“ಜೀವನ”…..
ನಿಲ್ಲದೆ ಸಾಗಲಿ ನಡಿಗೆ
ಕಷ್ಟಗಳು ಬರಲಿ ಅಡಿಗಡಿಗೆ
ಧೈರ್ಯವೇ ನಮಗೆ ಸಾಧನ
ಇಡೀ ಜೀವನವೇ ಒಂದು ಸಂಧಾನ
ಜೀವನ ಎಂಬುವುದು ಬಲು ಸುಂದರ
ಉದ್ಯಾನವನ
ಬೆಳೆಯುತ್ತಿರುವುದು ಅಲ್ಲಿ ಹೂವು ಮುಳ್ಳಿನ
ಬನ
ಸುಖ ದುಃಖಗಳ ಪಯಣವೇ ನಮ್ಮ ಜೀವನ
ಏರು ಪೇರುಗಳ ರಾಗದ ಬದುಕೇ ನಮ್ಮ
ಗಾಯನ
ಬಾಳ ಹಾದಿಯಲಿ ತೊಡಕುಗಳೆಷ್ಟೋ
ಖುಷಿಯ ಪಡೆಯಲು
ಸಾಂತ್ವನದ ಒಂದು ಮಾತು ಸಾಕು ಎಲ್ಲ
ನೋವು ಮರೆಯಲು
ನೂರು ದಿನಗಳ ಬೇಕು ಎಲ್ಲರ ಪ್ರೀತಿ ಗಳಿಸಲು
ಒಂದೇ ನಿಮಿಷ ಸಾಕು ಗಳಿಸಿದ ಪ್ರೀತಿ
ಅಳಿಸಲು
ದುಃಖದಲಿ ಮರುಗಬೇಡ ಒಳ್ಳೆಯ ಕಾಲ
ಬರಲಿದೆ
ಚಿಂತೆ ಅಳಿಸಿ ಸಂತಸದ ನಗು ಮುಖದಲಿ
ಅರಳಲಿದೆ
ಸಂತಸದ ಕ್ಷಣಗಳಲ್ಲಿ ದುಃಖದ ದಿನಗಳು
ನೆನೆಯುತಿರು
ಸಂತಸದ ದಿನವು ಕೂಡಾ ಕ್ಷಣಿಕವೆಂದು
ಮರೆಯದಿರು.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ 9980180487