಸಮಸ್ಯೆಗಳನ್ನು ವಿಚಾರಿಸಿದರು ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸಂಗಮೇಶ್ ಚಲವಾದಿ. ಬಿ.ಜಿ ಬನಹಟ್ಟಿ. ಸೋಮನಗೌಡ ಕೌಲಗಿ. ಪ್ರಭು ಠಾಣೆದ. ಆರ್ ಎಸ್ ಪಾಟೀಲ್. ಸಲೀಂ ಹತ್ತಿರಕಿಹಾಳ. ಗ್ರಾಮಸ್ಥರಾದ ದಾನಯ್ಯ ಹಿರೇಮಠ. ವಸಂತ ಬಡಿಗೇರ್. ನಿಂಗನಗೌಡ ಪಾಟೀಲ್. ಶರಣಪ್ಪ ಉಪ್ಪದ್ದಿನ್ನಿ. ಅಪ್ಪಣ್ಣ ರೇವಡಿಹಾಳ. ಪೀರಪ್ಪ ಚಲವಾದಿ. ಶಿವಪ್ಪ ಮಾದರ್. ಹನುಮಂತ ಚಲವಾದಿ. ಸಂಗಮ ಬಿರಾದಾರ್. ಜಯಶ್ರೀ ಹಿರೇಮಠ. ರುದ್ರವ್ವ ಸಂಕನಾಳ. ಲಕ್ಷ್ಮೀಬಾಯಿ ಬಿರಾದಾರ್. ಸುಮಿತ್ರ ಬಿರಾದಾರ್. ಮಲ್ಲವ್ವ ಮದರ್. ಹಾಗೂ ಎಲ್ಲಾ ಊರಿನ ಗ್ರಾಮಸ್ಥರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ