ಭಗವಂತನ ದರ್ಶನ ಮಾಡಿಸುವವನೇ ಸದ್ಗುರು – ಶ್ರೀಮತಿ ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಜು.16

ಶಿಷ್ಯನಾದವನಿಗೆ ಭಗವಂತನ ದರ್ಶನ ಮಾಡಿಸುವವನೇ ನಿಜವಾದ ಸದ್ಗುರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಹೇಳಿದರು. ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ಶ್ರೀಗುರುಪೂರ್ಣಿಮೆ” ಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಸಭೆಯ ಅಧ್ಯಕ್ಷತೆ ವಹಿಸಿ ಅವರು ಗುರುವಿನ ಮಹತ್ವದ ಬಗ್ಗೆ ಪ್ರವಚನ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ, ಗುರುವಿನ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ತಳುಕಿನ ತೊಯಜಾಕ್ಷಿ, ತ್ರಿವೇಣಿ, ವಿನೋದಮ್ಮ, ನಯನ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಕವಿತಾ ಗುರುಮೂರ್ತಿ, ನಾಗರತ್ನಮ್ಮ, ವೀರಮ್ಮ, ಶಾರದಾಮ್ಮ, ಯತೀಶ್.ಎಂ ಸಿದ್ದಾಪುರ, ಶೈಲಜ ಶ್ರೀನಿವಾಸ್, ಕೃಷ್ಣವೇಣಿ ವೆಂಕಟೇಶ್, ಸೌಮ್ಯ ಪ್ರಸಾದ್, ವಿಜಯಲಕ್ಷ್ಮಿ, ಶಾಂತಮ್ಮ ಶಾಂತವೀರಪ್ಪ, ರಶ್ಮಿ ವಸಂತ, ಭ್ರಮರಂಭಾ ಮಂಜುನಾಥ, ಸೌಮ್ಯ, ನಿಖಿಲೇಶ್ ಯಾದವ್ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.