ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರ – ಹುಟ್ಟು ಆಚರಣೆ.
ಬೆಂಗಳೂರು ಡಿ.25

ಇಂದು ಬೆಂಗಳೂರಿನಲ್ಲಿ ಅಜಾತ ಶತ್ರು, ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ರವರ ಹುಟ್ಟು ಹಬ್ಬದ ಪ್ರಯುಕ್ತ, ಕಾವೇರಿ ನಗರದ 9 ನೇ. ಮುಖ್ಯ ರಸ್ತೆಯಲ್ಲಿರುವ ಶ್ರೀ ಅಟಲ್ ಬಿಹಾರಿ ವಾಜಪೇಯಿ ಉದ್ಯಾನ ವನದಲ್ಲಿರುವ ಪುತ್ತಿಳಿಗೆ ಶಾಸಕರು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್ ಅಶೋಕ ರವರು, ರಾಜ್ಯ ಹಿಂದುಳಿದ ವರ್ಗಗಳ ಕೋಶಧ್ಯಕ್ಷರು ಬಿಜೆಪಿ ಹಾಗೂ ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕರಾದ ಶ್ರೀ ಎ.ಹೆಚ್ ಬಸವರಾಜು ರವರು ಪುಷ್ಪಾರ್ಚನೆ ಮಾಡಿದರು, ಈ ಸಂಧರ್ಭದಲ್ಲಿ ಶ್ರೀ ಲಕ್ಷ್ಮಿಕಾಂತ್, ಶ್ರೀ ವೆಂಕಟೇಶ್, ಶ್ರೀ ಸಿ ರವಿ, ಶ್ರೀ ನಾರಾಯಣ ಸ್ವಾಮಿ, ಶ್ರೀ ಪುರುಷೋತ್ತಮ್, ಶ್ರೀ ವೆಂಕಟೇಶ್, ಶ್ರೀ ಮೋಹನ್ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.