ರಾಷ್ಟ್ರೀಯ ಸೇವಾ ಯೋಜನೆಯು ಶಿಬಿರಾರ್ಥಿಗಳಲ್ಲಿ – ಮಾನವೀಯ ಮೌಲ್ಯಗಳನ್ನು ಬೆಳಸುತ್ತದೆ.
ಸಸಾಲಟ್ಟಿ ಡಿ.17
ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಮುಗಳಖೋಡ್ ಇವರ ಆಶ್ರಯದಲ್ಲಿ ದತ್ತು ಗ್ರಾಮ ಸಸಾಲಟ್ಟಿ ಗ್ರಾಮದಲ್ಲಿ ಇಂದು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಬಿ ಬಂಡಿಗಣಿ ಉಪನ್ಯಾಸಕರು ವಹಿಸಿ ಕೊಂಡಿದ್ದರು ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯು ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಾಯಕವಾಗಿದೆ ಆದ್ದರಿಂದ ದತ್ತು ಗ್ರಾಮದಲ್ಲಿ ಸಮಾಜಕ್ಕೆ ಉಪಯೋಗ ವಾಗುವಂತಹ ಕೆಲಸಗಳಾಗಲಿ ಈ ಗ್ರಾಮದ ಜನರು ನಿಮ್ಮನ್ನು ನೆನಪಿಸುವ ರೀತಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಿ ಎಂದು ಕಿವಿ ಮಾತುಗಳನ್ನು ಹೇಳಿದರು. ಮತ್ತು ಮುಖ್ಯ ಅಥಿತಿಗಳಾಗಿ ಮುತ್ತಪ್ಪ ಈ ಭದ್ರಶೆಟ್ಟಿ ಭೀಮಪ್ಪ ಯರಡೆತ್ತಿನ್ನವರ್ ಶಿವಲಿಂಗ ದಳವಾಯಿ ಅಡವೇಶ್ ತಳಗಿನಮಠ ಶಂಕರ್ ಮೂರಾಬಟ್ಟೆ ಭಾಗವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯಾರಾದ ಎಸ್.ಜಿ ಹಂಚಿನಾಳ ಸರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಎನ್.ಎಸ್.ಎಸ್ ಘಟಕದ ಶಿಬಿರಾಧಿಕಾರಿಗಳಾದ ಬಿ.ವಿ ಹಟ್ಟಿಮನಿ ಸ್ವಾಗತ ಮಾಡಿ ಕೊಂಡರು ಶಿಬಿರಾರ್ಥಿಗಳಾದ ಕವಿತಾ ಬೊರಗಾಂವಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಉಪನ್ಯಾಸಕರಾದ ವಿ.ಎಮ್ ಕರಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೊನೆಯಲ್ಲಿ ವಾಯ್.ಕೆ ಕಾಕಂಡಕಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪರಶುರಾಮ್.ಆರ್.ತೆಳಗಡೆ.ರಾಯಬಾಗಿ