ಪರಿಶಿಷ್ಟ ಜಾತಿಗಳ ಒಳ ಮೀಸಲಾಯಿತಿ ಜಾರಿ ಗೊಳಿಸುವಂತೆ ಆಗ್ರಹಿಸಿ ಡಿ.ಎಸ್.ಎಸ್ ಸಂಘಟನೆ ಯಿಂದ – ಮುಖ್ಯಮಂತ್ರಿಗೆ ಮನವಿ.
ಗದಗ ಡಿ.16
ಗದಗ ಜಿಲ್ಲೆಯ ರೋಣ ತಾಲೂಕಿನ ರೋಣ ಪಟ್ಟಣದಲ್ಲಿ ಡಿ, 15 ರಂದು 200 ಕೋಟಿ ವೆಚ್ಚದ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿ.ಎಂ ಸಿದ್ದರಾಮಯ್ಯ ನವರಿಗೆ ಗದಗ ಜಿಲ್ಲೆಯ ಪ್ರೊ, ಬಿ,ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಿ.ಎಂ ಸಿದ್ದರಾಮಯ್ಯ ನವರಿಗೆ ಯಥಾವತ್ತಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾಯಿತಿ ಜಾರಿ ಗೋಳಿಸಬೇಕೆಂದು ಮನವಿ ಕೊಡುವುದರ ಮೂಲಕ ಪಟ್ಟು ಹಿಡಿದ ಗದಗ ಹಾಗೂ ರೋಣ ದಲಿತ ಮುಖಂಡರು ಒತ್ತಾಯಿಸಿದರು.ಆಗಸ್ಟ್. 1/2024 ರಂದು ಪರಿಶಿಷ್ಟ ಜಾತಿ ಪಂಗಡಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಆಯಾಯ ರಾಜ್ಯಗಳಿಗೆ ಅಧಿಕಾರ ಇದೆಯೆಂದು ಏಳು ನ್ಯಾಯ ಮೂರ್ತಿಗಳ ಸಾಂವಿಧಾನಿಕ ಪೀಠದಿಂದ ಐತಿಹಾಸಿಕ ತೀರ್ಪು ಹೊರ ಬಂದಿರುವುದು ತುಳಿತಕ್ಕೊಳಗಾದ ಶೋಷಿತ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿಗಾಗಿ 30 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಈ ಹೋರಾಟದಲ್ಲಿ ಹಲವಾರು ತಮ್ಮ ಬದುಕನ್ನು ತ್ಯಾಗ ಮಾಡಿದ್ದಾರೆ , ಮತ್ತೆ ಕೆಲವರು ಪ್ರಾಣ ತ್ಯಾಗ ಮಾಡಿರುತ್ತಾರೆ ಎಂಬುದು ತಮಗೆ ತಿಳಿದಿರುವಂತ ಸಂಗತಿ.ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾದ ಡಿ.ವೈ ಚಂದ್ರಚೂಡ್ ಮತ್ತು ಉಳಿದ 6 ಜನ ನ್ಯಾಯ ಮೂರ್ತಿಗಳಾದ ಬಿ.ಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ.ಎಂ ತ್ರಿವೇದಿ, ಪಂಕಜ್.ಮಿಥಾಲ್, ಮನೋಜ್. ಮಿಶ್ರಾ ಮತ್ತು ಸತೀಶ್.ಚಂದ್ರಶರ್ಮ ಒಳ ಗೊಂಡಂತೆ 6:1 ರ ಅನುಪಾತದಲ್ಲಿ ಪರಿಶಿಷ್ಟ ಜಾತಿಗಳಿಗೆ ಉಪ ವರ್ಗೀಕರಣ ಮಾಡಬಹುದೆಂದು ಆಯಾಯ ರಾಜ್ಯಗಳಿಗೆ ತೀರ್ಪನ್ನು ನೀಡಿರುತ್ತಾರೆ.
ಪರಿಶಿಷ್ಟರ ನೂರೊಂದು ಜಾತಿಗಳಲ್ಲಿ ಮಾದಿಗ-ಮಾದಿಗ ಸಹ ಸಂಬಂಧಿತ ಜಾತಿಗಳಿಗೆ ಶೇ.6 ರಷ್ಟು, ಹೊಲೆಯ ಸಹ ಸಂಬಂಧಿತ ಜಾತಿಗಳಿಗೆ ಶೇ.5 ರಷ್ಟು, ಸ್ಪೃಶ್ಯ ಜಾತಿಗಳಾದ ಕೊರಮ, ಕೊರಚ, ಬೋವಿ, ಲಂಬಾಣಿಗಳಿಗೆ ಶೇ.3 ರಷ್ಟು, ಅಲೆಮಾರಿ ಅಸ್ಪೃಶ್ಯ ಜಾತಿಗಳಿಗೆ ಶೇ.1 ರಷ್ಟನ್ನು ಜನಸಂಖ್ಯಾ ಆಧಾರಿತವಾಗಿ ಒಳ ಮೀಸಲಾತಿ ಕಲ್ಪಿಸಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ.ಸುಪ್ರೀಂ ಕೋರ್ಟ್ ಆಗಸ್ಟ್. 1/2024 ರಂದು ನೀಡಿದ ಆದೇಶದನ್ವಯ ಕರ್ನಾಟಕ ಸರ್ಕಾರವು ದಿನಾಂಕ: 28.10.2024 ರಂದು ಸಚಿವ ಸಂಪುಟ ಸಭೆಯಲ್ಲಿ ಎಂಪೇರಿಕಲ್ ಡಾಟಾ ಸಂಗ್ರಹ ಮಾಡಲು ಏಕ ಸದಸ್ಯ ಆಯೋಗವನ್ನು ರಚಿಸಿ ನಿವೃತ್ತ ನ್ಯಾ. ಹೆಚ್.ಎನ್ ನಾಗಮೋಹನ್ ದಾಸ್ ಅವರನ್ನು ಆಯೋಗಕ್ಕೆ ನೇಮಿಸಿತು.ಮುಂದುವರೆದು ಹೊರಡಿಸಿದ್ದು ಈ ಕಾರ್ಯಸೂಚಿಗೆ ತಕ್ಕಂತೆ ನಾವು ನಮ್ಮ ಸಮಾಜವನ್ನು ಸಿದ್ಧ ಗೊಳಿಸಿ ಆಯೋಗಕ್ಕೆ ತಕ್ಕ ಸಮಂಜಸ ಮಾಹಿತಿ ಒದಗಿಸಲು ತುರ್ತಾಗಿ ಸಜ್ಜಾಗ ಬೇಕಾಗಿದೆ.ಈ ಮಹತ್ತರ ಉದ್ದೇಶದ ಹಿನ್ನೆಲೆಯಿಂದ ಮಾದಿಗ ಸಮಾಜವನ್ನು ಜಾಗೃತಿ ಗೊಳಿಸಿ, ಒಳ ಮೀಸಲಾತಿಯನ್ನು ಸರ್ಕಾರ ಅತೀ ಶೀಘ್ರವಾಗಿ ಜಾರಿ ಗೊಳಿಸಲು ಸನ್ನದ್ಧ ಗೊಳಿಸುವ ಸಲುವಾಗಿ ಗದಗ ಜಿಲ್ಲೆಯ ತುತ್ತ ತುದಿಯವರೆಗೂ ಒಳ ಮೀಸಲಾತಿಯನ್ನು ಪಡೆಯುವ ಸಲುವಾಗಿ ಇದೇ ಡಿಸೆಂಬರ್ 14,2024 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಮಾದಿಗ ವಕೀಲರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಹಂತ ಮಹತ್ವದ ಸಮಾವೇಶಕ್ಕೆ ತಮ್ಮಗಳ ಭಾಗವಹಿಸುವಿಕೆಯು ಪ್ರಮುಖ ಜವಾಬ್ದಾರಿ ಹಾಗೂ ಕರ್ತವ್ಯವೆಂದು ಭಾವಿಸಿ ಒಳ ಮಿಸಲಾತಿ ಜಾರಿ ಮಾಡಬೇಕೆಂದು ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮೀತಿ ಗದಗ ಜಿಲ್ಲಾ ಸಮಿತಿ ವತಿಯಿಂದ ಮನವಿ ಕೊಡಲಾಯಿತು. ಇದೆ ಸಂದರ್ಭದಲ್ಲಿ ಎಸ್.ಎನ್ ಬಳ್ಳಾರಿ (ರಾಜ್ಯ ಸಂಘಟನಾ ಸಂಚಾಲಕರು) ಪ್ರಕಾಶ.ಎಮ್ ಹೊಸಳ್ಳಿ ( ರಾಜ್ಯ ವಿಭಾಗೀಯ ಸಂಚಾಲಕರು) ದುರಗಪ್ಪ.ಎಲ್ ಹರಿಜನ (ಗದಗ ಜಿಲ್ಲಾ ಸಂಚಾಲಕ) ಸಂಗಪ್ಪ. ಹೊಸಮನಿ.ಮರಿಯಪ್ಪ ಎನ್ ಮಾದರ.ಹನಮಂತ ಪೂಜಾರ. ಸುರೇಶ ನಡುವಿನಮನಿ. ಸೋಮಶೇಖರ.ಎಸ್ ನಾಗರಾಜ. ಶರಣಪ್ಪ ದೊಡ್ಡಮನಿ. ಮಲ್ಲು ಮಾದರ. ಯಲ್ಲಪ್ಪ ಮಾದರ. ಭೀಮಪ್ಪ ಮಾದರ. ಪರಶು ಮಾದರ. ಮುತ್ತಪ್ಪ ಜೋಗನ್ನವರ. ಅಂದಪ್ಪ ಮಾದರ. ಶರಣು ದೊಡ್ಡಮನಿ. ಚಂದ್ರು ಹಂಚಿನಾಳ. ಯಲ್ಲಪ್ಪ ಪೂಜಾರ. ರಮೇಶ ನಂದಿ. ಅಭಿಷೇಕ ಕೊಪ್ಪದ.ಮತ್ತು ಇನ್ನೂ ಅನೇಕ ಮುಖಂಡರು ಯುವಕರು ಪಾಲ್ಗೊಂಡಿದ್ದರು.