ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಂದಲೇ – ಭಿನ್ನಮತ ಸ್ಪೋಟ.
ಮಾನ್ವಿ ಸ.03





ಕಾಂಗ್ರೆಸ್ ಗೆಲುವಿಗೆ ಮೂಲ ಕಾರಣ ಮುಸ್ಲಿಂ ಮತಗಳೆ ಆದರೆ ನಾಮ ನಿರ್ದೇಶನ ಸದಸ್ಯರ ಆಯ್ಕೆಯಲ್ಲಿ ಮುಸ್ಲಿಂ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರಿಂದಲೇ ಭಿನ್ನಮತ ಸ್ಫೋಟ ಉಂಟಾಗಿದೆ.

ರಾಯಚೂರು ಜಿಲ್ಲೆಯ ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮಾಜದವರು ಶೇಕಡವಾರು 99 ರಷ್ಟು ಮತಗಳು ಶಾಸಕ ಹಂಪಯ್ಯ ನಾಯಕರ ಗೆಲುವಿಗೆ ಕಾರಣವಾಗಿದೆ. ಆದರೆ ಶಾಸಕ ಹಂಪಯ್ಯ ನಾಯಕ ಹಾಗೂ ಸಚಿವ ಬೋಸರಾಜು ಅವರು ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡದೆ ಅನ್ಯಾಯ ಮಾಡಿದ್ದರಿಂದ ಮುಸ್ಲಿಂ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಿರವಾರ ಮತ್ತು ಕವಿತಾಳ ಪಟ್ಟಣ ಪಂಚಾಯಿತಿ ಮಾನ್ವಿ ಪುರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರದಲ್ಲಿ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆ ಮಾಡಿದ್ದು. ಬಂಡಾಯ ಹೇಳುವುದು ಸತ್ಯನಾ ಅಥವಾ ಮುಂಬರುವ ಚುನಾವಣೆಯಲ್ಲಿ ಮುಸ್ಲಿಂ ಸಮಾಜ ಗುನ್ನಾ ಇಡುವುದು ಗ್ಯಾರಂಟಿ ಎಂದು ಮುಸ್ಲಿಂ ಸಮಾಜ ಅಲ್ಲಲ್ಲಿ ಗುಸ್ ಗುಸ್ ಬಿಸಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ