ಕುಟುಂಬ ಕಲ್ಯಾಣ ಯೋಜನೆಯಲ್ಲಿ ಪುರುಷರು ಸಹ ಭಾಗಿತ್ವವು ಇರಲಿ – ಎಸ್.ಎಸ್ ಅಂಗಡಿ.
ಗುಂಡನಪಲ್ಲೆ ಡಿ.01





ಬಾಗಲಕೋಟ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ, ಉಪ ಆರೋಗ್ಯ ಕೇಂದ್ರ ಬೆನಕಟ್ಟಿ ಸಹಯೋಗದಲ್ಲಿ ಹೊನ್ನಾಕಟ್ಟಿ, ಗುಂಡನಪಲ್ಲೆ ಗ್ರಾಮದಲ್ಲಿ, “ಪುರುಷ ಸಂತಾನ ಹರಣ ಕುಟುಂಬ ಕಲ್ಯಾಣ” ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿಯವರು “ಚಿಕ್ಕ ಕುಟುಂಬ ಚೊಕ್ಕ ಕುಟುಂಬ” ಕುಟುಂಬ ಕಲ್ಯಾಣ, ಉದರ ದರ್ಶಕ ಶಸ್ತ್ರ ಚಿಕಿತ್ಸೆ, ಟ್ಯೂಬೆಕ್ಟಮಿ, ನುಂಗು ಮಾತ್ರೆ, ಅಂತರ ಮಹಿಳೆಯರಿಗೆ ಕುಟುಂಬ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜರಗುತ್ತಿದ್ದು. ಪುರುಷರು ಕುಟುಂಬ ಕಲ್ಯಾಣ ಯೋಜನೆ ಭಾಗವಹಿಸುವಿಕೆಗೆ, ಪುರುಷ ಸಂತಾನ ಹರಣ ಚಿಕಿತ್ಸೆ ನೋ ಸ್ಕಾಲ್ ಪೆಲ್ ವೆಸಕ್ಟಮಿ ಜಾರಿಯಲ್ಲಿದ್ದು,

ಅರ್ಹ ಪುರುಷ ಫಲಾನುಭವಿಗಳು ಭಾಗವಹಿಸ ಬೇಕು ತಪ್ಪು ಕಲ್ಪನೆ ಮೂಢನಂಬಿಕೆಗಳು ಬೇಡ, ಎನ್ ಎಸ್ ವಿ ಗಾಯ ಹೊಲಿಗೆ ರಹಿತ ಪುರುಷ ಸಂತಾನ ಹರಣ ಚಿಕಿತ್ಸೆ ಪದ್ಧತಿಯಾಗಿದೆ. 50 ಹಾಸಿಗೆ ಆಸ್ಪತ್ರೆ ಹಳೇ ಬಾಗಲಕೋಟದಲ್ಲಿ ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ. ಭಯ ಬೇಡ ಸುರಕ್ಷಿತವಾಗಿದೆ. ಅರ್ಹ ಪುರುಷರು ಕುಟುಂಬ ಕಲ್ಯಾಣ ಯೋಜನೆ ಅಳವಡಿಸಿ ಕೊಂಡು ದೇಶದ ಕುಟುಂಬದ ಅಭಿವೃದ್ಧಿಗೆ ಕುಟುಂಬ ಕಲ್ಯಾಣ ಯೋಜನೆಯಲ್ಲಿ ಪುರುಷರು ಸಹ ಭಾಗಿತ್ವವು ಇರಲಿ. ಎಂದು ಜನಜಾಗೃತಿ ಮೂಡಿಸಿದರು. “ಪುರುಷ ಸಂತಾನ ಹರಣ ಕುಟುಂಬ ಕಲ್ಯಾಣ” ಜನಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಆಶಾ, ಗ್ರಾಮದ ಮುಖಂಡರಾದ ಸಂಗಪ್ಪ ಜಕಾತಿ, ಗುರಪ್ಪ ಬಬಲೇಶ್ವರ, ಬಾಲಪ್ಪ ಪೂಜಾರಿ, ಬೊಮ್ಮೇಶ, ಶಿವಪ್ಪ ಮಾದರ, ಲಕ್ಷ್ಮಣ ಮಾದರ, ಹನಮಂತ, ದುರ್ಗಪ್ಪ ಮಾದರ ಭಾಗವಹಿಸಿದ್ದರು.