ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ರಾಜ್ಯ ಪರಿಷತ್ ಮತ್ತು ಜಿಲ್ಲಾ ಖಜಾಂಚಿ – ಹುದ್ದೆಗಳಿಗೆ ಚುನಾವಣೆ.
ಹೊಸಪೇಟೆ ನ.30

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವಿಜಯನಗರ ಜಿಲ್ಲಾ ಶಾಖೆಯಿಂದ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ರಾಜ್ಯ ಪರಿಷತ್ ಮತ್ತು ಜಿಲ್ಲಾ ಖಜಾಂಚಿ ಹುದ್ದೆಗಳಿಗೆ ಚುನಾವಣೆಗಳು ದಿನಾಂಕ: 4.12.2024 ರಂದು ನಡೆಯಲಿದೆ. ವಿಜಯನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ರಾಜ್ಯ ಪರಿಷತ್ ಮತ್ತು ಜಿಲ್ಲಾ ಖಜಾಂಚಿ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ವಾಪಾಸು ಪಡೆದು ಕೊಳ್ಳಲು 29.11.2024 ಸಂಜೆ 4:30 ವರೆಗೆ ಕಾಲಾವಕಾಶವಿತ್ತು. ಜಿಲ್ಲಾಧ್ಯಕ್ಷ ಹುದ್ದೆಗೆ ಜಿ.ಮಲ್ಲಿಕಾರ್ಜುನಗೌಡ ಮತ್ತು ರಾಜೀವ್ ಹೆಚ್. ಇವರು ನಾಮಪತ್ರ ಸಲ್ಲಿಸಿರುತ್ತಾರೆ. ರಾಜ್ಯಪರಿಷತ್ ಹುದ್ದೆಗೆ ರಾಘವೇಂದ್ರ ಎಸ್. ಹೆಗಡಿಹಾಳ್ ಮತ್ತು ಸೈಯದ್ ಕಲೀಮ್ ಉಲ್ಲಾ ಇವರು ನಾಮಪತ್ರ ಸಲ್ಲಿಸಿರುತ್ತಾರೆ. ಜಿಲ್ಲಾ ಖಜಾಂಚಿ ಹುದ್ದೆಗೆ ಕೆ. ಮಲ್ಲೇಶಪ್ಪ, ಮನೋಹರ ಎನ್. ಜಿ. ಹಾಗೂ ಮಾಲತೇಶ ಮರೇಗೌಡರ್ ಇವರು ನಾಮಪತ್ರ ಸಲ್ಲಿಸಿರುತ್ತಾರೆ. ಜಿಲ್ಲಾ ಖಜಾಂಚಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದ ಮನೋಹರ ಎನ್ ಜಿ ಇವರು ತಮ್ಮ ನಾಮಪತ್ರವನ್ನು ದಿನಾಂಕ: 29.11.2024 ರಂದು ಸಂಜೆ 4:20ಕ್ಕೆ ವಾಪಸ್ಸು ಪಡೆದು ಕೊಂಡಿರುತ್ತಾರೆ. ಇದೀಗ ಕಣದಲ್ಲಿ ಜಿಲ್ಲಾ ಜಿಲ್ಲಾಧ್ಯಕ್ಷ ಹುದ್ದೆಗೆ ಜಿ. ಮಲ್ಲಿಕಾರ್ಜುನಗೌಡ ಮತ್ತು ರಾಜೀವ್ ಹೆಚ್. ಅವರು ಅಂತಿಮ ಕಣದಲ್ಲಿರುತ್ತಾರೆ. ರಾಜ್ಯ ಪರಿಷತ್ ಹುದ್ದೆಗೆ ರಾಘವೇಂದ್ರ ಎಸ್. ಹೆಗಡಿಹಾಳ್ ಮತ್ತು ಸೈಯದ್ ಕಲೀಮ್ ಉಲ್ಲಾ ಇವರು ಕಣದಲ್ಲಿರುತ್ತಾರೆ. ಜಿಲ್ಲಾ ಖಜಾಂಚಿ ಹುದ್ದೆಗೆ ಕೆ. ಮಲ್ಲೇಶಪ್ಪ ಮತ್ತು ಮಾಲತೇಶ ಮರೇಗೌಡರ್ ಇವರು ಅಂತಿಮ ಕಣದಲ್ಲಿರುತ್ತಾರೆ. ಮತದಾನವು ದಿನಾಂಕ 4.12.2024 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನೌಕರರ ಭವನ, ಸಂಡೂರು ರಸ್ತೆ, ಹೊಸಪೇಟೆಯಲ್ಲಿ ಜರುಗಲಿದೆ. ಚುನಾವಣಾಧಿಕಾರಿಗಳಾಗಿ ಲಿಯಾಖತ್ ಅಲಿ ಜಿಲ್ಲಾ ಚುನಾವಣಾಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವಿಜಯನಗರ ಜಿಲ್ಲೆ ಮತ್ತು ಗುರು ಬಸವರಾಜ್ ಹೆಚ್. ಎಂ.ಸಹಾಯಕ ಚುನಾವಣಾಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವಿಜಯನಗರ ಜಿಲ್ಲೆ ಇವರುಗಳ ಉಪಸ್ಥಿತಿಯಲ್ಲಿ ಚುನಾವಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ