ಒಳ ಮೀಸಲಾತಿ ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ ಗೆಲುವು – ಮುತ್ತಣ್ಣ ಮೇತ್ರಿ.
ಜಮಖಂಡಿ ಅ.02

ಪರಿಶಿಷ್ಟ ಜಾತಿಗಳಲ್ಲಿ ಅಭಿವೃದ್ಧಿ ಹೊಂದದ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಬೇಡಿಕೆ ಸಂವಿಧಾನ ಹಕ್ಕುಗಳ ಉಲ್ಲಂಘನೆ ಅಲ್ಲ ಎಂದು ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಚಂದ್ರಚೂಡ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿದ್ದು ದಲಿತ ಜನಾಂಗದಲ್ಲಿ ಸಂತಸವಾಗಿದೆ ರಾಜ್ಯ ಸರ್ಕಾರ ಒಳ ಮೀಸಲಾತಿ ವರ್ಗೀಕರಣ ಆರಂಭ ಮಾಡಬೇಕು ಈಗ ಪ್ರಾರಂಭಿಸಿರುವ ಉದ್ಯೋಗ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತ ಗೊಳಿಸ ಬೇಕು ರಾಜ್ಯದಲ್ಲಿ 30 ವರ್ಷಗಳಿಂದ ನಿರಂತರವಾಗಿ ದಲಿತಪರ ಸಂಘಟನೆಗಳು ಜನ ಪ್ರತಿನಿಧಿಗಳು ಸೇರಿ ಮಾಡಿದ ಹೋರಾಟಕ್ಕೆ ಈಗ ಫಲ ಸಿಕ್ಕಿದೆ ರಾಜ್ಯ ಸರ್ಕಾರ ತಕ್ಷಣ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಎಸ್ಸಿ ಎಸ್ಟಿ ವರ್ಗದಲ್ಲಿ ಅತಿ ಹಿಂದುಳಿದ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಳ ಮೀಸಲಾತಿ ನೀಡುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರು ಒಳಗೊಂಡ ಸಾಂವಿಧಾನಿಕ ಪೀಠ ಗುರುವಾರ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಎಸ್ ಸಿ ಪಟ್ಟಿಯನ್ನು ವರ್ಗಿಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಮುಂದಾಗ ಬೇಕು ಆಳುವ ಸರ್ಕಾರಗಳು ಒಳ ಮೀಸಲಾತಿಗೆ ವರ್ಗೀಕರಣಕ್ಕಾಗಿ ಸಾಕಷ್ಟು ಭಾರಿ ಪ್ರಯತ್ನಪಟ್ಟಿವೆ, ಈಗ ಸುಪ್ರೀಂ ಕೋರ್ಟ್ ನಲ್ಲಿದ್ದ ಒಳ ಮೀಸಲಾತಿ ವರ್ಗೀಕರಣವು ರಾಜ್ಯ ಸರ್ಕಾರದ ಅಂಗಳಕ್ಕೆ ಬಂದಿದೆ ಅದನ್ನು ರಾಜ್ಯ ಸರ್ಕಾರ ಶೀಘ್ರವಾಗಿ ಕೈ ಗೆತ್ತಿಕೊಂಡು ಒಳ ಮೀಸಲಾತಿ ಜಾರಿ ಮಾಡಿ. 30 ವರ್ಷಗಳ ಕಾಲ ಹೋರಾಟ ಮಾಡಿದ ಸಮುದಾಯಕ್ಕೆ ನ್ಯಾಯ ಕೊಟ್ಟಂತಾಗುತ್ತದೆ ವಿಳಂಬ ಮಾಡದೆ ಕಾರ್ಯಪ್ರವೃತ್ತರಾಗಿ ವರದಿಯನ್ನು ಜಾರಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಮುತ್ತಣ್ಣ ಮೇತ್ರಿ ಹನುಮಂತ ಚಿಮ್ಮಲಗಿ ಆನಂದ ದೊಡಮನಿ ಕೃಷ್ಣಮೂರ್ತಿ ನಾಯ್ಕರ್ ಸಂಗಣ್ಣ ಮಡ್ಡಿ ಲಕ್ಷ್ಮಣ ಹರಿಜನ ಮಾರುತಿ ಮರೆಗುದ್ದಿ ಸೇರಿ ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್. ವಾಯ್ ಕಿಳ್ಳಿ ಇಲಕಲ್ಲ.