ಸ್ಥಗಿತಗೊಂಡಿರುವ ಮಲ್ಲಾಬಾದ! ಏತ ನೀರಾವರಿ, ಯೋಜನೆಯ ಕಾಮಗಾರಿ ಟೆಂಡರ್ ಕರೆದು ಕೂಡಲೇ ಕೆಲಸ ಪ್ರಾರಂಭಿಸ ಬೇಕು? ಎಂದು ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ, ಕ್ಷೇತ್ರದ ಶಾಸಕ ಅಜಯ ಸಿಂಗ್ ಬರೀ ಸರ್ದಾರರಲ್ಲಾ ಸುಳ್ಳಿನ! ಸರದಾರರು – ಎಂದು ಹೋರಾಟಗಾರರು ಆಕ್ರೋಶ.
ಚಿಗರಹಳ್ಳಿ ಡಿ.17
ಜೇವರ್ಗಿ ತಾಲೂಕಿನ ಚಿಗರಹಳ್ಳಿ ಕ್ರಾಸ್ ನಲ್ಲಿ ರಸ್ತೆ ತಡೆದು ಪ್ರತಿಭಟನೆ ಕಳೆದ ನಾಲ್ಕು ದಶಕದ ಹೋರಾಟದ ಪ್ರತಿ ಫಲವಾಗಿ ಆರಂಭ ಗೊಂಡಿರುವ ಮಲ್ಲಾಬಾದ ನೀರಾವರಿ ಯೋಜನೆಯ ಕಾಮಗಾರಿ ಸ್ಥಗಿತ ಗೊಂಡಿದೆ. ಕಳೆದ ವಿಧಾನ ಸಭೆ ಚುನಾವಣೆಗು ಮೊದಲು ಆದರ್ಶ ಗ್ರಾಮ ಸಮಿತಿ ಹಾಗೂ ಜೇವರ್ಗಿ-ಯಡ್ರಾಮಿ ತಾಲೂಕ ರೈತ ಹೋರಾಟ ಸಮಿತಿ ಸೇರಿದಂತೆ ಹಲವು ಹೋರಾಟಗಾರರು ನಡೆಸಿದ ಸುದೀರ್ಘ 87 ದಿನಗಳ ನಿರಂತರ ಹೋರಾಟದ ಪ್ರತಿ ಫಲವಾಗಿ ಇಂದಿನ ಸರ್ಕಾರ ದಿನಾಂಕ 7-3-2023 ರ ಕೆ.ಬಿ.ಜೆ.ಎನ್.ಎಲ್ ನಿರ್ದೇಶಕ ಮಂಡಳಿಯ ಸಭೆಯ ನಡಾವಳಿಯಂತೆ ದಿನಾಂಕ 16-09-2022 ಮತ್ತು ದಿನಾಂಕ 17.2.2023 ರಂದು ಜಾರಿಗೆ ತಂದ ನಿಗಮದ ಅಂದಾಜು ಪರಿಶೀಲನಾ ಸಮಿತಿಯ ಸಭೆಯಲ್ಲಿ ಸ್ಥಗಿತ ಗೊಂಡಿರುವ ಕಾಮಗಾರಿಯನ್ನು ಪ್ರಾರಂಭಿಸಲು 330.40 ಕೋಟಿ ರೂಪಾಯಿಗಳ ಅನುಮೋದನೆ ಕೊಟ್ಟು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ತೀರ್ಮಾನಿಸಿ ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭವಾಗಿತ್ತು.
ಆದರೆ ಚುನಾವಣೆ ಘೋಷಣೆಯಾದ ಪ್ರಯುಕ್ತ ಚುನಾವಣೆ ನೀತಿ ಸಹಿತೆಯ ಕಾರಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಳಿಸಲು ಸಾಧ್ಯವಾಗಿರಲಿಲ್ಲ ಶಾಸಕರಾದ ಡಾ, ಅಜಯ ಸಿಂಗ್ ರವರು ಚುನಾವಣೆ ಪ್ರಚಾರ ಸಂದರ್ಭದಲ್ಲಿ ತಾವು ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಟೆಂಡರ್ ಕರೆಯುವುದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮೂಲಕ ಹೇಳಿಸಿದ್ದು, ಆದರೆ ಅಧಿಕಾರ ಬಂದ ನಂತರ ಅವರು ತಮ್ಮ ಮಾತು ಮರೆತಿದ್ದಾರೆ. 24 ಗಂಟೆಯಲ್ಲಿ ಕೆಲಸ ಪ್ರಾರಂಭಿಸುವುದಾಗಿ ಸುಳ್ಳು ಹೇಳಿದ ಶಾಸಕರು ಇದರ ಬಗ್ಗೆ ಧ್ವನಿ ಎತ್ತಿ ಸುಮಾರು 58 ಗ್ರಾಮಗಳ ರೈತರಿಗೆ ಸೇರಿದ ಯೋಜನೆಯಾಗಿದೆ ಎಂದು ಹೇಳಿದಾಗ ಅದಕ್ಕೆ ಶಾಸಕರು ನಿರ್ಲಕ್ಷ್ಯ ದಿಂದ ಮಾತನಾಡಿ ಬರಿ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತಿಭಟನೆಗಾರರು ದೂರಿದರು. ಈ ಕುರಿತು ಮಾತನಾಡಿದ ಪ್ರತಿಭಟನಾಕಾರರು ಹಲವಾರು ಸ್ಥಗಿತ ಗೊಂಡಿರುವ ಮಲ್ಲಾಬಾದ ಏತ ನೀರಾವರಿ ಯೋಜನೆ, ಕಾಮಗಾರಿಗಳ ಟೆಂಡರ್ ಕರೆದು ಕೂಡಲೇ ಕೆಲಸ ಪ್ರಾರಂಭಿಸ ಬೇಕು. ರೈತರು ಬೆಳೆದ ಪ್ರತಿ ಕಿಕಟ್ಯಾಲ್ ತೊಗರಿಗೆ 15000, ಮತ್ತು ಹತ್ತಿಗೆ 12000, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ನಟ ರೋಗ ಸೇರಿದಂತೆ ವಿವಿಧ ಕಾರಣಗಳಿಂದ ಹಾನಿ ಗೊಳಗಾದ ತೊಗರಿ ಬಿತ್ತಿದರೆ ಸೂಕ್ತ ಪರಿಹಾರ ಒದಗಿಸಬೇಕು ಜೇವರ್ಗಿ ಮತ ಕ್ಷೇತ್ರದಂತ ರಸ್ತೆಗಳು ಹಾಳಾಗಿದ್ದು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು ಮತ್ತು ಅವಶ್ಯವಿರುವ ಎಲ್ಲಾ ಗ್ರಾಮಗಳಿಗೆ ಸರಿಯಾದ ರಸ್ತೆ ಸಂಚಾರ ಪ್ರಾರಂಭಿಸಬೇಕು ಮಲ್ಲಾಬಾದತ್ ನೀರಾವರಿ ಯೋಜನೆಯು ಸುಮಾರು 58 ಗ್ರಾಮಗಳ ರೈತರಿಗೆ ಸೇರಿದ ಯೋಜನೆಯಾಗಿದೆ ಮತ್ತು ಜೇವರ್ಗಿ ಮತಕ್ಷೇತ್ರದ ಅಂದಾಜು ಒಂದು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯಾಗಿದೆ.
ಈ ಬೇಡಿಕೆಗಳು ಕೂಡಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಮಾತನಾಡುತ್ತಿದ್ದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆಗಾರರ ಮುಖ್ಯಸ್ಥರುಗಳಾದ ಡಾ, ಮಹೇಶಕುಮಾರ್ ರಾಠೋಡ್, ಇಬ್ರಾಹಿಂ ಪಟೇಲ್ ಯಾಳವರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಗೋಳ, ಜಿಲ್ಲಾ ಪಂಚಾಯತಿಯ ಸದಸ್ಯರುಗಳಾದ ಶೋಭಾ ಬಾಣಿ ಹಾಗೂ ರೇವಣ ಸಿದ್ದಪ್ಪ ಸಂಕಾಲಿ, ಪ್ರಶಾಂತಗೌಡ ಮಾಲಿ ಪಾಟೀಲ್, ಶಿವಪುತ್ರಪ್ಪ ಕೊನ್ನಿನ್, ಅಲ್ಲಾ ಪಟೇಲ್ ಇಜೇರಿ, ಮತ್ತು ಹಲವಾರು ಸಂಘಟನೆಗಳ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ.ಎನ್.ನೀಲಕೋಡ.ಜೇವರ್ಗಿ