2009 ರ ಲೋಕಸಭಾ ಚುನಾವಣೆಯಲ್ಲಿ 13.288 ಮತ ಪಡೆದು ಅಚ್ಚರಿ ಮೂಡಿಸಿದ್ದರು – ಸಧ್ಯ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ.

ಹುನಗುಂದ ಏಪ್ರಿಲ್.22

2024 ರ ಕೋಟೆ ನಾಡಿನ ಲೋಕ ಸಮರದಲ್ಲಿ ಘಟ್ಟಾನು ಘಟ್ಟಿಗಳ ಮಧ್ಯದಲ್ಲಿ 2009 ರ ಲೋಕಸಭೆಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಚ್ಚರಿ ಮತಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಹುಬ್ಬೇರುವಂತೆ ಮಾಡಿದ್ದ ವಿಕಲ ಚೇತನರ ಪ್ರತಿ ಧ್ವನಿಯಾದ ಹುನಗುಂದ ಪಟ್ಟಣದ ಸಂಗಮೇಶ ಗುರಪಾದಪ್ಪ ಭಾವಿಕಟ್ಟಿ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿದೆ.ಹೌದು 2009 ರ ಲೋಕ ಸಮರದಲ್ಲಿ ಕಾಂಗ್ರೇಸ್‌ನಿಂದ ಈಗೀನ ಬೀಳಗಿ ಮತಕ್ಷೇತ್ರದ ಶಾಸಕ ಜಿ.ಟಿ.ಪಾಟೀಲ ಮತ್ತು ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ ಗದ್ದಿಗೌಡರು ಸ್ಪರ್ದಿಸಿದ್ದರು ಮತ್ತು 15 ಜನ ಪಕ್ಷೇತರ ಅಭ್ಯರ್ಥಿಗಳಲ್ಲಿ ಹುನಗುಂದ ಪಟ್ಟಣದ ಅಂಗವಿಕಲರ ಸಂಘದ ಹುನಗುಂದ ಘಟಕದ ಅಧ್ಯಕ್ಷ ಸಂಗಮೇಶ ಭಾವಿಕಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 13.288 ಮತಗಳನ್ನು ಪಡೆಯುವ ಮೂಲಕ 2009 ರ 17 ಜನ ಅಭ್ಯರ್ಥಿಗಳ ಚುನಾವಣೆಯ ಫಲಿತಾಂಶದ ಪಟ್ಟಿಯಲ್ಲಿ 3 ಸ್ಥಾನವನ್ನು ಗಿಟ್ಟಿಸಿ ಕೊಂಡಿದ್ದರು.ಸಧ್ಯ ಕೋಟೆ ನಾಡಿನ ಲೋಕ ಸಮರ ಆರಂಭದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಮಧ್ಯದಲ್ಲಿ ಸ್ವಲ್ಪ ಪ್ರಮಾಣದ ಇರಿಸು ಮುರಿಸು ಕಾಣಿಸಿ ಕೊಂಡಿತ್ತು ಭಿನ್ನಮತದ ಹೊಗೆಯನ್ನು ತಣ್ಣಗಾಗಿಸಲು ಪಕ್ಷ ಮುಖಂಡರ ಸಾಕಷ್ಟು ಪ್ರಯತ್ನದಿಂದ ಸಧ್ಯ ಶಮನವಾಗಿದೆ.ಇನ್ನು ಕಾಂಗ್ರೆಸ್‌ನಲ್ಲಿ ಹೊರ ಜಿಲ್ಲೆಯ ಸಂಯಕ್ತ ಪಾಟೀಲರಿಗೆ ಟಿಕೆಟ್ ನೀಡಿದ್ದಾರೆ. 2009 ರ ಚುನಾವಣೆಯಲ್ಲಿ ಸೋತು ಮರು ಪರೀಕ್ಷೆಗಾಗಿ ಐದು ವರ್ಷ ಸತತ ಕೆಲಸ ಮಾಡಿದ್ದ ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡಿಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿತ್ತು ಅದನ್ನು ರಾಜ್ಯ ಮತ್ತು ಜಿಲ್ಲಾ ಮುಖಂಡರು ಒಂದು ತಿಂಗಳಿನಿಂದ ವೀಣಾ ಕಾಶಪ್ಪನವರ ಮನ ಒಲಿಸಲು ಸಾಕಷ್ಟು ಮೀಟಿಂಗ್ ಮತ್ತು ಚೆರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಪಕ್ಷ ಒಳ್ಳೆಯ ಅವಕಾಶ ನೀಡುತ್ತೇ ಎನ್ನುವ ಭರವಸೆಯ ಮೇಲೆ ಸಂಯುಕ್ತ ಪಾಟೀಲರ ನಾಮಪತ್ರ ಸಲ್ಲಿಕೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಭಿನ್ನಮತಕ್ಕೆ ತೆರೆ ಎಳೆದಿದ್ದಾರೆ.ಅಸಮದಾನ ಮತ್ತು ಭಿನ್ನಮತದ ಮಧ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸಂಗಮೇಶ ಭಾವಿಕಟ್ಟಿ ಲಾಭ ಪಡೆದು ಕೊಳ್ಳಬೇಕು ವಿಕಲ ಚೇತನರ ಧ್ವನಿಯಾಗಬೇಕು ಮತ್ತು ಪಂಚಮಸಾಲಿ ಸಮುದಾಯಕ್ಕೆ ಸೇರಿದ ಇವರು ಸಮುದಾಯದ ಮತ ಸೆಳೆಯುವ ಮತ್ತೊಮ್ಮೆ ಲೋಕಸಭೆ ಅಕಾಡಕ್ಕೀಳಿದ್ದಾರೆ.ನಾನೊಬ್ಬ ವಿಕಲ ಚೇತನ ಮತ್ತು ಪಂಚಮಸಾಲಿ ಸಮಾಜಕ್ಕೆ ಸೇರಿದ್ದವನಾಗಿದ್ದು. ಇಲ್ಲಿವರಗೂ ಸತತ 4 ಬಾರಿ ಸಂಸದರಾದ ಪಿ.ಸಿ.ಗದ್ದಿಗೌಡ್ರ ವಿಕಲ ಚೇತನರ ಪರ ಕೆಲಸ ಮಾಡಿಲ್ಲ ನಾನೊಬ್ಬ ವಿಕಲ ಚೇತನನಾಗಿ ಅವರಿಗೆ ಧ್ವನಿಯಾಗಬೇಕು ಬಾಗಲಕೋಟ ಲೋಕಸಭೆ ಚುನಾವಣೆಯಲ್ಲಿ ಬರೋಬರಿ 26.552 ಮತಗಳಿವೆ ವಿಕಲ ಚೇತನರ ಪರವಾಗಿ ಸದಾ ಕೆಲಸ ಮಾಡುತ್ತಿರುವುದರಿಂದ ವಿಕಲ ಚೇತನರ ಎಲ್ಲ ಮತಗಳು ನನ್ನ ಮತ ಬುಟ್ಟಿಯಲ್ಲಿವೆ ಇನ್ನು ಅದರ ಜೊತೆಗೆ ಸಮುದಾಯದಿಂದಲೂ 20 ಸಾವಿರಕ್ಕೂ ಅಧಿಕ ಮತಗಳು ಕೂಡಾ ಬರುತ್ತವೆ ಒಟ್ಟಾರೆಯಾಗಿ ಈ ಬಾರಿ 50 ಸಾವಿರಕ್ಕೂ ಅಧಿಕ ಮತ ಗಳಿಸುವ ವಿಶ್ವಾಸವಿದೆ ಎನ್ನುತ್ತಿದ್ದಾರೆ ಪಕ್ಷೇತರ ಅಭ್ಯರ್ಥಿ ಸಂಗಮೇಶ ಭಾವಿಕಟ್ಟಿ.ಇದರಿಂದ ಇವರ ಸ್ಪರ್ಧೆ ಕಾಂಗ್ರೆಸ್ ಮುಳ್ಳುವಾಗುತೋ ಇಲ್ಲ ಬಿಜೆಪಿಗೆ ಮುಳ್ಳುವಾಗುತೋ ಎನ್ನುವ ಪ್ರಶ್ನೆ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಒಟ್ಟಾರೆಯಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಅಸಮದಾನ ಮತ್ತು ಭಿನ್ನಮತದ ಶಮನದ ಮಧ್ಯದಲ್ಲೂ 2009 ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿ ಮತ ಗಳಿಸಿ ಹುಬ್ಬೇರುಸುವಂತೆ ಮಾಡಿದ್ದ ಸಂಗಮೇಶ ಭಾವಿಕಟ್ಟಿ 2024 ರ ಚುನಾವಣೆಯಲ್ಲಿ ಮತ್ತೇ ಅದೇ ರೀತಿ ಅಚ್ಚರಿ ಮೂಡಿಸುತ್ತಾರಾ ಎಂದು ಕಾಯ್ದು ನೋಡಬೇಕಿದೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button