ಸಚಿವ ಎನ್.ಎಸ್ ಬೋಸರಾಜು ಸಾಹೇಬ್ರ ನಂಬಿದ ಜನರಿಗೆ – ಗಲೀಜು ನೀರು ಕುಡಿಯುತ್ತಿರುವ ಜುಮ್ಮಲದೊಡ್ಡಿಯ ಜನರು.
ಮಾನ್ವಿ ಡಿ.14

ಮಾನ್ವಿ ಪಟ್ಟಣದ ಜನತೆ ಶುದ್ಧ ನೀರು ಕುಡಿಯುತ್ತಾರೆಂದು ದಾಖಲೆಗಳಲ್ಲಿ ನೋಡಬಹುದು. ಆದರೆ ವಾಸ್ತವ ನೋಡಿದರೆ ಜುಮ್ಮಲದೊಡ್ಡಿಯ ಭಾಗದ ಜನರು ಹಸಿರು ಬಣ್ಣಕ್ಕೆ ತಿರುಗಿದ ಗಲೀಜು ನೀರು ಕುಡಿಯಬೇಕಾದ ದುಸ್ಥಿತಿ ಇದೇ ನೋಡಿ ಸ್ವಾಮಿ ಶಾಸಕ ಹಂಪಯ್ಯ ನಾಯಕರೆ.
ಶಾಸಕ ಹಂಪಯ್ಯ ನಾಯಕರೆ, ಸಚಿವ ಎನ್.ಎಸ್ ಬೋಸರಾಜು ಸಾಹೇಬ್ರೆ ನೀವು ಅಂದರೆ ಮಾನ್ವಿ ಜನತೆ ಪ್ರೀತಿ ಇಟ್ಟು ಕೊಂಡಿದ್ದಾರೆ. ಆದರೆ ಮಾನ್ವಿ ಜನತೆಗೆ ಶುದ್ಧವಾದ ನೀರು ಕೊಡೊದು ಯಾವಾಗ ಜುಮ್ಮಲದೊಡ್ಡಿಯ ನೀರಿನ ಟ್ಯಾಂಕ್ ನಿಂದ ನೀರು ಸರಬರಾಜು ಮಾಡೋದು ಯಾವಾಗ ಎಂದು ಹುಸೇನ್ ಭಾಷಾ ಗಂಭೀರ ಆರೋಪ ಮಾಡಿದ್ದಾರೆ.
ಜುಮ್ಮಲದೊಡ್ಡಿಯ ಕುಡಿವ ನೀರಿನ ಟ್ಯಾಂಕ್ ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಸಹ ನೀರು ಸರಬರಾಜು ಆಗದೆ ತುಕ್ಕು ಹಿಡಿಯುವ ಹಂತಕ್ಕೆ ಬಂದಿದೆ. ಶಾಸಕ ಹಂಪಯ್ಯ ನಾಯಕರೆ ನಿಮಗೆ ಮತ ಹಾಕಿದ ಜನರಿಗೆ ನೀರಿನ ಸೌಲಭ್ಯ ಕೊಡುವಿರಾ ಅಥವಾ ಯಾರಾದರು ಹಾಳಾಗಲಿ ನಾವು ಚೆನ್ನಾಗಿದ್ದರೆ ಸಾಕು ಎಂಬ ನಿಮ್ಮ ಕಲ್ಪನೆನಾ ಎಂದು ಕೆ.ಆರ್.ಎಸ್ ಮುಖಂಡರ ಆರೋಪವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ