ಮಾನ್ವಿಯಲ್ಲಿ ಅನಧಿಕೃತವಾಗಿ ಹತ್ತಿ ಖರೀದಿ ಕೇಂದ್ರ ದಂಧೆ – ಬಲು ಜೋರು.
ಮಾನ್ವಿ ಡಿ.22

ಕಾಣೆಯಾಗಿದ್ದಾರೆ ಹುಡುಕಿ ಕೊಡಿ…..
ಮಾನ್ವಿಯಲ್ಲಿ ಅನಧಿಕೃತವಾಗಿ ಹತ್ತಿ ಖರೀದಿ ಕೇಂದ್ರ ದಂಧೆ ನಡೆಯುತ್ತಿದ್ದು, ಮಾನ್ವಿ ಎಪಿಎಂಸಿ ಕಾರ್ಯದರ್ಶಿ ರಂಗನಾಥ ದೇಸಾಯಿ ಒಂದು ತಿಂಗಳಿಂದ ಕಚೇರಿಗೆ ಬಾರದೆ ಇರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತ ಸಂಘದ ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ.
ಮಾನ್ವಿ ಎಪಿಎಂಸಿ ಕಾರ್ಯದರ್ಶಿ ರಂಗನಾಥ ದೇಸಾಯಿ ಅವರನ್ನು ನೋಡ ಬೇಕಾದರೆ ಕರೆ ಮಾಡಿ ಅನ್ಯಾಯದ ಬಗ್ಗೆ ತಿಳಿಸಿದರು. ಒಂದು ತಿಂಗಳಿಂದ ನಾಪತ್ತೆ ಯಾಗಿದ್ದಾರೆ. ಕಚೇರಿಗೆ ಯಾಕೆ ಬರುತ್ತಿಲ್ಲ ಎಂದರೆ ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದಾರೆಂಬ ಕುಂಟು ನೆಪ ಹೇಳುತ್ತಾರೆ.
ಹತ್ತಿ ಖರೀದಿ ನೆಪದಲ್ಲಿ ರೈತರಿಗೆ ಅನ್ಯಾಯವಾದರು ಸಹ ಮಾನ್ವಿ ಎಪಿಎಂಸಿ ಅಧಿಕಾರಿಗಳು ಒಂದು ರೀತಿಯಲ್ಲಿ ಕಣ್ಣಿದ್ದು ಕುರುಡರಾಗಿದ್ದರಿಂದ ಅಕ್ರಮ ಹತ್ತಿ ಖರೀದಿ ದಾರರಿಂದ ಎಪಿಎಂಸಿ ಅಧಿಕಾರಿಗಳು ಮಾಮೂಲಿ ತಿನ್ನುತ್ತಿದ್ದರಿಂದ ಈ ವ್ಯವಸ್ಥೆ ಮಾನ್ವಿಯಲ್ಲಿ ಇದೆ ಎಂದು ರೈತ ಸಂಘದ ಮುಖಂಡ ಹೊಳೆಪ್ಪ ಕಿಡಿ ಕಾರಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ