ಸಿದ್ಧಶ್ರೀ ಚಲನ ಚಿತ್ರೋತ್ಸವಕ್ಕೆ – ಚಲನ ಚಿತ್ರಗಳ ಆಹ್ವಾನ.
ಸಿದ್ಧನಕೊಳ್ಳ ಡಿ. 60

ಬಾಗಲಕೋಟ ಜಿಲ್ಲೆಯ ಐತಿಹಾಸಿಕ ಸ್ಥಳ ಐಹೊಳೆ ಹತ್ತಿರದ ಸುಕ್ಷೇತ್ರ ಉತ್ತರ ಕರ್ನಾಟಕದ ಹೆಮ್ಮೆಯ ಕಲಾ ಪೋಷಕರ ಮಠ ಸಿದ್ಧನಕೊಳ್ಳದ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ – 2025 ಜ. 14, 15 ರಂದು ಜರುಗಲಿದ್ದು, ಜ. 14 ರಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ, ಜ.15 ರಂದು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಲಿದೆ ಎಂದು ಧರ್ಮಾಧಿಕಾರಿಗಳಾದ ಡಾ, ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ. ಸಿದ್ಧಶ್ರೀ ಉತ್ಸವದಲ್ಲಿ ಸಹಸ್ರಾರು ಭಕ್ತರು ಸೇರುತ್ತಿದ್ದು. ಸಂಗೀತ, ನೃತ್ಯ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನೆರವೇರುತ್ತವೆ. ರಾಜ್ಯ, ಹೊರ ರಾಜ್ಯಗಳ ವಿವಿಧ ಸಾಧಕರು, ಪ್ರತಿಭಾನ್ವಿತ ಉದಯೋನ್ಮುಖ ಕಲಾ ಪ್ರತಿಭೆಗಳಿಗೂ ವೇದಿಕೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಹಮ್ಮಿ ಕೊಳ್ಳಲಾಗಿದೆ. ಚಿತ್ರೋತ್ಸವದ ಆಯ್ಕೆ ಸಮಿತಿ ಈಗಾಗಲೇ ರಚಿಸಲಾಗಿದೆ. ಚಲನ ಚಿತ್ರ ಪತ್ರಕರ್ತರಾದ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಜೂನಿಯರ್ ಉಪೇಂದ್ರ ವೀರೇಶ ಪುರವಂತ, ಚಲನ ಚಿತ್ರ ಕಲಾವಿದ ಸಂಗನಗೌಡ್ರು ಕುರುಡಗಿ, ಚಲನ ಚಿತ್ರ ಛಾಯಾಗ್ರಾಹಕ ಶಿವಶರಣ ಸುಗ್ನಳ್ಳಿ, ಚಲನ ಚಿತ್ರ ನಿರ್ದೇಶಕ ಅರವಿಂದ ಮುಳಗುಂದ, ಚಲನ ಚಿತ್ರ ನಿರ್ದೇಶಕ, ನಿರ್ಮಾಪಕ ಲೋಕೇಶ ವಿದ್ಯಾಧರ, ಚಲನ ಚಿತ್ರ ಮತ್ತು ಕಿರುತೆರೆ ಕಲಾವಿದೆ ಶ್ರೀಮತಿ ಸುನಂದಾ ಕಲ್ಬುರ್ಗಿ, ಭರತನಾಟ್ಯ ಕಲಾವಿದೆ ಕೃತ್ತಿಕಾ ಕಾರ್ಯ ನಿರ್ವಹಿಸಲಿದ್ದಾರೆ.

ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಇನ್ನೂ ಬಿಡುಗಡೆ ಯಾಗದ ತಮ್ಮ 2024. ರಲ್ಲಿ ನಿರ್ಮಾಣವಾದ, ಆಗುತ್ತಿರುವ ಹೊಸ ಚಲನ ಚಿತ್ರಗಳ, ಟೆಲಿಫಿಲ್ಮ್, ಕಿರು ಚಿತ್ರಗಳ, ಟ್ರೇಲರ್, ಟೀಸರ್ ಮತ್ತು ಪೋಸ್ಟರಗಳನ್ನು ಚಿತ್ರೋತ್ಸವದಲ್ಲಿ ಬಿಡುಗಡೆ ಮಾಡಬಹುದು. ಯಾವುದೇ ಪ್ರವೇಶ ಶುಲ್ಕಗಳಿಲ್ಲದೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದ ಚಲನ ಚಿತ್ರದ ತಂಡಗಳಿಗೆ ಅಭಿನಂದನಾ ಪತ್ರ, ನೆನಪಿನ ಸ್ಮರಣಿಕೆ , ಕಿರುಚಿತ್ರ ತಂಡಗಳಿಗೆ ಅಭಿನಂದನಾ ಪತ್ರಗಳನ್ನು ನೀಡಲಾಗುತ್ತದೆ. ಆಸಕ್ತತರು ಡಿಸೆಂಬರ್ 31 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳಬೇಕು. ನಂತರ ಬಂದವರಿಗೆ ಅವಕಾಶವಿಲ್ಲ. ಶ್ರೀಗಳ ಮತ್ತು ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ. ಆಯ್ಕೆ ಯಾದವರಿಗೆ ನಂತರ ತಿಳಿಸಲಾಗುತ್ತದೆ. ತಮ್ಮ ಟೀಸರ್, ಟ್ರೇಲರ್, ಪೋಸ್ಟರಗಳನ್ನು ಡಾ, ಪ್ರಭು ಗಂಜಿಹಾಳ, ವಾಟ್ಸಪ್ ನಂ-9448775346 ಇಲ್ಲಿಗೆ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಲನ ಚಿತ್ರೋತ್ಸವ ವಿಭಾಗದ ಡಾ, ಪ್ರಭು ಗಂಜಿಹಾಳ.ಮೊ.9448775346, ಡಾ, ವೀರೇಶ ಹಂಡಿಗಿ. ಮೊ.9060933596, ವೀರೇಶ ಐಹೊಳೆ. ಮೊ.7026062364, ಸಂಗನಗೌಡ್ರು ಕುರುಡಗಿ. ಮೊ.8861811128 ಇವರನ್ನು ಸಂಪರ್ಕಿಸ ಬಹುದಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
*****
-ಡಾ.ಪ್ರಭು ಗಂಜಿಹಾಳ
ಮೊ-9448775346