ದಾಸರ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ – ಜಗದೀಶ್ ಬಂಡಿವಡ್ಡರ.
ನರೇಗಲ್ ನ.22
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಮಹಾನ್ ವ್ಯಕ್ತಿ. ಅವರ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಗೃಹ ರಕ್ಷಕ ಜಗದೀಶ ಬಂಡಿವಡ್ಡರ ಹೇಳಿದರು.ಮಹಾರಾಷ್ಟ್ರ ರಾಜ್ಯದ ಚುನಾವಣೆ ಕರ್ತವ್ಯಕ್ಕೆ ಹೋಗಿದ್ದ ನರೇಗಲ್ ಪಟ್ಟಣದ ಗೃಹರಕ್ಷಕ ದಳದಿಂದ ದರಶಿವ ಜಿಲ್ಲೆಯಲ್ಲಿ ಈಚೆಗೆ ಆಚರಣೆ ಮಾಡಲಾದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನಕದಾಸರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದೇ ಅವರಿಗೆ ನೀಡುವ ನಿಜವಾದ ಗೌರವ. ಕನಕದಾಸರು ಸರಳ ಭಾಷೆಯಲ್ಲಿಯೇ ಸಾಮಾಜಿಕ ಚಿಂತನೆಗಳನ್ನು ಬಿತ್ತಿದ್ದಾರೆ. ಅವರ ಸಾಹಿತ್ಯ ಸಮಾಜಕ್ಕೆ ಒಂದು ಮಾರ್ಗ ದರ್ಶಿಯಾಗಿದೆ ಎಂದು ಹೇಳಿದರು. ಸಾಹಿತಿ, ಸಂತರಾಗಿ ಕನಕದಾಸರು, ಸಾಮಾಜಿಕ ಚಿಂತನೆಯನ್ನು ಬಿತ್ತಿದ್ದಾರೆ. ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಕನಕ ದಾಸರ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.ಈ ವೇಳೆ ನರೇಗಲ್ ಸೇರಿದಂತೆ ಗದಗ ಜಿಲ್ಲೆಯ 400 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಇದ್ದರು. ನರೇಗಲ್ ಪಟ್ಟಣದ ಗೃಹರಕ್ಷಕ ದಳದ ಸಿಬ್ಬಂದಿಗಳು ಮಹಾರಾಷ್ಟ್ರ ರಾಜ್ಯದ ಚುನಾವಣೆ ಕರ್ತವ್ಯಕ್ಕೆ ಹೋಗಿದ್ದ ವೇಳೆ ದರಶಿವ ಜಿಲ್ಲೆಯಲ್ಲಿ ಈಚೆಗೆ ಭಕ್ತ ಕನಕದಾಸ ಜಯಂತಿಯನ್ನು ಆಚರಣೆ ಮಾಡಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ