“ಮನದ ಸುಮಾತು ಪಾಲಿಸಿ ಸುಖಮಯ ಜೀವನ ಸಾಗಸಿ”…..

ಜ್ಞಾನ ಜ್ಯೋತಿ ಸರ್ವರ ಮನ ಬೆಳಗಲು
ವಿಶ್ವದಿ ಬಾಳುವ ಮನ ಪಾವನ
ಅರಿತವನೇ ತಪ್ಪಿಸಿಗಿದರೆ ಶಿಕ್ಷೆಗೆ ಅರ್ಹನು
ಶಿಕ್ಷಣವಿಲ್ಲದವನು ಪಶುವಿನಂತೆ ಹಲಬುವನು
ಅನುಭವದ ಬುದ್ಧವಂತ ಜಗದ
ಆದರ್ಶತನದ ರೂವಾರಿ
ಮುಖದಲಿ ನೈಜತೆಯ ನಗುವಿರಲು ಗೆಲುವಿಗೆ
ಮೋಸವಿರದು
ಬೆಲ್ಲದ ಮಾತುಗಿಂತ ಮನದ ಶುದ್ಧತೆ ಭಾವ
ಚೆನ್ನ
ಸಹಾಯ ಹಸ್ತ ಚಾಚಿದವನ ಜರೀಬೇಡ
ನೀರಡಿಸಿದವನಿಗೆ ನೀರು ಕೋಡಿ ಹಸಿದವನಿಗೆ
ಊಟ ಬಡಿಸಿ
ಚಿಕ್ಕ ಕೆಲಸ ಚೊಕ್ಕ ಬದುಕು ಸಮಾಜದ
ಕುರುಹು
ಅನುಕೂಲಕ್ಕಾದವನೇ ಮಹಾದೇವ
ಒಳ್ಳೆಯ ಕಾರ್ಯಕ್ಕೆ ಆಗ ಈಗ ಎನಬೇಡ
ಮಾಡಿದ ಪುಣ್ಯ ಅನವರತ
ಹೆಜ್ಜೆ ಹೆಜ್ಜೆಗೆ ಸುರಕ್ಷತೆಗೆ ಇರಲಿ ಆದ್ಯತೆ
ಬದುಕಿನ ಪ್ರತಿ ಕ್ಷಣ ಮಹತ್ವ ನೀಡಿ
ಮನದ ಸುಮಾತು ಪಾಲಿಸಿ
ಸುಖಮಯ ಜೀವನ ಸಾಗಸಿ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.