ಚಿಕ್ಕ ಜೋಗಿಹಳ್ಳಿಯಲ್ಲಿ ನಡೆದ ಡಾ. ವಿಷ್ಣುವರ್ಧನ್ ರವರ 14ನೇ ಪುಣ್ಯ ಸ್ಮರಣೆ ಅಂಗವಾಗಿ ಗಾನ ನೃತ್ಯೋತ್ಸವ ಕಾರ್ಯಕ್ರಮ.
ಚಿಕ್ಕ ಜೋಗಿಹಳ್ಳಿ ಜನೇವರಿ.1





ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮಕ್ಕಳಿಗೆ ಬಾಲ್ಯದಿಂದಲೇ ಪೋಷಕರು ಕಲಿಸಿದಾಗ ಮಾತ್ರ ಸುಸಂಸ್ಕೃತ ವ್ಯಕ್ತಿಗಳಾಗಿ ನಿರ್ಮಾಣವಾಗಲು ಸಾಧ್ಯ ಎಂದು ರೈತ ಮುಖಂಡ ಗುರುಲಿಂಗಣ್ಣ ತಿಳಿಸಿದರು. ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ ಹಾಗೂ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಬಳಗದ ವತಿಯಿಂದ ಡಾ. ವಿಷ್ಣುವರ್ಧನ್ ರವರ 14 ನೇ ಪುಣ್ಯ ಸ್ಮರಣೆ ಅಂಗವಾಗಿ “ಗಾನ ನೃತ್ಯೋತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಕಲೆ, ಸಂಸ್ಕೃತಿ ಶ್ರೀಮಂತವಾಗಿದೆ ಇಂತಹ ಕಲೆಯನ್ನು ಮತ್ತು ಕಲಾವಿದರನ್ನು ಗುರ್ತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ ಕಲಾವಿದರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಆರ್ ಪ್ರಸನ್ನ ಕುಮಾರ್ ಮಾತನಾಡಿ ಡಾ. ವಿಷ್ಣುವರ್ಧನ್ ರವರು ನಟನೆಯಲ್ಲದೇ ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಇಡೀ ಚಿತ್ರ ರಂಗದಲ್ಲಿಯೇ ಸುಪ್ರಸಿದ್ಧ ನಟರಾಗಿ ಹೊರ ಹೊಮ್ಮಿದ್ದರು,

ಕನ್ನಡ ಚಿತ್ರ ರಂಗದ ತನ್ನದೇ ಆದ ಛಾಪು ಮೂಡಿಸಿರುವ ಅತ್ಯುತ್ತಮ ನಟರು ಎಂದರು.ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಡಿ. ಬಿ ನಿಂಗಪ್ಪ, ಸಾಹಸಸಿಂಹ ಡಾ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಿ. ಓಬಣ್ಣ, ಉಪಾಧ್ಯಕ್ಷ ಮಹಮ್ಮದ್ ರಾಧಿಕ್,ಪರೀದ್ ಖಾನ್, ಸೇಕ್ರೆಡ್ ಹಾಟ್ಸ್ ಮತ್ತುನೃತ್ಯ ಕಲಾ ಕೇಂದ್ರದಿಂದ ಮಕ್ಕಳು ನೃತ್ಯ ಮನ ಸೆಳೆಯಿತು,ಕಲಾವಿದರಾದ ಕುರಿಹಟ್ಟಿ ರಾಜು, ಓಬಳಶೆಟ್ಟಿಹಳ್ಳಿ ನುಂಕೇಶ, ಜಗಳೂರು ಸುಮ, ಭಟ್ರಹಳ್ಳಿ ಧನುಂಜಯ, ಹನುಮಂತಪ್ಪ, ಸುಗಮ ಸಂಗೀತ,ವಚನ ಸಂಗೀತ,ಜಾನಪದ ಸಂಗೀತ, ತತ್ವಪದ ಗಾಯನ ಕಾರ್ಯಕ್ರಮ ಜರುಗಿದವು. ಈ ಪ್ರಯುಕ್ತ ವಿಷ್ಣುವರ್ಧನ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ, ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮತ್ತು ಡಿ. ಬಿ ನಿಂಗರಾಜು ವಾದ್ಯಗೋಷ್ಠಿ ತಂಡದಿಂದ ವಿಷ್ಣುವರ್ಧನ್ ನಟಿಸಿರುವ ಚಿತ್ರದ ಹಾಡುಗಳ ಗಾಯನ ಮಾಡಲಾಯಿತು. ಡಿ.ಬಿ.ನಿಂಗರಾಜು ಪ್ರಾರ್ಥಿಸಿ, ಸ್ವಾಗತಿಸಿದರು,ಭಟ್ರಹಳ್ಳಿಧನುಂಜಯ ನಿರೂಪಿಸಿದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ