ಬೀಚಿ ಬಳಗದ ವತಿಯಿಂದ ಪಟ್ಟಣದ – ಹಿರೇಮಠ ಸ್ವಾಮೀಜಿಯವರಿಗೆ ಸನ್ಮಾನ.

ನರೇಗಲ್ ಡಿ.01

ಸಮೀಪದ ಅಬ್ಬಿಗೇರಿಯಲ್ಲಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಡೆದ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವದಲ್ಲಿ ಜಗದ್ಗುರು ಪೀಠದಿಂದ ಸಾಧನ ಸಿರಿ ಪ್ರಶಸ್ತಿಯನ್ನು ಪಡೆದ ಪಟ್ಟಣದ ಹಿರೇಮಠ ಸ್ವಾಮೀಜಿ ಅವರನ್ನು ಬೀಚಿ ಬಳಗದಿಂದ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮಠದ ಆವರಣದಲ್ಲೇ ಹತ್ತು ವರ್ಷಗಳಿಂದ ಬೀಚಿ ಬಳಗದ ನಡೆಯುತ್ತಿರುವುದನ್ನು ಹೋಬಳಿಯಲ್ಲಿ ಕಾರ್ಯಗಳು ನೋಡಿದ್ದೇವೆ. ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಬೀಚಿ ಬಳಗವು ಈ ಭಾಗದ ಅಷ್ಟೇ ಅಲ್ಲದೇ ಜಿಲ್ಲೆಯ ಎಲ್ಲ ಸಾಹಿತ್ಯ ಪ್ರಿಯರ ಮನಸ್ಸು ಗೆದ್ದಿದೆ.ನಾನು ಕಂಡಿರುವಂತೆ ಬರೀ ಗದಗ ಜಿಲ್ಲೆಯಲ್ಲಷ್ಟೇ ಅಲ್ಲದೆ ನಾನು ಹೊದೆಡೆಯಲ್ಲೆಲ್ಲ ಈ ಬೀಚಿ ಬಳಗದ ಮಾತು ಬಂದೇ ಬರುತ್ತದೆ. ಅಂದರೆ ಬೀಚಿ ಬಳಗ ಅಷ್ಟೊಂದು ಪ್ರಸಿದ್ದಿ ಪಡೆದಿದೆ ಎಂದರ್ಥ, ಇಂದು ಬೀಚಿ ಬಳಗದವರು ನಮ್ಮನ್ನು ಸನ್ಮಾನಿಸಿದ್ದು ನಮಗೆ ಅತ್ಯಂತ ಸಂತಸವಾಗಿದೆ ಎಂದರು. ಬೀಚಿ ಬಳಗದ ಅಧ್ಯಕ್ಷ ಕಳಕಣ್ಣವರ ಮಾತನಾಡಿದರು. ಅರುಣ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಎಸ್. ದಡೇಸೂರಮಠ, ಸುರೇಶ ಹಳ್ಳಿಕೇರಿ, ಡಾ, ಆರ್.ಕೆ. ಗಚ್ಚಿನಮಠ, ಎಂ.ಕೆ. ಬೇವಿನಕಟ್ಟಿ ಭಾರತಿ ಶಿರ್ಸಿ, ನಿರ್ಮಲಾ ಹಿರೇಮಠ ಮಾತನಾಡಿದರು. ಪಂ. ಅನ್ನದಾನ ಶಾಸ್ತ್ರಿಗಳು, ಸಿದ್ದಿ, ಆದರ್ಶ ಕುಲಕರ್ಣಿ, ಶಿವಯೋಗಿ ಜಕ್ಕಲಿ, ಈಟಿ ಶಿಕ್ಷಕರು ಇನ್ನೂ ಮುಂತಾದವರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button