ಪದವಿದರ ಸಹೋದರರು 1 ಎಕರೆಯಲ್ಲಿ 102 ಟನ್ ಕಬ್ಬು ಬೆಳೆದ ರೈತರು.
ಚಿರ್ಚನಕಲ್ಲ ಡಿ.04
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಚಿರ್ಚನಕಲ್ಲ ಗ್ರಾಮದ ಪ್ರಗತಿಪರ ರೈತ ಸಹೋದರರಾದ ಹಣಮಗೌಡ & ಆನಂದ ಪಾಟೀಲ ಅವರು ಬೆಳೆದ ಕಬ್ಬು 1 ಎಕರೆಯಲ್ಲಿ 102 ಟನ್ ಕಬ್ಬು ಬೆಳೆದ ರೈತರು. ಅವರು ಸಾವಯವ ಮತ್ತು ರಾಸಾಯನಿಕ ಸಮ ಪ್ರಮಾಣದಲ್ಲಿ ಬಳಸಿ. ಹಣಿ ನೀರಾವರಿ ಮುಖಾಂತರ ಒಂದು ಎಕರೆ ಕ್ಷೇತ್ರದಲ್ಲಿ 265 ತಳಿಯ 102 ಟನ್ ಕಬ್ಬು ಬೆಳೆದಿದ್ದಾರೆ.
ಚಿರ್ಚನಕಲ್ಲ ಗ್ರಾಮದ ಪದವಿದರರಾದ ಸಹೋದರಿಬ್ಬರು ಅವರು ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ನೆರೆಯ ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ತಾಲೂಕಿನ ಸುಧೀರ್ ಕತ್ತಿ ಅವರ ಮಾರ್ಗದರ್ಶನದಲ್ಲಿ ಈ ಕಬ್ಬು ಬೆಳೆದಿರುವುದು. 2023 ಸೆಪ್ಟೆಂಬರ್ 18 ರಂದು ಕಬ್ಬು ನಾಟಿ ಮಾಡಿದ್ದಾರೆ.
ಬರಗಾಲದ ಮಧ್ಯೆಯೂ 15 ರಿಂದ 18 ಅಡಿ ಕಬ್ಬು ಎತ್ತರ ಬೆಳೆಯಿತು. 40 ರಿಂದ 45 ಗಣಿಕೆಗಳನ್ನು ಹೊಂದಿದೆ, ಒಂದು ಕಬ್ಬಿನ ಸರಾಸರಿ ತೂಕ 3 ಕೆಜಿಯಿಂದ 3.5 ಕೆ.ಜಿ ವರೆಗೆ ಇದೆ. ನಾಟಿಯಿಂದ ಕಟಾವಿನವರೆಗೆ ವೆಚ್ಚ ಮಾಡಿದ್ದು ಕೇವಲ 20 ಸಾವಿರ ಎಂಬುದು ವಿಶೇಷ.ನಂತರ ಕಬ್ಬು ಕಟಾವು ಮಾಡಿ ಮುದ್ದೇಬಿಹಾಳ ತಾಲೂಕಿನ ಯರಗಲ್ಲ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಕಳಿಸಲಾಯಿತು. ರೈತ ಸಂಪರ್ಕ ನಂಬರ್ 8722665019 ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ