ಜಾತ್ರಾ ನಿಮಿತ್ಯವಾಗಿ 11 ಕ್ವಿಂಟಾಲ್ ತೊಗರಿ ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಹೆಗಲ ಮೇಲೆ ನೊಗವನ್ನು ಹೊತ್ತ ಒಯ್ಯುದು – ಗುರಿ ತಲುಪಿದ ಯುವ ಸಾಹಸಿಯನ್ನು ಕೊಂಡಾಡಿದ ಗ್ರಾಮದ ಜನರು.
ಕಲಕೇರಿ ಡಿ.17
ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ಜಾತ್ರೆ ನಿಮಿತ್ಯವಾಗಿ ಕಲಕೇರಿಯ 23 ವಯಸ್ಸಿನ ಯುವಕನಾದ ದೇವಪ್ಪ ಶಿವಪುತ್ರಪ್ಪ ಕುದರೆ ಕಾರ್ ಇವರು ಕಲಕೇರಿ ಯಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ದಿಂದ ತಿಳಗೂಳ ಗ್ರಾಮದ ವರೆಗೆ 11 ಕ್ವಿಂಟಲ್ ತೊಗರಿಯನ್ನು ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಹೆಗಲ ಮೇಲೆ ನೊಗವನ್ನು ಇಟ್ಟುಕೊಂಡು ಎಳೆದುಕೊಂಡು ಹೋಗಿದ್ದಾನೆ. ಇದೇ ಯುವಕನು ಎರಡು ತಿಂಗಳ ಹಿಂದೆ 18 ಎಕರೆ ಭೂಮಿಯನ್ನು ಎತ್ತುಗಳಿಗೆ ಹಗ್ಗ ಇಲ್ಲದೆ ಬೆಳಿಗ್ಗೆ 6:00 ಯಿಂದ ಸಾಯಂಕಾಲ 4:00 ವರೆಗೆ ಗಳೇ ಹೋಡೆದು ಸಾಹಸ ಮೆರೆದಿದ್ದಾನೆ.ತದ ನಂತರ 12 ಕ್ವಿಂಟಲ್ ಜೋಳವನ್ನು ಕಲಕೇರಿ ಯಿಂದ ಕುದುರಗುಂಡ ಗ್ರಾಮಕ್ಕೆ ಒಯ್ಯದಿದ್ದಾನೆ ಈ ಯುವಕನ ಸಾಧನೆಯನ್ನು ಮೆಚ್ಚಿ ಕಲಕೇರಿ ಗ್ರಾಮಸ್ಥರು ಹಾಗೂ ತಿಳಗೊಳ ಗ್ರಾಮಸ್ಥರು ಮತ್ತು ಕುದುರಗುಂಡ ಗ್ರಾಮಸ್ಥರು ದೇವಪ್ಪ ಶಿವಪುತ್ರಪ್ಪ ಕುದರೆ ಕಾರ್ ಇವರ ಸಾಧನೆಯನ್ನು ಮೆಚ್ಚಿ ಎಲ್ಲಾ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದಂತ ಚೆನ್ನಪ್ಪ ಉತಾಳೆ ಇವರು ನಮ್ಮ ಗ್ರಾಮದ ಈ ಹುಡುಗನಿಗೆ ಇಂಥ ಸಾಧನೆ ಮಾಡಿದಂತ ಯುವಕನಿಗೆ ಕೋಟಿ ಕೋಟಿ ಅಭಿನಂದನೆಗಳನ್ನು ಸಲ್ಲಿಸುತ್ತಾರೆ.ಕಲಕೇರಿಯ ಗ್ರಾಮ ಪಂಚಾಯಿತಿಯ ಸದಸ್ಯರಾದ ಚಾಂದ್ ಪಾಷ ಹವಾಲ್ದಾರ್ ಇವರು ಮಾಡಿದಂತಹ ಸಾಧನೆ ಮೆಚ್ಚಿ ಇಂಥ ಒಬ್ಬ ಯುವಕ ವ್ಯಕ್ತಿ ನಮ್ಮ ಗ್ರಾಮದಲ್ಲಿ ಸಾಧನೆ ಮಾಡಿದಂತ ಯುವಕನಿಗೆ ಗ್ರಾಮಸ್ಥರುಗಳಿಂದ ಅಭಿನಂದನೆಗಳನ್ನು ಸಲ್ಲಿಸಿದರು. ಪರಶುರಾಮ್ ಕುದರಕಾರ ಉಮೇಶ್ ಬಡಿಗೇರ್. ಮಾಳಪ್ಪ ಕುದರಕಾರ್. ಪರಮಪ್ಪ ಕುದರಕಾರ. ಚಂದ್ರು ಕುದರಕಾರ. ಎಲ್ಲಾ ಊರಿನ ಗ್ರಾಮಸ್ಥರು ಸೇರಿದಂತೆ ಕಲಕೇರಿ ಗ್ರಾಮದಿಂದ ಎತ್ತಿನ ಗಾಡಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತಿಳಗೂಳ ಗ್ರಾಮದವರೆಗೆ ಹೋಗಿರುವ ಸಾಧನೆ ಮಾಡಿದ ಯುವಕನಿಗೆ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ