ಡಿಸೆಂಬರ್ 24, ಕ್ಕೆ ಖುರಾನ್ ಪಠಾಣ ಶಾಲೆಯ ಮೂರನೆ ವರ್ಷದ ವಾರ್ಷಿಕೋತ್ಸವ – ಕಾರ್ಯಕ್ರಮ.
ಮಾನ್ವಿ ಡಿ.22

ಮಕ್ತಬ್ ದಾರೆ ಹರಕಮ್ ಕುರಾನ್ ಪಠಾಣ ಶಾಲೆಯ ಮೂರನೆ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಡಿಸೆಂಬರ್ 24 ರಂದು ಸಂಜೆ 5 ಗಂಟೆಗೆ ಹಮ್ಮಿ ಕೊಳ್ಳಲಾಗಿದೆ ಎಂದು ಹಫೀಜ್ ಸೈಯದ್ ಶಂಶೀರ್ ಸಾಬ್ ಜಾಗಿರದಾರ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಹಮೀದಾ ಮಸೀದಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮವು ಮಾನ್ವಿ ಪಟ್ಟಣದ ನೇತಾಜಿ ಶಾಲೆ ಪಕ್ಕ ದಲ್ಲಿರುವ ಹಮೀದಾ ಮಸೀದಿಯ ಬಳಿ ಜರುಗಲಿದ್ದು.ಅಂದು ಬೆಂಗಳೂರಿನಿಂದ ಹಜರತ್ ಮೌಲಾನ ಮುಫ್ತಿ ಇಫ್ತಕರ್ ಹಾಗು ನಾನಾ ಭಾಗದಿಂದ ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಡಿಸೆಂಬರ್ 24 ರಂದು ನಡೆಯುವ ಕಾರ್ಯಕ್ರಮದಲ್ಲಿ ಮಹಿಳೆಯರು ಸಹ ಭಾಗವಹಿಸಬಹುದು ಅವರಿಗಾಗಿ ಪ್ರತ್ಯೇಕತೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಮಾನ್ವಿಯ ಮುಸ್ಲಿಂ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ