ಕಾವಡಿ ಹೊತ್ತು ಹರಕೆ ತೀರಿಸುತ್ತೇವೆ — ಪಿಚಾಂಡಿ.
ತರೀಕೆರೆ ಆಗಷ್ಟ. 10

ಆಡಿ ಕೃತಿಕ ಶ್ರೀ ಶಿವಸುಬ್ರಮಣ್ಯ ಸ್ವಾಮಿಯ ಜಾತ್ರೆಯು ಪ್ರತಿವರ್ಷ ಆಗಸ್ಟ್ ಮಾಸದಲ್ಲಿ ಬರುತ್ತಿದೆ ಎಂದು ತರೀಕೆರೆ ಇಂದಿರಾನಗರದ ಶ್ರೀ ಗಂಗಮ್ಮ ದೇವಿ ಬೋವಿ ಸಮಾಜದ ಅಧ್ಯಕ್ಷರಾದ ಕೆ ಪಿಚಾಂಡಿ ರವರು ಮಂಗಳವಾರ ನಡೆದ ಆಡಿ ಕೃತಿಕ ಸುಬ್ರಮಣ್ಯ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಜನ ಭಕ್ತರು ಕಾವಡಿ ಹೊತ್ತು ಭಾಗವಹಿಸುತ್ತಿದ್ದು ಈ ಸಂದರ್ಭದಲ್ಲಿ ನನ್ನ ಮಗಳು ಆಶಾ, ಮಗ ನವೀನ, ಮೊಮ್ಮಕ್ಕಳಾದ ನವನೀತ್, ಪ್ರತಾಪ್ ರವರು ಸಹ ಕಾವಡಿ ಹೊತ್ತು ಹರಕೆ ತೀರಿಸುತ್ತಿದ್ದಾರೆ ಎಂದು ಹೇಳಿದರು.
ಶಿವ ಸುಬ್ರಹ್ಮಣ್ಯ ಸ್ವಾಮಿ ಭಕ್ತರಾದ ರಮ್ಯಾ ಮಾತನಾಡಿ ಪ್ರತಿ ವರ್ಷವೂ ಸಹ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಮ್ಮ ಹರಕೆಗಳನ್ನು ತೀರಿಸಲು ನಾನಾ ರೀತಿಯಲ್ಲಿ ಭಾಗವಹಿಸುತ್ತಾರೆ. ದೇಶಾದ್ಯಂತ ಇಂದು ಸುಬ್ರಮಣ್ಯ ಸ್ವಾಮಿಯ ಸನ್ನಿಧಿಗೆ ಭಕ್ತರು ಕಾವಡಿ ಹೊರುವುದು ಸಂಪ್ರದಾಯವಾಗಿದೆ. ಭದ್ರಗಿರಿ ಮತ್ತು ಗುಡ್ಡೆಕಲ್ ನಲ್ಲಿ ನಡೆಯುವ ಜಾತ್ರೆಗೆ ಕಾವಡಿಯೊಂದಿಗೆ ಹೋಗಿ ಹರಕೆ ತೀರಿಸುತ್ತೇವೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು: ಎನ್.ವೆಂಕಟೇಶ.ತರೀಕೆರೆ