“ಅಮ್ಮನ ಪ್ರೀತಿ ಪ್ರಕೃತಿ ರೀತಿ”…..

ಅಮ್ಮನ ಪ್ರೀತಿ ನಿಜ ಸಿರಿ
ಪ್ರಕೃತಿಯ ಸೋಬಗು ಮನದ ಸಿರಿ
ಅಮ್ಮ ಪ್ರಾಣಕ್ಕೆ ಉಸಿರು
ಪ್ರಕೃತಿ ಬದುಕಿಗೆ ಉಸಿರು
ಅಮ್ಮನ ಮಮತೆ ಬೇದ ವಿರದ ಭಾವ
ಪ್ರಕೃತಿಯು ಸರ್ವ ಜೀವಸಂಕುಲ ಸಲಹುವ
ಸುಕೃತಫಲ
ಅಮ್ಮವರ್ಣಿಸಲಾಸಾದ್ಯ ಪದ
ಪ್ರಕೃತಿ ವರ್ಣಿಸಿದಷ್ಟು ಸೋಬಗಿನ ಸಿರಿ
ಅಮ್ಮ ಸಾಕ್ಷಾತ ದೇವರು
ಪ್ರಕೃತಿ ದೇವ ಸೃಷ್ಟಿಸಿದ ದೇಗುಲ ಅಮ್ಮನ
ಪ್ರೀತಿ ಪ್ರಕೃತಿ ರೀತಿ ಪಡೆದ ಜಗದಲಿ ನಾವೇ
ಧನ್ಯರು.