ಮಾಕ ನಡಕು ಗ್ರಾ.ಪಂ ಅಧ್ಯಕ್ಷರಾಗಿ ಎಂ.ಸಿ ಅಶೋಕ್ ನಾಯ್ಕ್, ಉಪಾಧ್ಯಕ್ಷರಾಗಿ ಬೋರಮ್ಮ – ಅವಿರೋಧ ಆಯ್ಕೆ.
ಮಾಕ ನಡಕು ಡಿ.07

ಖಾನಾ ಹೊಸಹಳ್ಳಿ ಸಮೀಪದ ಚಿಕ್ಕ ಜೋಗಿಹಳ್ಳಿ ಗ್ರಾಮದಲ್ಲಿರುವ ಮಾಕ ನಡಕು ಗ್ರಾಮ ಪಂಚಾಯಿತಿಯಲ್ಲಿ ರಾಜೀನಾಮೆ ಯಿಂದ ತೆರವಾದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಿತು. ಈ ಹಿಂದೆ ಇದ್ದ ಅಧ್ಯಕ್ಷ ರಾಜೇಶ್ ನಾಯ್ಕ್, ಉಪಾಧ್ಯಕ್ಷರಾದ ಮಾಲಶ್ರೀ ಚಂದ್ರು. ರಾಜಿನಾಮೆ ಯಿಂದ ಚುನಾವಣೆ ನಡೆಯಿತು. ಗ್ರಾಮ ಪಂಚಾಯಿತಿ ಒಟ್ಟು ಸದಸ್ಯರ ಸಂಖ್ಯೆ 20 ಇದ್ದು 18 ಜನ ಸದಸ್ಯರು ಹಾಜರಿದ್ದರು. ಅಧ್ಯಕ್ಷರಾಗಿ ಎಂ.ಸಿ ಅಶೋಕ್ ನಾಯ್ಕ್, ಉಪಾಧ್ಯಕ್ಷರಾಗಿ ಬೋರಮ್ಮ ಗಂಗಾಧರ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ತಹಸಿಲ್ದಾರ ಎಂ.ರೇಣುಕಾ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್, ಕಾರ್ಯದರ್ಶಿ ಪ್ರಕಾಶ್, ಕಂದಾಯ ನಿರೀಕ್ಷಕ ಚೌಡೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಮರಳು ಸಿದ್ದಪ್ಪ. ಮತ್ತು ಚುನಾವಣೆ ಇಲಾಖೆ ಸಿಬ್ಬಂದಿ. ಹಾಗೂ ಮುಖಂಡರಾದ ಪ್ರಥಮ ದರ್ಜೆ ಗುತ್ತಿಗೆದಾರರಾದ ರಘುಕುಮಾರ್ ನಾಯ್ಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್, ನಿವೃತ್ತ ಡಿ.ವೈ.ಎಸ್ಪಿ ಓಂಕಾರ್ ನಾಯ್ಕ್. ಯಜಮಾನ ಹಿರಿಯ ನಾಯ್ಕ್, ಎಂ.ಡಿ ರಮೇಶ್ ನಾಯ್ಕ್, ರಾಜಶೇಖರ್ ನಾಯ್ಕ್, ಶಾಂತಕುಮಾರ್ ನಾಯ್ಕ್, ಎಂ.ವಿ ಪ್ರಕಾಶ್, ಎಂ.ವಿ ತಿಪ್ಪೇಸ್ವಾಮಿ, ಲವಕುಮಾರ್ ನಾಯ್ಕ್, ಎಂ.ಸಿ ಅನಿಲ್ ಕುಮಾರ್ ನಾಯ್ಕ್, ಹೊಸಹಳ್ಳಿ ಪೊಲೀಸ್ ಠಾಣೆಯ ಪೇದೆಗಳಾದ ಮಹಾಂತೇಶ್ ಮತ್ತು ವೀಣಾ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿವರ್ಗ ಇತರರು ಇದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ. ಹೊಸಹಳ್ಳಿ