“ನಿಜ ನುಡಿ ಜಗದ ಜೀವನ ಸಂತೃಪ್ತಿ ವರದಾನ”…..

ನಿಷ್ಠೆ ನಿನ್ನ ಆತ್ಮದ ಮೇಲಿರಲಿ
ಬಾಲ್ಯದ ನೆನಪುಗಳ ಸವಿ ಚಿರ
ನಿತ್ಯ ಕಾಯಕ ದೇವದರ್ಶನ ನಮ್ಮನರಿತವರಿಗೆ
ಧನ್ಯತೆ ತಿಳಿಸಿ
ದಿನ ದಿನವೂ ಶುದ್ಧತೆಗೆ ಆಧ್ಯತೆ ನೀಡಿ
ಸಹಾಯ ಮಾಡಿದ ಫಲದ ಭಯಕೆ ಬೇಡ
ಜನ ಮೆಚ್ಚುವ ಸುಂದರ ಲಕ್ಷಣಗಳಿರಲಿ
ಜಗದ ಜನ ಮನ ಗೆಲ್ಲುವ ಸ್ವಚ್ಛ ಮನವಿರಲಿ
ದುಶ್ಚಟ ದುರ್ಗುಣಗಳ ದಿಕ್ಕರಿಸಿ ನಿಲ್ಲುವ
ಜಾಣತವಿರಲಿ
ಸಂಚು ವಂಚನೆಯಿಲ್ಲದ ಬಾಳು ಮನ
ಅಪರಂಜಿ
ಸಣ್ಣ ಹುಸಿ ಮಾತುಗಳೇ ಬದುಕಿನ
ಮುಳ್ಳುಗಳು
ನಿಜ ನುಡಿ ಜಗದ ಜೀವನ ಸಂತೃಪ್ತಿ ವರದಾನ
ಬೇಧ ಮಾಡದವನೇ ವಿಶ್ವ
ಚೈತನ್ಯರೂಪ
ಮಾನವ ಜೀವಿಗಳು ಒಂದೇ ಕುಲ
ಜಗದ ನಿಯಮ ವಿಶ್ವ ಮಾನವ
ಬಂಡ ಬಂಗತನ ಮಾಡಿ ಖುಶಿ ಪಡಬೇಡ
ಜಗದಲಿ ದ್ರೋಹ ಬಗೆಯುವವರೇ ನಿಜ
ಅಧಮರು.
—ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.