“ವಿಶ್ವ ಉದಯರತ್ನ”…..

ಸೂರ್ಯದೇವ ದಿನ ದಿನವು ಉದಯ
ಜಗದ ಜೀವರಾಶಿಗಳ ಕಲರವ ನಿನಾದ
ಸುನಾದವು
ರವಿತೇಜನ ಹೊಳಪಿಗೆ ತಂಗಾಳಿ ತಂಪಿಗೆ
ಸಸ್ಯ ಕುಲ ಚಿಗುರೊಡೆದು ನಗುವವು
ಉದಯರಾಗದಿ ಜೀವಸಂಕುಲ ಹರುಷದಿ ನವ
ಚೈತನ್ಯದಿ ನಲಿಯುವವು
ರವಿರಾಜನ ಆಜ್ಞೆಗೆ ಮಾನವ ಕುಲಕೋಟಿ ನಿತ್ಯ
ಕಾಯಕದಿ ತೊಡಗುವರು
ಉದಯ ರವಿ ನಿತ್ಯ ನೂತನವಾಗಿಸಿ
ವಿಶ್ವ ಜೀವಸಂಕುಲ ಸಲಹುವನು
ಸೂರ್ಯ ದೇವನ ವರಪ್ರದಾಯ ಸೃಷ್ಠಿ ಸಿರಿ
ಸವಿಯು ಸೌಭಾಗ್ಯ
ಸರ್ವಜೀವ ಸಂಕುಲ ವಿಶ್ವದ ಉದಯ ರತ್ನ
ಜಗದಿ ಮೂಲಾಧಾರ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.