ಸಚಿವ ಎಚ್.ಕೆ ಪಾಟೀಲ ಅವರು ಒಳ ಮೀಸಲಾತಿ ವಿರೋಧಿ ನಡೆಗೆ – ಸುರೇಶ ಚಲವಾದಿ ಖಂಡನೆ.
ಗದಗ ಡಿ. 03
ಸಚಿವ ಎಚ್.ಕೆ ಪಾಟೀಲ ಅವರು ಒಳ ಮೀಸಲಾತಿ ವಿರೋಧಿ ನಡೆ ಖಂಡನೀಯವೆಂದು ಭಾರತೀಯ ಜನತಾ ಪಕ್ಷ ಎಸ್/ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ.ವಾಯ್ ಚಲವಾದಿ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಎಚ್.ಕೆ ಪಾಟೀಲ ಅವರು ಇತ್ತೀಚಿನ ದಿನಗಳಲ್ಲಿ ಗದಗ ಜಿಲ್ಲಾ ಒಳ ಮೀಸಲಾತಿ ವಿರೋಧಿ ಹೋರಾಟ ವೇದಿಕೆಯಲ್ಲಿ ಭಾಗವಹಿಸಿ ನಿಮ್ಮ ಪರವಾಗಿ ನಾನಿದ್ದೇನೆ. ನಿಮ್ಮ ಪರವಾಗಿ ನಾನು ಕ್ಯಾಬಿನೆಟ್ ಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತೇನೆ. ಅಷ್ಟೇ ಅಲ್ಲದೇ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆದು ಕೊಳ್ಳುವುದರ ಜೊತೆಗೆ ನಿಮಗೆ ನ್ಯಾಯವನ್ನು ಒದಗಿಸುವಲ್ಲಿ ನಾನು ಪ್ರಮುಖ ಪಾತ್ರವಹಿಸುತ್ತೇನೆ ಹಾಗೂ ತಾವು ಬಹಳ ಬುದ್ದಿವಂತಿಕೆ ಯಿಂದ ಈ ಸಮಸ್ಯೆಯನ್ನ ಬಗೆಹರಿಸಿ ಕೊಳ್ಳಲೇ ಬೇಕು ಎಂದು ಹೇಳುವುದರ ಮೂಲಕ ಸನ್ಮಾನ್ಯ ಸಚಿವರು ಒಳ ಮೀಸಲಾತಿಯನ್ನ ಬಹಳ ಸೂಕ್ಷ್ಮವಾಗಿ ವಿರೋಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸನ್ಮಾನ್ಯ ಎಚ್.ಕೆ ಪಾಟೀಲ ಅವರ ಬಗ್ಗೆ ಜಿಲ್ಲೆಯ ದಲಿತ ಸಮುದಾಯ ಬಹಳ ಗೌರವವನ್ನು ಇಟ್ಟುಕೊಂಡಿದೆ. ಸನ್ಮಾನ್ಯ ಕಾನೂನು ಸಚಿವರು ನಮ್ಮ ಜಿಲ್ಲೆಯವರು ಹಾಗೂ ನಮ್ಮ ಪರವಾಗಿರುವದ ರಿಂದ ಸರ್ಕಾರ ಮಟ್ಟದಲ್ಲಿ ಒಳ ಮೀಸಲಾತಿ ಜಾರಿ ಯಾಗುವದರಲ್ಲಿ ಯಾವುದೇ ಸಂದೇಹವಿಲ್ಲ ಎಂಬ ಆಶಾಭಾವನೆ ಯಿಂದಿರುವ ದಲಿತ ಸಮುದಾಯದ ಜನತೆಗೆ ಸಚಿವರ ಬಾಯಿಂದ ಇಂತಹ ನುಡಿಗಳನ್ನ ಕೇಳಿದಾಗ ದಲಿತ ಸಮುದಾಯಕ್ಕೆ ಆತಂಕ ಎದುರಾಗಿದೆ. ಸನ್ಮಾನ್ಯ ಸಚಿವರು ತಮ್ಮ ಮಾತನ್ನ ಹಿಂತೆಗೆದು ಕೊಂಡು ಒಳ ಮೀಸಲಾತಿ ಜಾರಿ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಜಿಲ್ಲೆಯ ದಲಿತ ಸಮುದಾಯ ತಮ್ಮ ಮೇಲಿಟ್ಟಿರುವ ಗೌರವವನ್ನ ಉಳಿಸಿ ಕೊಳ್ಳಬೇಕೆಂದು ಹೇಳಿದರು. ಒಳ ಮೀಸಲಾತಿ ಜಾರಿಗಾಗಿ ಕಳೆದ ಮೂರು ದಶಕಗಳ ಕಾಲ ನಿರಂತರ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ಸಾಕಷ್ಟು ದಲಿತ ಸಮುದಾಯದ ಜನ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದು ಕೊಂಡಿದ್ದಾರೆ ಅಷ್ಟಾದರೂ ಸರ್ಕಾರ ತನ್ನ ಕುರುಡುತನ ಪ್ರದರ್ಶಿಸಿರುವದು ವಿಪರ್ಯಾಸದ ಸಂಗತಿ. ಅಗಷ್ಟ 1/2024 ರಂದು ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಆಯಾ ರಾಜ್ಯ ಸರ್ಕಾರ ಜಾರಿ ಗೊಳಿಸ ಬಹುದೆಂದು ಮಹತ್ವದ ತೀರ್ಪು ನೀಡಿ ಆದೇಶಿಸಿದೆ. ತೀರ್ಪು ನೀಡಿ 5 ತಿಂಗಳು ಗತಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿ ಗೊಳಿಸದಿರುವದು ಇವರ ಒಳ ಮೀಸಲಾತಿ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತಿದೆ. ಡಾ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಾಲದಿಂದ ಹಿಡಿದು ಪ್ರಸ್ತುತ ದಿನಮಾನದ ವರೆಗೂ ಕಾಂಗ್ರೆಸ್ ದಲಿತರಿಗೆ ಒಂದಿಲ್ಲಾ ಒಂದು ರೀತಿಯಲ್ಲಿ ವಂಚಿಸುತ್ತಾ ಬಂದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಏರುವ ಸಂದರ್ಭದಲ್ಲಿ ನಾವು ದಲಿತ ಅಹಿಂದ ಹಿಂದುಳಿದ ಪರ ಎಂದು ಓಲೈಕೆ ರಾಜಕಾರಣ ಮಾಡುತ್ತದೆ. ಅಧಿಕಾರಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿಗಳ ಅನುಷ್ಟಾನಕ್ಕಾಗಿ ದಲಿತರ ಮೀಸಲು ಹಣ ಕಬಳಿಸಿ ದಲಿತರಿಗೆ ವಂಚಿಸುತ್ತಿದೆ. ಒಳ ಮೀಸಲಾತಿ ಜಾರಿ ಗೊಳಿಸದೆ ಮೂಲ ಪರಿಶಿಷ್ಟರಿಗೆ ಅನ್ಯಾಯ ವೆಸಗುತ್ತಿರುವುದು. ಇದು ರಾಜ್ಯ ಸರ್ಕಾರಕ್ಕೆ ದಲಿತರ ಬಗೆಗೆ ಇರುವ ಬದ್ದತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಳ ಮೀಸಲಾತಿ ಪಟ್ಟಿಯಿಂದ ಅಸಮಾಧಾನ ಕ್ಕೊಳಗಾದ ಕೆಲವು ಸಹೋದರ ಸಮುದಾಯಗಳಿಗೆ ಅನ್ಯಾಯ ವೆಸಗುವ ಉದ್ದೇಶ ನಮ್ಮದಲ್ಲ ಆದರೆ ನೂರಾರು ವರ್ಷಗಳ ಕಾಲ ಸಾಮಾಜಿಕ ಆರ್ಥಿಕ ಹಾಗೂ ರಾಜ್ಯಕೀಯ ಪ್ರಾತಿನಿಧ್ಯ ಸಿಗದೆ ಅವಕಾಶ ವಂಚಿತ ಎಡ ಮತ್ತು ಬಲ ಸಮುದಾಯಗಳಿಗೆ ಜಾತಿ ಜನ ಸಂಖ್ಯೆವಾರು ಒಳ ಮೀಸಲಾತಿ ಕಲ್ಪಿಸಿ ಸರ್ವರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವೆಂದು ಹೇಳಿದರು. ಆದಕಾರಣ ಸರ್ಕಾರ ಪರಿಶಿಷ್ಟ ಸಮುದಾಯಗಳ ನೋವುಗಳನ್ನ ಅರ್ಥೈಸಿ ಕೊಂಡು ಕೂಡಲೇ ಸದಾಶಿವ ಆಯೋಗದ ವರದಿ ಜಾರಿ ಗೊಳಿಸಬೇಕು ಇಲ್ಲದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.