ಶ್ರೀ ಗುರು ವೀರಘಂಟಿ ಮಡಿವಾಳೇಶ್ವರ ಜಾತ್ರೆ ಜೋಡು ರಥೋತ್ಸವ ಜರುಗುವುದು.
ಕಲಕೇರಿ ಡಿ.11

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಹಾ ಕ್ಷೇತ್ರ ಕಲಕೇರಿ ಶ್ರೀ ಗುರು ವೀರಘಂಟಿ ಮಡಿವಾಳೇಶ್ವರ ಜಾತ್ರೆ ಜೋಡು ರಥೋತ್ಸವ ಜರುಗುವುದು. ಡಿಸೆಂಬರ್ ರವಿವಾರ ರಂದು 15/12/2024 ಸಾಯಂಕಾಲ 5:00 ಗೆ ಜರಗುವುದು ಕಲಕೇರಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಾಜ್ ಅಹ್ಮದ್ ಸಿರಸಗಿ. ಉಪಾಧ್ಯಕ್ಷರು ಪರಶುರಾಮ್ ಬೇಡರ ಮತ್ತು ಸದಸ್ಯರಾದ ಚಾಂದ್ ಪಾಷಾ ಹವಾಲ್ದಾರ್. ದೌಲತ್ ಪಟೇಲ್ ಬಿರಾದಾರ್ ಗ್ರಾಮ ಪಂಚಾಯಿತಿಯ ವತಿಯಿಂದ ಕಲಕೇರಿ ಜಾತ್ರಾ ನಿಮಿತ್ಯವಾಗಿ ಚರಂಡಿಗಳು ಕಸ ಕಡ್ಡಿ ಸ್ವಚ್ಛತೆ ಕಾರ್ಯಕ್ರಮ ಮತ್ತು ಬಂದಂತ ಭಕ್ತರಿಗೆ ನೀರಿನ ವ್ಯವಸ್ಥೆ ಮತ್ತು ಊರಿನಲ್ಲಿ ಬೆಳಕಿನ ವ್ಯವಸ್ಥೆ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡುವುದು ಒಂದು ವ್ಯವಸ್ಥೆ ಗ್ರಾಮ ಪಂಚಾಯಿತಿಯ ವತಿಯಿಂದ ಮಾಡಿದರು.

ಮತ್ತು ಆರೋಗ್ಯ ಇಲಾಖೆ ವತಿಯಿಂದ ಬಂದಂತ ಎಲ್ಲಾ ಸಾರ್ವಜನಿಕರಿಗೆ ತಪಾಸಣೆ ಮಾಡುವುದು ಎಂದು ಆರೋಗ್ಯ ಇಲಾಖೆಯವರು. ಪೊಲೀಸ್ ಇಲಾಖೆ ವತಿಯಿಂದ ಬಂದಂತ ಎಲ್ಲಾ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ರಸ್ತೆಗಳಲ್ಲಿ ಜನರಿಗೆ ತೊಂದರೆ ಆಗದಂತೆ ಸಹಕಾರ ನೀಡುತ್ತೇವೆ ಎಂದು ಕಲಕೇರಿ ಪೊಲೀಸ್ ಠಾಣೆಯ ಪಿ.ಎಸ್.ಐ ಸುರೇಶ್ ಮಂಟೂರ್ ತಿಳಿಸಿದರು. ಕಲಕೇರಿ ಜಾತ್ರಾ ನಿಮಿತ್ಯ ತೇರಿನ ಕಮೀಟಿ ವತಿಯಿಂದ ಬಂದಂತ ಭಕ್ತಾದಿಗಳಿಗೆ ದೇವಸ್ಥಾನದ ಒಳಗೆ ಹೋಗುವಂತ ವ್ಯವಸ್ಥೆ ನಡೆಸಿದರು. ಮತ್ತು ಕಲಕೇರಿ ಗ್ರಾಮದಲ್ಲಿ ದನಗಳ ಜಾತ್ರೆ ಸೋಮವಾರ ದಿಂದ ನಡೆಯುವುದು ಮಲ್ಲಿಕಾರ್ಜುನ್ ಸಿದ್ದಣ್ಣ ಕೌದಿ ಇವರ ಹೊಲದಲ್ಲಿ. ಸೋಮವಾರ ಏದಿಂದ ಪ್ರಾರಂಭವಾಗುವುದು ಎಂದು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ