ಮನುಕುಲದ ಉದ್ದಾರ ಗೈದ ತ್ರಿಕಾಲ ಜ್ಞಾನಿ – ಶ್ರೀ ಪುಂಡಲಿಂಗೇಶ್ವರ ಕುಂಟೋಜಿ.
ಇಂಡಿ ಮೇ.31

ಜಾತಿ ಮತ ಬೇಧ ಭಾವ ಮಾಡದೇ ಎಲ್ಲರೂ ನಮ್ಮವರು ಎಂಬ ಭಾವ ಹೊಂದಿದ ಪುಣ್ಯ ಪುರುಷ ಗೋಳಸಾರದ ಪುಂಡಲಿಂಗೇಶ್ವರರ ಅಮೃತವಾಣಿ ಇಂದಿನ ಮನುಕುಲಕ್ಕೆ ಮಾರ್ಗ ದರ್ಶಿಯಾಗಿದೆ ಎಂದು ವಿಜಯಪುರದ ಸಾಹಿತಿ ಯು.ಎನ್ ಕುಂಟೋಜಿ ಹೇಳಿದರು.ಅವರು ಶನಿವಾರದಂದು ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ‘ಗೋಳಸಾರದ ಶ್ರೀ ಪುಂಡಲಿಂಗೇಶ್ವರರ ಚರಿತ್ರೆ’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.ನಮ್ಮೆಲ್ಲರ ಬದುಕು ಸುಂದರ ವಾಗಿರಲು ಪುಂಡಲಿಂಗ ಶಿವಯೋಗಿಗಳ ವಾಣಿಯೇ ಮುಖ್ಯ, ಎಲ್ಲದಕ್ಕೂ ಭಗವಂತನೇ ಇದ್ದಾನೆ ಎಂಬ ಭಾವದೊಂದಿಗೆ ರೋಗಿಗಳ ಆರೈಕೆಯಲ್ಲಿ ದೇವರನ್ನು ಕಂಡವರು ಪುಂಡಲಿಂಗೇಶ್ವರರು ಸತ್ಯಂ ಶಿವಂ ಸುಂದರಂ ಮಂತ್ರದ ಪ್ರತೀಕ ಎಂದು ಹೇಳಿದರು. ಸತ್ಸಂಗ ಇಲ್ಲದೇ ಬದುಕೇ ನಶ್ವರ, ಗುರುವಾಣಿಗೆ ಬಹಳ ಮಹತ್ವವಿದೆ. ಭಕ್ತರ ಬಯಕೆಗಳಿಗೆ ಸ್ಪಂದಿಸುವ ಶಕ್ತಿ ಶಿವಯೋಗಿಗಳಲ್ಲಿತ್ತು. ಮನುಷ್ಯ ಕುಲವನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಿದವರು, ಬಾಲ್ಯ ಜೀವನದಲ್ಲಿ ಹಂಚಿ ತಿನ್ನುವ ಮಮಕಾರ, ಉದಾರತನ, ದಾನ ಕೊಡುವ ಭಾವಸದಾ ಅವರಲ್ಲಿತ್ತು ಸಧ್ಯ ಸಹಸ್ರಾರು ಭಕ್ತರ ಆರಾಧ್ಯ ದೈವ ಸುಕ್ಷೇತ್ರ ಗೋಳಸಾರ ಎಂದು ಹೇಳಿದರು. ಪುಂಡಲಿಂಗೇಶ್ವರರು ತಾವು ಕಷ್ಟಪಟ್ಟು ಮನುಕುಲದ ಉದ್ದಾರ ಗೈಯುತ್ತ ದಾಸೋಹದಲ್ಲಿ ಭಗವಂತನನ್ನು ಕಂಡತ್ರಿಕಾಲ ಜ್ಞಾನಿಗಳು ಮತ್ತು ದಾಸೋಹ ಮೂರ್ತಿಗಳು ಎನಿಸಿ ಕೊಂಡವರು. ಪಂಡರಪುರ ವಿಠಲನನ್ನು ಸ್ಮರಿಸುತ್ತಾಅನೇಕ ಮಹಿಮೆಯನ್ನು ತೋರಿಸಿದ ಮನುಷ್ಯ ರೂಪದ ದೇವರು ಅವರಾಗಿದ್ದರು ಎಂದು ಹೇಳಿದರು.ಡಾ, ಡಿ.ಎನ್ ಅಕ್ಕಿ, ಡಾ, ಚನ್ನಪ್ಪ ಕಟ್ಟಿ, ಡಾ, ಎಂ.ಎಂ ಪಡಶೆಟ್ಟಿ, ಗೀತಯೋಗಿ, ಚಿದಂಬರ ಬಂಡಗರ, ರಾಘವೇಂದ್ರ ಕುಲಕರ್ಣಿ, ಶ್ರೀಧರ ಹಿಪ್ಪರಗಿ, ಬಸವರಾಜ ಕಿರಣಗಿ, ರಾಚು ಕೊಪ್ಪ, ವಿದ್ಯಾ ಕಲ್ಯಾಣ ಶೆಟ್ಟಿ, ಶಿಲ್ಪಾ ಭಸ್ಮೆ, ನಿಂಗಣ್ಣ ಬಿರಾದಾರ, ಡಾ, ರಾಜಶ್ರೀ ಮಾರನೂರ, ಡಾ, ರವಿ ಅರಳಿ, ಡಾ, ಕಾಂತು ಇಂಡಿ, ಆರ್ ವ್ಹಿ ಪಾಟೀಲ, ಸಂಗನಗೌಡ ಹಚ್ಚಡದ, ರೇಖಾ ನಾಗಠಾಣ, ಅನಿತಾ ಅಳಗುಂಡಗಿ, ಅಣ್ಣರಾಯ ಗೂಗದಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶಿಕ್ಷಕ ಸಂತೋಷ ಬಂಡೆ ಸ್ವಾಗತಿಸಿ, ಪರಿಚಯಿಸಿದರು. ಶಿಕ್ಷಕಿ ಬಿ.ಸಿ ಭಗವಂತಗೌಡರ ನಿರೂಪಿಸಿದರು. ಸರೋಜಿನಿ ಮಾವಿನಮರ ಪ್ರಾರ್ಥಿಸಿದರು. ಶಿಕ್ಷಕ ವೈ.ಜಿ ಬಿರಾದಾರ ವಂದಿಸಿದರು.