ತಾಲೂಕಿನ ಕರಡಿಗುಡ್ಡ ಸಿ.ಸಿ ರಸ್ತೆ ಕೆ.ಕೆ.ಆರ್.ಡಿ.ಬಿ ಯೋಜನೆಯ ಕಳಪೆ ಕಾಮಗಾರಿಗೆ – ರೈತ ಮುಖಂಡ ಹೊಳೆಪ್ಪರಿಂದ ಗಂಭೀರ ಆರೋಪ.
ಮಾನ್ವಿ ನ.28

ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗ ಬೇಕು ಎಂದು ಸರಕಾರ ಕೋಟಿ ಗಟ್ಟಲೆ ಅನುದಾನ ನೀಡುತ್ತೆ. ಆದರೆ ಮಾನ್ವಿ ತಾಲೂಕಿನ ಕರಡಿಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಿ.ಸಿ ರಸ್ತೆ ಕಾಮಗಾರಿ ಕಳಪೆ ಮಾಡಿ ಲೋಕೋಪಯೋಗಿ ಇಲಾಖೆ ಅಭಿಯಂತರರು ಹಾಗೂ ಗುತ್ತಿಗೆದಾರ ಮೋಹನ ಸೇರಿಕೊಂಡು 50 ಲಕ್ಷ ಲೂಟಿ ಮಾಡುವ ಆರೋಪ ಕೇಳಿ ಬಂದಿದೆ.
2023-24 ನೇ. ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆಯ 50 ಲಕ್ಷ ಅನುದಾನವನ್ನು ಕರಡಿಗುಡ್ಡ ಗ್ರಾಮದ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಶಾಸಕ ಹಂಪಯ್ಯ ನಾಯಕರು ಅನುದಾನ ನೀಡಿದ್ದರು. ಆದರೆ ಮಾನ್ವಿ ಲೋಕೋಪಯೋಗಿ ಅಭಿಯಂತರ ಮಕ್ಸೂದ್, ಎ.ಇ.ಇ ಸಾಮುವೇಲಪ್ಪ ಗುತ್ತಿಗೆದಾರ ಮೋಹನ ಸೇರಿಕೊಂಡು ಕಳಪೆ ಕಾಮಗಾರಿ ಮಾಡುತ್ತಿದ್ದಾರೆಂದು ರೈತ ಸಂಘದ ಮುಖಂಡ ಹೊಳೆಯಪ್ಪ ಉಟಕನೂರು ಆರೋಪಿಸಿದ್ದಾರೆ.
ಮಾನ್ವಿ ಲೋಕೋಪಯೋಗಿ ಅಭಿಯಂತರರು ಹಾಗೂ ಗುತ್ತಿಗೆದಾರ ಮೋಹನ ಅವರು ಮಾಡಿದ ಸಿ.ಸಿ ರಸ್ತೆ ಕಾಮಗಾರಿಯನ್ನು ಉನ್ನತ ಮಟ್ಟದ ಅಧಿಕಾರಿಗಳು ಸಮಗ್ರವಾಗಿ ತನಿಖೆ ಮಾಡಿ ಗುತ್ತಿಗೆದಾರ ಮೋಹನ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ