ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆ ಅಂದರೆ – ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ಜಾತ್ರೆ ಪ್ರತೀತಿ.
ಕಲಕೇರಿ ಡಿ.16

ತಾಳಿಕೋಟೆ ತಾಲೂಕಿನ ಮಹಾ ಕ್ಷೇತ್ರ ಕಲಕೇರಿ ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ದೇವರ ಜಾತ್ರೆ. ಭಾನುವಾರ ದಂದು ಸಾಯಂಕಾಲ 5:00 ಗಂಟೆಗೆ ಜೋಡು ರಥೋತ್ಸವ ಅದ್ದೂರಿಯಿಂದ ಜರುಗಿತು. ಕರ್ನಾಟಕದಲ್ಲಿ ಅತಿ ದೊಡ್ಡ ಜಾತ್ರೆ ಕಲಕೇರಿ ಗ್ರಾಮದ ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ದೇವರ ಜಾತ್ರೆ. ಹತ್ತಾರು ಸಾವಿರ ಭಕ್ತರು ಸೇರಿದಂತೆ ಜೋಡು ರಥೋತ್ಸವ ಜರುಗಿತು. ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂದರೆ ತಾಳಿಕೋಟಿ ತಾಲೂಕಿನ ಕಲಕೇರಿ ಜಾತ್ರೆ. ಈ ಸಂದರ್ಭದಲ್ಲಿ ಪ್ರಕಾಶ್ ಯರನಾಳ ಶ್ರೀ ಗುರು ವೀರಗಂಟೈ ಮಡಿವಾಳೇಶ್ವರ ಜಾತ್ರೆ ಜೋಡು ರಥೋತ್ಸವ ಅದ್ದೂರಿಯಿಂದ ನಡೆಯಿತು ಎಂದು ತಿಳಿಸಿದರು. ಮೈಬೂಬ್ ಮೇಲಿನಮನಿ ಕಲಕೇರಿಯ ಜಾತ್ರೆ ಜೋಡು ರಥೋತ್ಸವ ನಮ್ಮೂರ ಜಾತ್ರೆ ಶಾಂತಿಯುವಾಗಿ ನಡೆಯಿತು ಎಂದು ತಿಳಿಸಿದರು.
ಜಾತ್ರಾ ಕಮಿಟಿಯ ಗ್ರಾಮ ಪಂಚಾಯಿತಿಯ ಸದಸ್ಯರಾದ ಸುಧಾಕರ್ ಅಡಿಕಿ ಇವರು ಕಲಕೇಯ ಜೋಡು ರಥೋತ್ಸವದ ಸಾಯಂಕಾಲ ನಾಲ್ಕು ಗಂಟೆಯಿಂದ ಐದು ಗಂಟೆವರೆಗೂ 21 ಪೂಜೆಗಳನ್ನು ಸಲ್ಲಿಸಿ ತದನಂತರ ಸಿಡಿಗಾಯಿಯನ್ನು ಒಡೆದು ಜೋಡು ರಥೋತ್ಸವ ನಡೆಯುವುದು ಎಂದು ಈ ಹತ್ತಾರು ಸಾವಿರ ಭಕ್ತರು ಪಾಲ್ಗೊಂಡು ಶ್ರೀ ಗುರು ವೀರಘಂಟೈ ಮಡಿವಾಳೇಶ್ವರರಿಗೆ ಸೇವೆಯನ್ನು ಸಲ್ಲಿಸಿದಂತ ಎಲ್ಲಾ ಭಕ್ತಾದಿಗಳಿಗೆ ನಮ್ಮೂರ ಜಾತ್ರೆ ಅತಿ ದೊಡ್ಡ ಜಾತ್ರೆ ಶ್ರೀ ವೇದಮೂರ್ತಿ ಮಲ್ಲಯ್ಯ ಗದ್ದಿಗಿ ಮಠ ಇವರ ನೇತೃತ್ವದಲ್ಲಿ ದೇವಸ್ಥಾನದ ಸಂಭ್ರಮ ನಡೆಯಿತು ಹತ್ತಾರು ಸಾವಿರ ಭಕ್ತಾದಿಗಳಿಗೆ ಆಶೀರ್ವಾದ ನೀಡಿದರು ಎಂದು ತಿಳಿಸಿದರು.ಕಲಕೇರಿಯ ಪೊಲೀಸ್ ಠಾಣೆ ಪಿ.ಎಸ್.ಐ ಸುರೇಶ್ ಮಂಟೂರ್ ಮತ್ತು ಪೊಲೀಸ್ ಸಿಬ್ಬಂದಿ ಕಲಕೇರಿ ಜಾತ್ರೆಯಲ್ಲಿ ಬಂದಂತ ಜನರಿಗೆ ಯಾವ ತೊಂದರೆ ಆಗದಂತೆ ಸಹಕಾರ ಮಾಡಿದರು ಇವರಿಗೆ ಕಲಕೇರಿ ಗ್ರಾಮಸ್ಥರಿಂದ ಮತ್ತು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ಸದಸ್ಯರುಗಳಿಗೆ ಗ್ರಾಮಸ್ಥರಿಂದ ಅಭಿನಂದನೆಗಳನ್ನು ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ