ರಾಜ್ಯ ಮಟ್ಟದ ಅಟ್ಯಾ ಪಟ್ಯಾ ಚಾಂಪಿಯನ್ಷಿಪ್ – ಡಿ. 7. ಮತ್ತು 8. ರಂದು ಜರುಗಲಿದೆ.

ಗದಗ ಡಿ.06

ಕರ್ನಾಟಕ ರಾಜ್ಯ ಅಟ್ಯಾ -ಪಟ್ಯಾ ಸಂಸ್ಥೆ, ದಾವಣಗರೆ, ಗದಗ ಜಿಲ್ಲಾ ಅಟ್ಯಾ -ಪಟ್ಯಾ ಸಂಸ್ಥೆ, ಗದಗ ಹಾಗೂ ಚೈತನ್ಯ ಸ್ಪೋರ್ಟ್ಸ್ ಕ್ಲಬ್, ನರೇಗಲ್ಲ ಇವರ ಸಂಯುಕ್ತ ಆಶ್ರಯದಲ್ಲಿ 32 ನೇ. ರಾಜ್ಯ ಮಟ್ಟದ ಹೊನಲು ಬೆಳಕಿನ ಅಟ್ಯಾ – ಪಟ್ಯಾ ಚಾಂಪಿಯನ್ ಶಿಪ್ ಡಿ. 7 ರ ಸಂಜೆ 5 ಘಂಟೆಗೆ ಸ್ಥಳಿಯ ಎಂ,ಸಿ,ಎಸ್ ಮೈದಾನದಲ್ಲಿ ಜರುಗಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಅಟ್ಯಾ – ಪಟ್ಯಾ ಸಂಸ್ಥೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೆರವೇರಿಸಲಿದ್ದಾರೆ, ಅಧ್ಯಕ್ಷತೆಯನ್ನು ರೋಣ ಶಾಸಕ ಹಾಗೂ ಕರ್ನಾಟಕ ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್ ಪಾಟೀಲ ವಹಿಸುವರು, ಮುಖ್ಯ ಅತಿಥಿಗಳಾಗಿ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೊಗೇರಿ, ರಾಜ್ಯ ಅಟ್ಯಾ – ಪಟ್ಯಾ ಸಂಸ್ಥೆಯ ಉಪಾಧ್ಯಕ್ಷ ಬಿ.ವಾಯ್ ಬರಗಾಲಿ, ಬಿ.ಕೆ ಗಡಿಯಪ್ಪನವರ, ಅಟ್ಯಾ – ಪಟ್ಯಾ ಸಂಸ್ಥೆಯ ರಾಜ್ಯ ಪ್ರಭಾರಿ ಕಾರ್ಯದರ್ಶಿ ಎಲ್.ಸಿ ಲಮಾಣಿ, ಗದಗ ಜಿಲ್ಲಾ ಅಟ್ಯಾ – ಪಟ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಟಿ ನಡಮನಿ, ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ, ಡಾ, ಎ.ಡಿ ಸಾಮುದ್ರಿ, ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಆರ್.ಎಸ್ ನರೇಗಲ್ಲ, ನ್ಯಾಯವಾದಿ ಉಮೇಶ ಸಂಗನಾಳಮಠ, ಯುವ ಮುಖಂಡ ಬಸವರಾಜ ವಂಕಲಕುಂಟಿ, ಪ.ಪಂ ಮಾಜಿ ಅಧ್ಯಕ್ಷ ಕಲ್ಮೇಶ ತೊಂಡಿಹಾಳ, ನಿವೃತ್ತ ಶಿಕ್ಷಕ ಎಂ.ಎಸ್ ದಡೆಸೂರಮಠ, ಕರವೇ ರಾಜ್ಯ ಕಾರ್ಯದರ್ಶಿ ಹನಮಂತ ಅಬ್ಬಿಗೇರಿ, ಚೈತನ್ಯ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಎನ್.ಕೆ ಬೇವಿನಕಟ್ಟಿ, ಮುಖಂಡ ಶಿವನಗೌಡ ಪಾಟೀಲ, ನ್ಯಾಯವಾದಿ ವೀರೇಶ ಬಂಗಾರಿಶೆಟ್ಟರ, ಎಂ.ಸಿ.ಎಸ್ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ತಿಮ್ಮರಡ್ಡಿ ಬಂಡಿವಡ್ಡರ, ಕೆ..ಜಿ.ಎಸ್ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕ ಬಸವರಾಜ ಕುರಿ, ರಾಷ್ಟ್ರೀಯ ಕಬಡ್ಡಿ ಆಟಗಾರ ಸಂತೋಷ ಹನಮಸಾಗರ ಹಾಗೂ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮುಖ್ಯ ತರಬೇತುದಾರ ಮಹಮ್ಮದ ರಫೀಕ ರೇವಡಿಗಾರ ಹಾಗೂ ಕಾರ್ಯದರ್ಶಿ ಸಂತೋಷ ಯಳಮಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ. ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button