ಟಿ.ಇ.ಎಂ ಉರ್ದು ಪ್ರೌಢಶಾಲೆಯ 38 ನೇ. ವಾರ್ಷಿಕ ಸ್ನೇಹ ಸಮ್ಮೇಳನ ಸನ್ಮಾನ ಸಮಾರಂಭ.
ಕಲಕೇರಿ ಮಾರ್ಚ್.3

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ತೋಹಿದೆ ವಿುಲ್ಲತ್ ವೀುಸ್ಲಿಂ ವಲ್ಫೀರ ಸಂಸ್ಥೆ ಕಲಕೇರಿಯಟಿ.ಇ.ಎಂ.ಉರ್ದು ಪ್ರೌಢಶಾಲೆ ಕಲಕೇರಿ. 38 ನೇ.ವಾರ್ಷಿಕ ಸ್ನೇಹ ಸಮ್ಮೇಳನ ಸನ್ಮಾನ ಸಮಾರಂಭದಸಾನಿಧ್ಯ ಮೌಲಾನಾ ಫೈಜುಲ್ಲಾಸಾಬ ಮದಿನ. ಸಂಸ್ಥೆಯ ಅಧ್ಯಕ್ಷರು ಆರ್. ಎಂ ಬಡೇಘರ. ಡಾ. ಪ್ರಭುಗೌಡ ಲಿಂಗದಹಳ್ಳಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವರು ಯಾವ ವ್ಯಕ್ತಿ ವಿದ್ಯಾವಂತನಾಗುತ್ತಾನು ಅವನಿಗೆ ರಾಜ ಮಹಾರಾಜರು ಕೂಡ ಗೌರವಸ್ಥರ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಪೊಲೀಸ್ ಅಧಿಕಾರಿಗಳಾಗಿ ಶಿಕ್ಷಕರಾಗಿ ಶಿಕ್ಷಣ ಸಂಸ್ಥೆ ಇನ್ನೂ ಹೆಚ್ಚೆಚ್ಚುಗೆ ಬೆಳೆಯಲಿ ಎಂದು ಸಂದರ್ಭದಲ್ಲಿ ಮಾತನಾಡಿದರು.ಮೌಲಾನಾ ಹಾರುನರಶೀದ ಮೊವಿುನ ಉವಿುವ್ರಿು.ನಿವೃತ್ತಿಹೂಂದಲಿರುವ .ಬಿ.ಡಿ.ಬಾಣಕರ ಮುಖ್ಯ ಗುರುಗಳಾದ38 ವರ್ಷಗಳ ಕಾಲ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ಕಾರಣ ನನ್ನ ತಾಯಿ ತಂದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು ಮತ್ತು ವಿದ್ಯಾರ್ಥಿಗಳನ್ನು ಒಂದು ಉನ್ನತ ಮಟ್ಟಕ್ಕೆ ಬೆಳೆಯಬೇಕು ಸಂಸ್ಥೆ ಬೆಳೆಯಬೇಕು ಎಂದು ಮತ್ತು ನಮ್ಮಲ್ಲಿ ಇದ್ದಂತ ಹಣ ಆಸ್ತಿ ಕಳ್ಳರು ಕದಿಯಬಹುದು ಆದರೆ ನಮ್ಮಲ್ಲಿ ಇದ್ದಂತ ವಿದ್ಯೆಯನ್ನು ಯಾರೆಂದು ಕಳ್ಳತನ ಮಾಡುವುದಕ್ಕೆ ಸಾಧ್ಯತೆ ಇಲ್ಲ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.ನಿವೃತ್ತಿ ಹೊಂದಲಿರುವ ಕರುಣಿಕರು.

ಎನ್.ಎಂ.ಬಡೇಮ್ಮಗೋಳ ಇವರು ಈ ಸಂದರ್ಭದಲ್ಲಿ 28 ವರ್ಷಗಳ ಕಾಲ ಈ ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆಯನ್ನು ಸಲ್ಲಿಸಿ ಪ್ರತಿಯೊಂದು ಕೆಲಸಗಳನ್ನು ನಿಷ್ಠೆಯಿಂದ ಮಾಡಿ ಇಲ್ಲಿಯವರೆಗೂ ಸಂಸ್ಥೆ ನಂದು ಎಂದು ಕೆಲಸ ಕಾರ್ಯಗಳನ್ನು ಯಾವ ಕಪ್ಪು ಚುಕ್ಕೆ ಇಲ್ಲದಂತೆ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದರು.ತಾಲೂಕು ಪಂಚಾಯಿತಿಯ ಮಾಜಿ ಸದಸ್ಯರು ಲಕ್ಕಪ್ಪ ಬಡಿಗೇರ ಇವರು ನಮ್ಮ ಮಕ್ಕಳು ಶಾಲೆಯಲ್ಲಿ ಒಳ್ಳೆಯ ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕ ನಮ್ಮ ಮಕ್ಕಳು ಬೆಳೆಯಬೇಕಾದರೆ ಅದಕ್ಕೆ ಕಾರಣ ಯಾರಂದರೆ ಶಾಲೆಯಲ್ಲಿ ಇದ್ದಂತ ಗುರುಗಳು ಹೇಳಿದಂತ ಮಾರ್ಗದಲ್ಲಿ ನಮ್ಮ ಮಕ್ಕಳು ಬೆಳೆಯಬೇಕು ಅಂದಾಗ ಆ ಮಗು ಉನ್ನತ ಮಟ್ಟಕ್ಕೆ ಬೆಳೆಯುತ್ತಾನೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.ಐ.ಏಫ್.ಭಾಲ್ಕಿ. ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜ ಅಹ್ಮದ ಸಿರಸಗಿ. ಬೋದಾನಿಗಳಾದ ನಬಿಲಾಲ ನಾಯ್ಕೋಡಿ ಗ್ರಾಮ ಪಂಚಾಯತಿಯ ಸದಸ್ಯರು.ನಜೀರ್ ಸಿಪಾಯಿ. ದಾವಲ್ ನಾಯ್ಕೋಡಿ, ಶ್ರೀಶೈಲ ನಾಯ್ಕೋಡಿ. ಡಾ.ಹಸನ ನಾಗಾವಿ ಈ ಸಂಸ್ಥೆಯ ಸೆಕ್ರೆಟರಿ.ಈ ಸಮಾರಂಭದಲ್ಲಿ ಇಲ್ಲ ವಿದ್ಯಾರ್ಥಿಗಳು ಪಾಲಕರು ಇಲ್ಲಾ ಮುಖ್ಯ ಗುರುಗಳು ಶಿಕ್ಷಕರು ಗುರುಮಾತೆ ಅವರು ಎಲ್ಲಾ ಊರಿನ ಮುಖಂಡರು ಪಾಲ್ಗೊಂಡು ಈ ಸಮಾರಂಭವನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ. ತಾಳಿಕೋಟೆ

