ಶಾಲಾ ಎಸ್.ಡಿ.ಎಮ್.ಸಿ ನೂತನ ಅವಿರೋಧವಾಗಿ ಅಧ್ಯಕ್ಷರಾಗಿ ಸೋಮಯ್ಯ.ಪಂ.ಮಠಪತಿ ಉಪಾಧ್ಯಕ್ಷರಾಗಿ ಶ್ರೀಮತಿ ವಿಜಯಲಕ್ಷ್ಮೀ. ಸೋ.ಅವಜಿ ಆಯ್ಕೆ.

ಇಂಡಿ ಆಗಷ್ಟ.23

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿಕೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನೂತನ ಎಸ್.ಡಿ.ಎಮ್.ಸಿ ಸದಸ್ಯರ ಆಯ್ಕೆ ಪ್ರಕ್ರಿಯೆ ಜರುಗಿತು.ಅಧ್ಯಕ್ಷರಾಗಿ ಸೋಮಯ್ಯ.ಪ.ಮಠಪತಿ ಉಪಾಧ್ಯಕ್ಷರಾಗಿ-ವಿಜಯಲಕ್ಷ್ಮೀ .ಸೋ.ಅವಜಿ ಅವಿರೋಧವಾಗಿ ಸವಾ೯ನುಮತದಿಂದ ಆಯ್ಕೆ ಮಾಡಲಾಯಿತು. ಆಯ್ಕೆಯ ನಂತರ ಅಧ್ಯಕ್ಷರಾದ ಸೋಮಯ್ಯ ಮಠಪತಿಯವರು ಮಾತನಾಡಿ-ಜ್ಞಾನದಿಂದಲೇ ಈ ಲೋಕದಲ್ಲಿ ಸುಖ: ಜ್ಞಾನದಿಂದಲೇ ಪರಲೋಕದಲ್ಲಿ ಸದ್ಗತಿ, ಜ್ಞಾನದಿಂದಲೇ ಸಕಲವು ದೊರೆಯುವುದು.ಆ ಜ್ಞಾನವೇ ದೊರೆಯದಿದ್ದರೆ ಜ್ಞಾನವಿಲ್ಲದಿದ್ದರೆ ದೊರೆತ ಸಕಲವು ವ್ಯಥ೯ ಎಂಬಂತೆ ಮನುಷ್ಯನಿಗೆ ಮೊದಲು ಶಾಲೆಯ ಶಾರದಾಂಬೆಯ ಶಿಕ್ಷಣದ ಕೃಪೆ ಅವಶ್ಯಕವಾಗಿದೆ. ಶಾಲೆ ಎಂಬುದು ನಿಜಿ೯ವವಲ್ಲ, ಇದೊಂದು ನಿಜವಾಗಿಯೂ ಜೀವಂತ ದೇವರ ಗುಡಿ ಇಂತಹ ಗುಡಿಯೊಳಗೆ ಆಗಮಿಸುವ ಪ್ರತಿಯೊವ೯ರು ಪಾವನವಂತರು ಇದನ್ನು ಉಳಿಸಿ,ಬೆಳೆಸಿ, ಉತ್ತಮ ರೀತಿಯಲ್ಲಿ ನಾವೇಲ್ಲರು ಕಾಪಾಡಿಕೊಂಡು ಶಾಲೆಯ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿ,ಈ ನಮ್ಮೂರ ಶಾಲೆಯ ಹೆಸರು ಉನ್ನತಿಕರಿಸಲು ಎಲ್ಲರೂ ಸಹಕರಿಸೋಣ ಎಂದು ಹೇಳಿದರು.ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಸಿಧರಾಯ ಐರೋಡಗಿ ಇವರು ಮಾತನಾಡಿ-ಪಾಲಕರ ಸಹಕಾರ ಮಕ್ಕಳ ಭವಿಷ್ಯತ್ತಿಗೆ ಅತ್ಯಾವಶ್ಯಕ.ಪಾಲಕರು ಯಾವೂದೇ ರೀತಿಯ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು.ಅಷ್ಟೇ ಅಲ್ಲದೇ ಯಾರೆ ಯಾಗಲಿ ಶಾಲೆಗಳಲ್ಲಿ ರಾಜಕೀಯ ಮಾಡಬಾರದು .

ಶಾಲೆಗಳಲ್ಲಿ ಶಿಕ್ಷಣಕ್ಕೆ ಮಾತ್ರ ಪ್ರೋತ್ಸಾಹಿಸಬೇಕು.ಶಿಕ್ಷಕರಿಗೆ ಗೌರವ ನೀಡಬೇಕು ,ದೇಶದ ಪ್ರಗತಿಗೆ ಶಿಕ್ಷಕರ ಪಾತ್ರ ಬಹು ಮುಖ್ಯ.ಅದೇ ರೀತಿ ಪಾಲಕರು ಕೂಡಾ ಶಿಕ್ಷಕರೊಂದಿಗೆ ಸೌಜನ್ಯ,ವಿನಯದಿಂದ ಇರಬೇಕು.ಶಾಲಾ ಸುಧಾರಣೆಗೆ ಎಸ್.ಡಿ.ಎಮ್.ಸಿ ಸಮಿತಿಯು ಶಾಲೆಯ ಒಂದು ಅಂಗವಾಗಿ ಕಾಯ೯ನಿವ೯ಹಿಸುತ್ತದೆ.ಅದಕ್ಕಾಗಿ ಪ್ರತಿಯೋವ೯ ಪಾಲಕರು ಶಿಕ್ಷಣದ ಪ್ರಗತಿಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾ.ಪಂ.ಕಾಯ೯ದಶಿ೯ಗಳಾದ ಶ್ರೀ ಸೋಮಣ್ಣ ತೊಂತಾಪೂರ.ಶಾಲೆಯ ಮುಖ್ಯಗುರುಗಳಾದ ಶ್ರೀ ಎಸ್.ಜೆ.ಹಿಳ್ಳಿ. ಶ್ರೀ ಬಿ.ಆಯ್.ಗೊರನಾಳ(ಬಿ.ಆರ್.ಪಿ.ಇಂಡಿ) ಶ್ರೀ.ಎಸ್.ಕೆ.ಇಂಗಳೆ ಸಿ.ಆರ್.ಪಿ.ನಾದ ಕೆಡಿ. ಗ್ರಾಂ.ಪಂ.ಅಧ್ಯಕ್ಷರಾದ ಶ್ರೀ ಸಿಧರಾಯ ಐರೋಡಗಿ. ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಸೋ ಮ್ಯಾಕೇರಿ . ಶ್ರೀ ಪುನೀತಗೌಡ ಅವಜಿ.ನೂತನ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಶ್ರೀ ಸೋಮಯ್ಯ ಮಠಪತಿ.ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ಸೋ ಅವಜಿ.ಸದಸ್ಯರಾದ ಶ್ರೀಮತಿ ಬಂಗಾರೆವ್ವ ಬ ಹರಿಜನ.ಶ್ರೀಮತಿ ಉಮಾಶ್ರೀ ಮಾ ನಾಗರಳ್ಳಿ.ಶಿವಪ್ಪ ಭೀ ಹರಿಜನ.ಅನೀಲ ವಾಲಿಕಾರ ಶ್ರೀ ಮತಿ ರೇಖಾ ಸೈ ಮೂಲಿ.ರಾಮ ದ ಅಂಬಾರೆ.ಶ್ರೀಮತಿ ಅಂಬುಬಾಯಿ ಈ ನರಳೆ.ಶ್ರೀ ಭೀಮಾಶಂಕರ ಚಂ ಘಾಯಿ. ಶ್ರೀ ಫಾತಿಮಾ ರ ಮುಲ್ಲಾ.ಶ್ರೀಮತಿ ಸಾವಿತ್ರಿ ರೇ ಚಿವಟೆ.ಶ್ರೀ ಮಂಜುನಾಥ ಗೋಂದಳಿ.ಸಿದ್ಧಾರಾಮ ಕೊಳ್ಳುರ.ಶ್ರೀ ಸವಿತಾ ಶೀಲವಂತ.ಗಡ್ಡೆಪ್ಪ ಅವಜಿ.ಶ್ರೀ ಬಸವರಾಜ ಬಿರಾದಾರ.ಶ್ರೀ ಶಾರದಾ ಅಂಬಾರಿಗೆ. ಯುವ ನಾಯಕರಾದ ಶ್ರೀ ಬಸವರಾಜ ಅವಜಿ .ಶಾಲಾ ಸಹ ಶಿಕ್ಷಕರಾದ ಶ್ರೀ ಬಿ .ಎಸ್.ವಾಲಿ.ಶ್ರೀ ಬಿ.ಎಸ್.ಪಾಟೀಲ.ಶ್ರೀ ಎ.ಬಿ.ರೇವತಗಾಂವ.ಶ್ರೀ ಎಸ್.ಎಮ್.ಕುಂಬಾರ.ಶ್ರೀಮತಿ ರೂಪಾ ಎಲ್.ಕೆ. ಗ್ರಾಮಸ್ಥರು ನೂತನವಾಗಿ ಆಯ್ಕೆಯಾದ ಎಸ್.ಡಿ.ಎಮ್.ಸಿ.ಸದಸ್ಯರುಗಳಿಗೆ ಶಾಲಾ ಆವರಣದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.

ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button