ಅಕ್ರಮ ಚಟುವಟಿಕೆ ತಡೆಯುವಲ್ಲಿ – ಎಸ್ಪಿ ಸಾಹೇಬರು ಅತ್ಯುತ್ತಮ.
ವಿಜಯಪುರ ಡಿ .16
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿ ನಾಗರಿಕರು ನೆಮ್ಮದಿಯ ಬದುಕಿಗೆ ಅನುಕೂಲವಾಗುವಂತೆ ದಕ್ಷತೆಯ ಕರ್ತವ್ಯ ನಿರ್ವಹಿಸುತ್ತಿರುವ ನೂತನ ಎಸ್ಪಿ ಲಕ್ಷ್ಮಣ ನಿಂಬರಗಿ ಅವರಿಗೆ ಜಿಲ್ಲೆಯ ಜನತೆಯ ಅಭಿನಂದನೆಗಳು. ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ರೌಡಿಗಳಿಗೆ ಮಟ್ಟ ಹಾಕುತ್ತಿರುವ ಎಸ್ಪಿಯವರ ಕಾರ್ಯ ಅತ್ಯುತ್ತಮ. ಇಡೀ ರಾಜ್ಯ, ದೇಶದಾದ್ಯಂತ ಇಂತಹ ಅಧಿಕಾರಿಗಳು ಇರಬೇಕು ಆವಾಗ ಮಾತ್ರ ದೇಶದ ಪ್ರಗತಿ ಯಾಗುವುದರಲ್ಲಿ ಯಾವುದೆ ಸಂಶಯವಿಲ್ಲ. ಉತ್ತಮ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ನಾಗರಿಕರು ಸಹಕಾರ ಕೊಡಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಸಪ್ನಾ.ಎಚ್ ಇವರು ಮಾನ್ಯ ಎಸ್ಪಿ ಅವರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.
ಯಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಪ್ಪ.ಬಿ. ಹರಿಜನ.ಇಂಡಿ.ವಿಜಯಪುರ