ತಾಳಿಕೋಟೆ ತಾಲೂಕಿನ ಸುಕ್ಷೆತ್ರ ಬೇಕಿನಾಳ ಗ್ರಾಮದಲ್ಲಿ ಶ್ರೀ ಗೌರಿ ಶಂಕರ ಜಾತ್ರಾ ಮಹೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು.
ಬೇಕಿನಾಳ ನ.30

ಪ್ರತಿ ವರ್ಷದಂತೆ ಈ ವರ್ಷವು ಕೂಡ ಗೌರಿ ಶಂಕರ ಮೂರ್ತಿಯ ಶ್ರೀ ಬದ್ರೇಶ್ವರ ಮಠದಲ್ಲಿ ಮಾಡಲಾಗುತ್ತೆ 20.11.2024. ರಂದು ಮೂರ್ತಿಯನ್ನು ಮೆರವಣಿಗೆ ಬಾಜ ಭಜಂತ್ರಿ ಮುಖಾಂತರ ಗೌರಿ ಶಂಕರ ಕಟ್ಟೆ (ಗುಡಿ)ಗೆ ಮೂರ್ತಿ ಗಳನ್ನು ತಂದು ವಿಶೇಷ ಪೂಜೆ ಮಾಡಿ ಪ್ರತಿಷ್ಠಾಪನೆ ಮಾಡಲಾಗಿದೆ 11 ದಿನಗಳ ಕಾಲ ದೇವರಿಗೆ ವಿಶೇಷ ಪೂಜೆ ಸಂಜೆ ಊರಿನ ಎಲ್ಲಾ ಮಹಿಳೆಯರು ಆರತಿ ತರೋದು ಸಂಪ್ರದಾಯವಾಗಿದೆ 10 ನೇ. ದಿನ ದಂದು ರಾತ್ರಿ ಶ್ರೀ ಬದ್ರೇಶ್ವರ ಭಜನಾ ಮಂಡಳಿ ಇಂದು ರಾತ್ರಿ ಪೂರ್ತಿ ಭಜನೆ ಮಾಡಲಾಗುವುದು 11 ನೇ. 30-11-2024. ಶನಿವಾರ ದಿನ ದಂದು ಬೆಳಿಗ್ಗೆ ಪೂಜೆ ಅಭಿಷೇಕ್ ಮಾಡಿ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಆ ದಿನ ಸಂಜೆ ಪೂಜೆ ಮಾಡಿ ಟ್ರ್ಯಾಕ್ಟರ್ ನಲ್ಲಿ ಪೂರ್ತಿ ಅಲಂಕಾರ ಮಾಡಿ ಶ್ರೀ ಗೌರಿ ಶಂಕರ ಮೂರ್ತಿಯನ್ನು ಸಕಲ ವಾದ್ಯಗಳು ಡೊಳ್ಳು ಬಾಜ ಭಜಂತ್ರಿ ಭಜನೆ ಹಾಗೂ ಇನ್ನಿತರ ಮನರಂಜನೆಯೃಎೆ ಮಾಡುತ್ತ ಮೆರವಣಿಗೆ ಮತ್ತೆ ಶ್ರೀ ಬದ್ರೇಶ್ವರ ಮಠದ ವರೆಗೆ ಹೋಗಿ ಕಾರ್ಯಕ್ರಮ ಜರಗಿತು ಎಂದು ಊರಿನ ಎಲ್ಲಾ ಗುರು ಹಿರಿಯರು ಹಾಗೂ ಯುವಕ ಮಂಡಳಿಯವರು ಸೇರಿ ಜಾತ್ರೆಯನ್ನು ವ್ಯವಸ್ಥೆ ಮಾಡಿ ಯಶಸ್ವಿ ಗೊಳಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ.ಈ.ಬೆಕಿನಾಳಮಠ.ಕಲಕೇರಿ