ಕರ್ನಾಟಕ ರಾಜ್ಯ ರೈತ ಸಂಘ – ಗ್ರಾಮ ಘಟಕ ಉದ್ಘಾಟನೆ.
ಹಿರೇ ಕುಂಬಳಕುಂಟೆ ಡಿ.29

ಕೂಡ್ಲಿಗಿ ತಾಲೂಕಿನ ಹಿರೇ ಕುಂಬಳಗುಂಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ಕರ್ನಾಟಕ ರಾಜ್ಯ ರೈತ ಪಾರ್ಟಿ) ದ ಗ್ರಾಮ ಘಟಕದ ಉದ್ಘಾಟನೆಯು ಈ ದಿನ, ಸಂಘದ ರಾಜ್ಯಾಧ್ಯಕ್ಷೆಯರಾದ ಶ್ರೀಮತಿ ಯಶೋಧಾ ರವರು ಉಪಸ್ಥಿತಿಯಲ್ಲಿ ನೆರವೇರಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಕಕ್ಕುಪ್ಪಿ ಎಂ.ಬಸವರಾಜ್, ಗುಂಡು ಮುಣುಗು ಗುರುಲಿಂಗಪ್ಪ, ಶ್ರೀಮತಿ ಭಾಗ್ಯ, ಎ.ಕೃಷ್ಣ, ಶಾಂತಯ್ಯಸ್ವಾಮಿ ಮತ್ತಿತರರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದ ಕಕ್ಕುಪ್ಪಿ ಎಂ.ಬಸವರಾಜ್ “ರೈತ ಸಂಘದ ಸಂಘಟಿತ ಹೋರಾಟ ದಿಂದ ರೈತರ ಸರ್ವತೋಮುಖ ಅಭಿವೃದ್ಧಿ ಆಗಲಿದೆ. ತಾಲೂಕಿನಲ್ಲಿ ಕೆರೆ ನೀರು ತುಂಬಿಸುವ ಯೋಜನೆ ಬರಲಿಕ್ಕೆ ರೈತ ಸಂಘದ ಅಳಿಲು ಸೇವೆಯು ಸಂದಿದೆ.

ಪ್ರತೀ ಗ್ರಾಮದಲ್ಲೂ ರೈತರು ಸಂಘಟಿತರಾಗ ಬೇಕಿರುವುದು ಈ ಕಾಲದ ತುರ್ತು” ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತಾಡಿದ ಜಿ.ಎಂ ನಾಗರಾಜ್ ಗೌಡ ಹಿರೇ ಕುಂಬಳಗುಂಟೆಗೆ ರೈತ ಸಂಘದ ಮೇರು ವ್ಯಕ್ತಿತ್ವವಾದ ಪ್ರೊ. ಎಂ.ಡಿ ನಂಜುಂಡಸ್ವಾಮಿ ಯವರು ಬಂದದ್ದನ್ನು ಸ್ಮರಿಸಿದರು. ನೀರಾವರಿ ಹೋರಾಟಕ್ಕೆ ಶ್ರಮಿಸಿದ ಶ್ರೀ ಎಚ್.ವಿ ಸಜ್ಜನ್. ಗುರುಸಿದ್ಧನ ಗೌಡರು, ಐಮಡಿ ಶರಣಾರ್ಯರು, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿಯವರನ್ನು ನೆನಪಿಡುವ ನಿಟ್ಟಿನಲ್ಲಿ ಏನಾದರೂ ಮಾಡಬೇಕಿದೆ. ತಾಲೂಕಿನ ಯಾವುದಾದರೂ ಒಂದು ಕೆರೆಗೆ ತೋರಣಗಟ್ಟೆ ತಿಪ್ಪೇಸ್ವಾಮಿ ಯವರ ಹೆಸರನ್ನು ನಾಮಕರಣ ಮಾಡಬೇಕೆಂದು ಹಕ್ಕೊತ್ತಾಯ ಮಾಡಿದರು. ರಾಜ್ಯಾಧ್ಯಕ್ಷೆ ಶ್ರೀಮತಿ ಯಶೋಧಾ ಮಾತಾಡಿ ರೈತ ಮಹಿಳೆಯರು ಟೈಲರಿಂಗ್ ನಂತಹ ಉಪ ಕಸುಬುಗಳನ್ನು ರೂಢಿಸಿ ಕೊಳ್ಳಲು ಸಲಹೆ ನೀಡಿದರು. ಹಾಗೂ ತಮ್ಮ ಸಂಸ್ಥೆಯ ಮೂಲಕ ಗ್ರಾಮದ 500 ಜನ ಮಹಿಳೆಯರಿಗೆ ಶೇಕಡಾ 50% ರ ರಿಯಾಯಿತಿ ದರದಲ್ಲಿ ಹೊಲಿಗೆ ಯಂತ್ರ ನೀಡುವ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಗ್ರಾಮ ಘಟಕದ ಪದಾಧಿಕಾರಿಗಳ ನೇಮಕವು ನಡೆಯಿತು. ಅಧ್ಯಕ್ಷರಾಗಿ ಎಚ್.ಜಿ ಮೂಗನಗೌಡ, ಉಪಾಧ್ಯಕ್ಷರಾಗಿ ಟಿ.ಬಸವರಾಜ್, ಕಾರ್ಯದರ್ಶಿಯಾಗಿ ಕೊಟ್ರೇಶ್ ಹಾಗೂ ಸಂಚಾಲಕರನ್ನಾಗಿ ಡಿ.ಪ್ರಕಾಶ್, ಕಮ್ಮಾರ್ ಪ್ರಕಾಶ್, ತಿಪ್ಪೇಸ್ವಾಮಿ ಡಿ, ಮತ್ತಿತರರನ್ನು ಹೆಸರುಗಳನ್ನು ಘೋಷಿಸಲಾಯಿತು.ಕಾರ್ಯಕ್ರಮದ ನಿರ್ವಹಣೆಯನ್ನು ಟಿ.ಎಸ್ ನಾಗರಾಜ್ ಮಾಡಿದರು. ಕಾರ್ಯಕ್ರಮದಲ್ಲಿ ಎಂ.ಜಂಬನಗೌಡ, ಟಿ.ಬಸವರಾಜ್, ಎಚ್.ಡಿ ಶಿವಕುಮಾರ್, ಡಿ.ಕಲ್ಲಪ್ಪ , ಸಿದ್ದೇಶ್ (ಭಗತ್) ಮತ್ತಿತರರು ಭಾಗವಹಿಸಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ