ಹತ್ತರ ಮಗುವೆ ಎಚ್ಚರವಾಗಿರು…..

ಕಷ್ಟದಿ ಬೆಳೆಸಿರುವ ತಾಯಿಗಾಗಿ ಓದು
ಬೆವರು ಹರಿಸಿ ಓದಿಸಿದ ತಂದೆಗಾಗಿ ಓದು
ಪ್ರೀತಿಯಿಂದ ಹರಸಿ ಹಾರೈಸಿದ ಅಜ್ಜನಿಗಾಗಿ
ಓದು
ಕಥೆ ಹೇಳಿ ಜೋಪಾನ ಮಾಡಿದ ಅಜ್ಜಿಗಾಗಿ
ಓದು
ನಿನಗಾಗಿ ಕಷ್ಟಪಡುವ ಸಹೋದರನಿಗಾಗಿ
ಓದು
ನಿನ್ನ ನೋವು ಆಲಿಸುವ ಸಹೋದರಿಗಾಗಿ ಓದು
ಅಕ್ಷರ ಕಲಿಸುವ ಗುರುವಿಗಾಗಿ ಓದು
ಮಾರ್ಗದರ್ಶನ ಮಾಡಿದ ಮುಖ್ಯ
ಗುರುಗಳಿಗಾಗಿ ಓದು
ಸ್ನೇಹ ಪ್ರೀತಿ ಹಂಚಿಕೊಂಡ ಸಹಪಾಠಿಗಾಗಿ
ಓದು
ಓದಲು ಸ್ಪೂರ್ತಿಯಾದ ಶತ್ರುಗಳಿಗಾಗಿ ಓದು
ನಿನ್ನ ಫಲಿತಾಂಶಕ್ಕಾಗಿ ಕಾದು ಕುಳಿತಿರುವ
ಪತ್ರಿಕೆಗಳಿಗಾಗಿ ಓದು
ನಿನ್ನ ಸಂದರ್ಶನಕ್ಕೆ ತುದಿಗಾಲಲ್ಲಿ ನಿಂತಿರುವ
ಮಾಧ್ಯಮಗಳಿಗಾಗಿ ಓದು
ಫಲಿತಾಂಶದಂದು ಸಿಹಿ ಹಂಚಿ ಸಂಭ್ರಮಿಸುವ
ಸಂಬಂಧಿಕರಿಗಾಗಿ ಓದು
ನಿನ್ನನ್ನೇ ನಂಬಿರುವ ನಿನ್ನ ಆತ್ಮವಿಶ್ವಾಸಕ್ಕಾಗಿ
ಓದು
ನಿಮ್ಮ ಪರೀಕ್ಷೆಗೆ ಶುಭವಾಗಲಿ
ಶ್ರೀ ಮುತ್ತು.ಯ.ವಡ್ಡರ ಶಿಕ್ಷಕರು
ಬಾಗಲಕೋಟ 9845568484