ಗೌರವ ಡಾಕ್ಟರೆಟ್ ಪ್ರಶಸ್ತಿಗೆ ಭಾಜನರಾದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ – ಶ್ರೀ ಎಂ.ಎಂ ವಾಲಿಕಾರ್ ಸರ್.
ಇಂಡಿ ಏ.15

ತಾಲೂಕಿನ ಸರಕಾರಿ ನೌಕರರ ಭವನದಲ್ಲಿ ಡಾ, ಸರ್ವಪಲ್ಲಿ ರಾಧಾಕೃಷ್ಣ ಸೇವಾಭಿವೃದ್ಧಿ ಸಂಘದಿಂದ ಕೊಡ ಮಾಡಲಾಗುವ ಗೌರವ ಡಾಕ್ಟರೆಟ್ ಪ್ರಶಸ್ತಿಯನ್ನು ವಿಜಯಪುರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀ ಎಂ.ಎಂ ವಾಲಿಕಾರ ಸರ್ ಅವರ ಕಲೆ, ಸಾಹಿತ್ಯ, ಕಿರುನಾಟಕಗಳ ರಚನೆ, ನಟನೆ, ಶಿಕ್ಷಣ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗುರುತಿಸಿ “ಗೌರವ ಡಾಕ್ಟರೆಟ್” ಪ್ರಶಸ್ತಿ ಲಭಿಸಿರುವದಕ್ಕೆ ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ, ಪತ್ತಿನ ಸಹಕಾರಿ ಸಂಘ ಹಾಗೂ ಸರಕಾರಿ ನೌಕರರ ಸಂಘದ ಸಹಯೋಗದಲ್ಲಿ ಆತ್ಮೀಯ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷರಾದ ವಾಯ್.ಟಿ ಪಾಟೀಲ್, GOCC ಬ್ಯಾಂಕಿನ ನಿರ್ದೇಶಕರಾದ ಅಲ್ಲಾಬಕ್ಷ ವಾಲಿಕಾರ, ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪಬ್ಬು ಚಾಂದಕವಟೆ, ಬೆಳಗಾವಿ ವಿಭಾಗಿಯ ಉಪಾಧ್ಯಕ್ಷರಾದ ಎಸ್.ವ್ಹಿ ಹರಳಯ್ಯ, ಜಗು ಚವಡಿಹಾಳ, ನೌಕರರ ಸಂಘದ ಪರಿಷತ್ ಸದಸ್ಯರಾದ ಬಸು ಮೇತ್ರಿ, ಎಸ್/ಸಿ – ಎಸ್/ಟಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಬಿ.ಎಂ ವಠಾರ, ಇಂಡಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಕಾಂತು ಇಂಡಿ, ಭಾಷ ಕುಮಸಗಿ, ಸುರೇಶ ಚವ್ಹಾಣ, ಬಿ.ಎನ್ ಜಮಾಧಾರ, ಬುರಾಣ ಸುತಾರ ಅನೇಕ ಶಿಕ್ಷಕರು ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ