ನ್ಯಾಯಯುತವಾದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ಬೇಡಿಕೆಯ ಪರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿ ಮಾತನಾಡುವುದಾಗಿ – ಭರವಸೆ ನೀಡಿದ ಶಾಸಕರು ಡಾ, ಎನ್.ಟಿ ಶ್ರೀನಿವಾಸ್
ಕೂಡ್ಲಿಗಿ ಡಿ.14

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಂಡೂರ್ ರಸ್ತೆಯಲ್ಲಿ ಬರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದಿಂದ ಶನಿವಾರರಂದು ಒಳ ಮೀಸಲಾತಿ ಜಾರಿಗಾಗಿ ರಾಜ್ಯದ 224 ಶಾಸಕರ ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಚಳಿಗಾಲದ ಅಧಿವೇಶನದಲ್ಲಿ ಒಳ ಮೀಸಲಾತಿಯ ಜಾರಿ ಮಾಡಲು ಧ್ವನಿಯೆತ್ತುವಂತೆ ಮನೆಗಳ ಹಾಗೂ ಕಚೇರಿಯ ಮುಂದೆ ತಮಟೆ ಚಳುವಳಿ ಮಾಡುವುದರ ರಾಜ್ಯ ಮುಖಂಡರ ಹೋರಾಟದ ಕರೆಯ ಮೇರೆಗೆ ಕೂಡ್ಲಿಗಿ ಪಟ್ಟಣದಲ್ಲೂ ಸಹ ಕೂಡ್ಲಿಗಿ ತಾಲೂಕಿನ ಮಾದಿಗ ಸಮುದಾಯದವರು ಹೋರಾಟಗಾರರು ತಮಟೆ ಚಳುವಳಿಯ ಹೋರಾಟಕ್ಕೆ ಭಾಗವಹಿಸಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗಾಗಿ ಮಾದಿಗರ ಐಕ್ಯತೆ ವೇದಿಕೆಯಿಂದ ಮಾದಿಗ ಸಮುದಾಯದ ಅನೇಕ ಮುಖಂಡರುಗಳು ಭಾಗವಹಿಸಿ ಕೂಡ್ಲಿಗಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತಮಟೆ ಚಳುವಳಿಯ ಮೆರವಣಿಗೆ ಸಾಗಿ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಎನ್.ಟಿ ಶ್ರೀನಿವಾಸ್ ರವರ ಕಚೇರಿಗೆ ಹೋರಾಟಗಾರರು ಬಂದು ತಮ್ಮ ಪ್ರಮುಖ ಬೇಡಿಕೆಯಾದ ಸುಮಾರು 30 ವರ್ಷಗಳಿಂದ ಒಳ ಮೀಸಲಾತಿ ವರ್ಗೀಕರಣದ ವಿಷಯವಾಗಿ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಿ ಕಾಲಹರಣ ಆಯೋಗ ಬೇಡ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡವ ಕುರಿತು ಶಾಸಕರೇ, ಅಧಿವೇಶನ ಸಭೆಯಲ್ಲಿ ಮೀಸಲಾತಿ ಜಾರಿ ಮಾಡಲು ಮಾದಿಗ ಸಮುದಾಯದ ಪರವಾಗಿ ಧ್ವನಿ ಎತ್ತಿ ಮಾತನಾಡಲು ತಮಟೆ ಚಳುವಳಿ ಮೂಲಕ ಮನವಿ ಮಾಡಲಾಯಿತು.


ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಎನ್.ಟಿ ಶ್ರೀನಿವಾಸ್ ರವರು ಹೋರಾಟಗಾರರ ಮನವಿ ಸ್ವೀಕರಿಸಿದ ಅವರು ಶೋಷಿತ ಸಮುದಾಯವಾಗಿರುವ ಮಾದಿಗ ಸಮುದಾಯಕ್ಕೆ ನಿಮ್ಮ ಹೋರಾಟವನ್ನು ಅರಿತು ನಾನು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವಂತಹ ಅಧಿವೇಶನದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಕುರಿತು ಮಾತನಾಡುವ ಭರವಸೆ ನೀಡಿದರು.ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಮನವಿ ಪತ್ರ ನೀಡಿದ ನನಗೆ ಸರ್ಕಾರಕ್ಕೂ ಸಹ ನಿಮ್ಮ ಪರವಾಗಿ ಹಾಗೂ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಪರವಾಗಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರಾದ ಎಸ್.ದುರ್ಗೇಶ್, ಮಾದಿಗ ಮುಖಂಡರಾದ ರಾಘವೇಂದ್ರ ಸಾಲುಮನಿ, ಹೆಚ್ ರಮೇಶ್ ಮಾಜಿ ಸೈನಿಕರು, ಮಹಿಳಾ ಮುಖಂಡರಾದ ಶ್ರೀಮತಿ ವಿಶಾಲಕ್ಷಮ್ಮ ರಾಜಣ್ಣ, ಡಿ.ಎಚ್ ದುರ್ಗೇಶ್, ವಕೀಲರು, ಕುಡುತಿನಿ ಮಹೇಶ್ ಹೆಗ್ಡಾಳ್, ಪಿ.ಸಂತೋಷ್ ಕುಮಾರ್, ಮುಖಂಡರಾದ ತಿಮ್ಮನಹಳ್ಳಿ ಬಸಣ್ಣ, ಎಳ್ನೀರ್ ಗಂಗಣ್ಣ, ಬಿ. ಮಹೇಶ್, ಕಂದಗಲ್ ಪರಶುರಾಮ್, ಹೆಚ್. ಪರಶುರಾಮ್, ಬಿ. ಶಿವರಾಜ್, ಗುಡೆಕೋಟೆ ನಾಗರಾಜ್, ಚೌಡಾಪುರ ಬಸರಾಜ್, ಹೊಸಳ್ಳಿ ಹೊನ್ನೂ ರ ಸ್ವಾಮಿ, ಹೊಸಳ್ಳಿ ಬಸವರಾಜ್, ಕುಪ್ಪನಕೇರಿ ತಾಪಾಲಿ ಅಂಜಿನಪ್ಪ ಇನ್ನು ಅನೇಕ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ