ದೇವರು ನಮ್ಮೊಳಗೆಯೇ ಇದ್ದಾನೆ – ಶ್ರೀಕರಿಬಸವೇಶ್ವರ ಸ್ವಾಮಿಗಳು.
ಹಿರಿಯೂರು ಆ.24

ಕಬೀರರ ದೋಹೆಯಂತೆ ಬೀಜದೊಳಗೆ ಎಣ್ಣೆ ಇರುವಂತೆ, ಹಾಲಿನೊಳಗೆ ಬೆಣ್ಣೆ ಇರುವಂತೆ ಭಗವಂತ ನಮ್ಮೊಳಗೆಯೇ ನೆಲೆಸಿದ್ದಾನೆ ಎಂದು ಐಮಂಗಲದ ಶ್ರೀಕರಿಬಸವೇಶ್ವರ ಸ್ವಾಮಿಯ ಸ್ವರೂಪರಾದ ಬುಡೇನ್ ಸಾಬ್ ತಿಳಿಸಿದರು. ತಾಲೂಕಿನ ರಂಗೇನಹಳ್ಳಿಯ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಆಯೋಜಿಸಿದ್ದ “ವಿಶೇಷ ಭಗವನ್ನಾಮ ಸಂಕೀರ್ತನಾ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ತಮ್ಮ ಅನುಭವಗಳನ್ನು ಮತ್ತು ನೆನಪುಗಳನ್ನು ಹಂಚಿ ಕೊಂಡರು.

ಹೊಸಪೇಟೆಯ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಅವರು “ವಿಶೇಷ ಭಗವನ್ನಾಮ ಸಂಕೀರ್ತನಾ” ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಸತ್ಸಂಗದ ಕೊನೆಯಲ್ಲಿ ದಿವ್ಯತ್ರಯರಿಗೆ ಮತ್ತು ಶ್ರೀಕರಿಬಸವೇಶ್ವರ ಸ್ವಾಮಿಗಳಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಈ ವಿಶೇಷ ಭಜನೆಯಲ್ಲಿ ಜಾಕೀರ್ ಹುಸೇನ್, ಡಿ.ಎಸ್ ನೂರಜಹಾನ್, ಅನುಸೂಯ ರಾಮಚಂದ್ರರಾವ್, ಜಿತೇಂದ್ರಿಯಮ್ಮ, ಡಾ, ಲಕ್ಷ್ಮಣರೆಡ್ಡಿ, ಬಿಂದು ಮಾಧವಿ, ಬುಡೇನ್ ಅಲಿ, ಶಕೀಲಾಬಾನು, ಹುಜೇರ್ ಅಹ್ಮದ್, ದಿಯಾ, ಸಬೀನ ಬೇಗಮ್, ಖಲೀದ ಕೌಶರ್, ಷಹಜಹಾನ್, ಹನುಮಕ್ಕ, ಗಿರಿಸ್ವಾಮಿ, ಚಂದ್ರಪ್ಪ, ಫಾರ್ಜನಾ, ಮನೋಹರ್, ಮಹಮ್ಮದ್ ಸಾಬ್, ಚಳ್ಳಕೆರೆಯ ಯತೀಶ್.ಎಂ ಸಿದ್ದಾಪುರ, ಜಿ.ಯಶೋಧಾ ಪ್ರಕಾಶ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ನಾಗರತ್ನಮ್ಮ,ಹೆಚ್ ಲಕ್ಷ್ಮೀದೇವಮ್ಮ, ಪಂಕಜ ಚೆನ್ನಪ್ಪ, ಅಶ್ವಿನಿ,ಅಕ್ಷಯ್, ಮದ್ದಿಹಳ್ಳಿಯ ನಾಗರಾಜ್, ಪವಿತ್ರ,ಶಿವಕುಮಾರ್, ಗೌರಮ್ಮ, ಕೆಂಚಮ್ಮ, ಮಹಾದೇವಮ್ಮ, ಈಶ್ವರಮ್ಮ, ಈರಕ್ಯಾತಪ್ಪ, ದೊಡ್ಡಕ್ಕ, ರಾಮಕೃಷ್ಣಾನಂದ, ಉದಯಕುಮಾರ್, ಬಸವರಾಜ್ ಎನ್ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.