ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಮೇಳ ಉತ್ತಮ ವೇದಿಕೆ – ಡಾ, ಜೆ.ಎಲ್ ಈರಣ್ಣ.
ಮಾನ್ವಿ ಡಿ.19

ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾನ್ವಿಯಲ್ಲಿ ಕಾಲೇಜಿನ ಪ್ಲೇಸ್ ಮೆಂಟ್ ಸೆಲ್ ಹಾಗೂ ಕರಾವಳಿ ಟೀಚರ್ಸ್ ಹೆಲ್ಪ್ ಲೈನ್ ಇವರ ಸಹಯೋಗದಲ್ಲಿ ಉದ್ಯೋಗ ಮೇಳ ವನ್ನು ಹಮ್ಮಿ ಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ, ಜೆ.ಎಲ್ ಈರಣ್ಣ ನವರು ಮಾತನಾಡಿ ಉದ್ಯೋಗದ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ ಭದ್ರತೆಯನ್ನು ಹೊಂದಲು ಸಾಧ್ಯ ಪ್ರತಿಯೊಬ್ಬ ವ್ಯಕ್ತಿ ತಮ್ಮ ತಮ್ಮ ಅಹರ್ತೆ, ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿವಾಗಿ ಉದ್ಯೋಗಗಳು ದೊರೆಯುತ್ತವೆ ಇಂಥ ಉದ್ಯೋಗ ಮೇಳಗಳ ಸದುಪಯೋಗವನ್ನು ಮಾಡಿ ಕೊಂಡಾಗ ಮತ್ತು ಉದ್ಯೋಗ ಪಡೆಯಲು ಪ್ರಸ್ತುತ ಕೌಶಲ್ಯಗಳನ್ನು ಕಲಿಯುವುದು ಅತ್ಯ ಅವಶ್ಯಕತೆ ಆದ್ದರಿಂದ ವಿದ್ಯಾರ್ಥಿಗಳು ಕಂಪ್ಯೂಟರ್ ಮತ್ತು ಭಾಷಾ ಕೌಶಲ್ಯಗಳನ್ನು ಕಲಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಡಿ.ಜಿ ಕರ್ಕಳ್ಳಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸರ್ಕಾರಿ ಕಾಲೇಜಿನಲ್ಲಿ ಈ ಮೇಳ ಹಮ್ಮಿಕೊಂಡಿರುವುದು ನಮ್ಮ ಭಾಗದ ಉದ್ಯೋಗ ಆಕಾಂಕ್ಷಿಗಳ ಸೌಭಾಗ್ಯ ತುಂಬಾ ಸಂತೋಷದ ವಿಷಯ ಉದ್ಯೋಗ ಮೇಳಗಳು ಖಾಸಗಿ ಸಂಸ್ಥೆಗಳು ನಡೆಸುತ್ತವೆ ಆದರೆ ನಮ್ಮ ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಉದ್ಯೋಗ ಮತ್ತು ಭರವಸೆ ಕೋಶದ ಸಂಯೋಜಕರಾದ ಡಾ, ಚನ್ನಬಸವ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಕರಾವಳಿ ಟೀಚರ್ಸ್ ಹೆಲ್ಪ್ ಲೈನ್ ನ ನಿರ್ದೇಶಕರಾದ ಪಾಂಡು ರಂಗ ರಾವ್, ಲಿಂಗಸಗೂರಿನ ವಿವೇಕಾನಂದ ಆಯಿರ್ವೇದಿಕ್ ಕಾಲೇಜಿನ ಅಧ್ಯಕ್ಷರಾದ ಶಾಂತನಗೌಡ ಪಾಟೀಲ್, ಐ.ಕ್ಯೂ.ಎ.ಸಿ ಸಂಯೋಜಕ ರಾದ ಶ್ರೀಧರ್ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ, ಧನಂಜಯ್ ರವರು ಹಾಗೂ ಕಾಲೇಜಿನ ಬೋಧಕ, ಭೋಧಕೇತರ ಸಿಬ್ಬಂದಿಗಳು, ಮತ್ತು ಉದ್ಯೋಗ ಆಕಾಂಕ್ಷಿ ಗಳು, ವಿದ್ಯಾರ್ಥಿಗಳು ಹಾಜರಿದ್ದರು, ಕುಮಾರಿ ಸಹನಾ ಮತ್ತು ಸಂಗಡಿಗರು ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸದರು. ಡಾ, ಬಸವರಾಜ ಸುಂಕೇಶ್ವರ ಕಾರ್ಯಕ್ರಮ ನಿರೂಪಿಸಿದರು ಡಾ, ಹುಲಿಗೆಪ್ಪ ಸ್ವಾಗತಿಸಿದರು ಶ್ರೀ ಕೃಷ್ಣ ಇಂಗ್ಲಿಷ್ ಉಪನ್ಯಾಸಕರು ಕಾರ್ಯಕ್ರಮಕ್ಕೆ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ